ಹಾಸನ

ಕಂದಾಯ ಇಲಾಖೆ ಉಪ ತಹಸೀಲ್ದಾರ್ ಮನೆ ಮೇಲೆ ಲೋಕಾ ದಾಳಿ

Published On :

ಕನ್ನಡ .ಪ್ರಭ. ವಾರ್ತೆ ಹಾಸನ ಮೇ 30
ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ಬೆಳ್ಳಂಬೆಳಗೆ ಆಲೂರು ಪಟ್ಟಣದಲ್ಲಿನ ಕಂದಾಯ ಇಲಾಖೆಯ ಉಪ ತಹಸೀಲ್ದಾರ್ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ.  ಲೋಕಾಯುಕ್ತ ಅಧಿಕಾರಿಗಳು ಹೊಂಬೇಗೌಡ ಅವರಿಗೆ ಸೇರಿದ ಹಾಸನ ನಗರದ ಹೇಮಾವತಿನಗರ, ಹೌಸಿಂಗ್ ಬೋರ್ಡ್ ಸೇರಿದಂತೆ ಮೂರು ನಿವಾಸಗಳ ಮೇಲೆ  ಹಾಸನ ಲೋಕಾಯುಕ್ತ ಎಸ್ಪಿ ವೇದಮೂರ್ತಿ ನೇತೃತ್ವದ ತಂಡ ಏಕಕಾಲಕ್ಕೆ ದಾಳಿ ನಡೆಸಿ ಕಡತಗಳನ್ನು ವಶಪಡಿಸಿಕೊಂಡಿದ್ದಾರೆ.
ತನಿಖೆಯ ಸಂದರ್ಭದಲ್ಲಿ ಮಹತ್ವದ ದಾಖಲೆಗಳು ಹಾಗೂ ಹಣ ಸಿಕ್ಕಿದೆ.  ಕಳೆದ ಹಲವು ವರ್ಷಗಳಿಂದ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ಹೊಂಬೇಗೌಡ ಅವರಿಗೆ ಇಬ್ಬರು ಮಕ್ಕಳು ಇದ್ದು, ಅವರು ವಕೀಲರು. ಪತ್ನಿ ರಾಜಮ್ಮ ಪತ್ರ ಬರಹಗಾರರು. 2 ಬೃಹತ್ ಮನೆಗಳು ಹಾಗೂ ನಾಲ್ಕು ಕಾರುಗಳಿವೆ.

ವೇತನಕ್ಕಿಂತ  ಶೇ.115 ಹೆಚ್ಚು ಆಸ್ತಿ ಒಡೆಯ
70 ಲಕ್ಷ ರು. ಮೌಲ್ಯ ಮನೆಗಳು, 8 ಲಕ್ಷ ರು. ಮೌಲ್ಯ 430 ಗ್ರಾಂ ಚಿನ್ನಾಭರಣ, 20 ಸಾವಿರ ರು. ಮೌಲ್ಯದ 700 ಗ್ರಾಂ ಬೆಳ್ಳಿ ಮತ್ತು ನಿವೇಶನಗಳು ಸೇರಿದಂತೆ ಹೊಂಬೇಗೌಡರು 1.35 ಕೋಟಿ ರು. ಆಸ್ತಿ ಹೊಂದಿರುವುದು ತನಿಖೆ ವೇಳೆ ಕಂಡು ಬಂದಿದೆ. ಈ ಆಸ್ತಿ ಹೊಂಬೇಗೌಡರ ವೇತನಕ್ಕಿಂತ ಶೇ. 115 ರಷ್ಟು ಹೆಚ್ಚಾಗಿದೆ ಎಂದು ಎಸ್ಪಿ ವೇದಾಮೂರ್ತಿ ತಿಳಿಸಿದ್ದಾರೆ. ಆದಾಯಕ್ಕಿಂತಲೂ ಹೆಚ್ಚು ಆಸ್ತಿ ಸಂಪಾದನೆ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತರು ದಾಳಿ ನಡೆಸಿ ಕಡತಗಳನ್ನು ವಶಪಡಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ದಾಳಿ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗಳಾದ ನರಸಿಂಹಮೂರ್ತಿ, ಶಾಂತಮೂರ್ತಿ ಸೇರಿದಂತೆ 10 ಸಿಬ್ಬಂದಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.