ಒತ್ತಡದ ಜೀವನದಲ್ಲಿ ನಗು ಮಾಯ
ಗದಗ: ಇಂದಿನ ಒತ್ತಡದ ಜೀವನ ಶೈಲಿಯಲ್ಲಿ ಜನರು ಹೃದಯತುಂಬಿ ನಗುವುದನ್ನೇ ಮರೆತುಬಿಟ್ಟಿದ್ದಾರೆ ಎಂದು ಗದಗದ ಕೆ.ವಿ.ಎಸ್.ಆರ್. ಮಹಾವಿದ್ಯಾಲಯದ ಪ್ರಾಧ್ಯಾಪಕ ಅನಿಲ ವೈದ್ಯ ಕಳವಳ ವ್ಯಕ್ತಪಡಿಸಿದರು.
ಅವರು ಶುಕ್ರವಾರ ತಾಲೂಕಿನ ಬಿಂಕದಕಟ್ಟಿಯಲ್ಲಿ ನಡೆಯುತ್ತಿರುವ ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿಶೇಷ ಶಿಬಿರದಲ್ಲಿ ಭಾಗವಹಿಸಿ ಗ್ರಾಮೀಣ ಪರಿಸರ ಮತ್ತು ಹಾಸ್ಯ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು.
ಜನರ ಸಹಜ ಜೀವನಕ್ರಮದಲ್ಲಿಯೇ ಹಾಸ್ಯದ ಮೂಲ ಅಡಗಿದ್ದು, ಜನರು ಅದನ್ನು ಅರಿತುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಎಂದರು. ಶಿಬಿರದ ಸ್ವಾಮಿ ವಿವೇಕಾನಂದ ತಂಡವು ನಿರ್ವಹಿಸಿದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಂಕದಕಟ್ಟಿ ಗ್ರಾಪಂ ಉಪಾಧ್ಯಕ್ಷೆ ಸುಂದರವ್ವ ಬೇವಿನಕಟ್ಟಿ ವಹಿಸಿದ್ದರು. ಅತಿಥಿಗಳಾಗಿ ಜುಂಜೇಶ ಗೋಡಿ, ಪದ್ಮಾವತಿ ಹುಲ್ಲೋಜಿ, ಮಾಲಾ ಮಕಾಳಿ, ಪ್ರದೀಪ ನಾಯಕ, ಆರ್.ಪಿ. ನದಾಫ, ಮುತ್ತಪ್ಪ ಬದ್ನಿಕಾಯಿ, ಸಾವಂತ ಇದ್ದರು. ಚನ್ನಮ್ಮ ಅಂಗಡಿ ಮತ್ತು ಮಂಜುನಾಥ ಅಂಗಡಿ ನಿರೂಪಿಸಿದರು. ಸುಮನ್ ಜಗತಾಪ ಸ್ವಾಗತಿಸಿ, ರೇಖಾ ಕುಂದಗೋಳ ನಿರೂಪಿಸಿದರು. ತೇಜಸ್ವಿನಿ ದೇಸಾಯಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

