ಮರಳು ಸಾಗಾಟಗಾರರ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಹಾವೇರಿ, ಏ. 1
ಅವೈಜ್ಞಾನಿಕ ಮರಳು ನೀತಿ ಹಾಗೂ ಹೊಸ ಮರಳು ನೀತಿಯನ್ನು ಸಮರ್ಪಕವಾಗಿ ಅರ್ಥೈಸಿಕೊಳ್ಳದ ಸರ್ಕಾರಿ ಅಧಿಕಾರಿಗಳು ಕರ್ತವ್ಯಲೋಪ ಎಸಗಿ ಲಾರಿ ಮಾಲೀಕರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಮರಳು ಸಾಗಾಣಿಕಾ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಮಿಕರು ಸೋಮವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲಾ ಮರಳು ಮಾನಿಟರಿಂಗ್ ಕಮಿಟಿ ಹಾಗೂ ಹಿಂದಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿನಕ್ಕೆ ಒಳಪಟ್ಟಂತೆ ಮರಳು ಸಾಗಾಣಿಕೆ ಕಾರ್ಯದಲ್ಲಿ ಸಾವಿರಾರು ಲಾರಿಗಳು, ಚಾಲಕರು, ಕ್ಲೀನರ್.ಗಳೂ ಹಾಗೂ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದು, 2011ರಿಂದ ಹೊಸ ಮರಳು ನೀತಿ ಜಾರಿಯಾಗಿದೆ. ಅಧಿಕಾರಿಗಳು ಹರಾಜು ಪ್ರಕ್ರಿಯೆ ನಡೆಸುವಲ್ಲಿ ಗುತ್ತಿಗೆದಾರರಿಗೆ ಷರತ್ತುಗಳನ್ನು ವಿಧಿಸಿ ಮರಳು ಸಂಗ್ರಹ ಯಾರ್ಡ್.ನಲ್ಲಿ ಸಂಗ್ರಹಿಸುವಲ್ಲಿ ಹಾಗೂ ಲೋಕೋಪಯೋಗಿ ಇಲಾಖೆ ಮರಳು ಸಾಗಾಣಿಕಾ ಅನುಮತಿ ನೀಡುವಲ್ಲಿ ವಿಫಲರಾಗಿದೆ ಎಂದು ದೂರಿದರು.
ಮೊದಲಿಗೆ ಪ್ರತಿ ಟನ್ ಮರಳಿಗೆ ರು. 30 ರಾಜಧನ ಸಂಗ್ರಹಿಸಲಾಗುತ್ತಿತ್ತು. ಹೊಸ ಮರಳು ನೀತಿ ಜಾರಿಯಾದಾಗಿನಿಂದ ರಾಜಧನದಲ್ಲೂ ವ್ಯತ್ಯಾಸವಾಗಿದ್ದು, ಪ್ರಸ್ತುತ ಜಿಲ್ಲೆಯಲ್ಲಿ ಮರಳು ಸಂಗ್ರಹ ಇಲ್ಲದೇ ಇದ್ದರೂ ಪ್ರತಿ ಟನ್.ಗೆ ರು. 400 ನಿಗದಿಪಡಿಸಿದ್ದರಿಂದ ಮರಳು ಸಾಗಾಣಿಕಾ ಪ್ರಕ್ರಿಯೆಯಲ್ಲಿ ಕಾರ್ಮಿಕರು ತೀವ್ರ ತೊಂದರೆಗೆ ಒಳಗಾಗುತ್ತಿದ್ದಾರೆ. ಇನ್ನೂ ಹತ್ತು ಹಲವಾರು ತಾಂತ್ರಿಕ ತೊಂದರೆಗಳನ್ನು ಲಾರಿ ಮಾಲೀಕರು ಹಾಗೂ ಕಾರ್ಮಿಕರು ಅನುಭವಿಸುತ್ತಿದ್ದು, ಅವುಗಳಿಗೆ ಶಾಶ್ವತ ಪರಿಹಾರ ತೋರುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಜಗದೀಶ ಬೇಟಗೇರಿ, ಮುರಿಗೆಪ್ಪ ನೀರಲಗಿ, ಬಿ.ಬಿ. ಬೆಳಗಾವಪ್ಪ, ಸುಭಾಸ ಮೈಲಾರ, ಚನ್ನಬಸಪ್ಪ ಚಿಕ್ಕಿ, ವಿರೂಪಣ್ಣ ಯಲಿಗಾರ, ರುದ್ರಪ್ಪಾ ಹಾದಿಮನಿ, ಮಾಂತೇಶ ಹುಲ್ಲಾಳ ಮತ್ತಿತರರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

