ಹಾವೇರಿ

ಇಂದು ಉರುಸು, ಖವ್ವಾಲಿ

Published On :

ಹಿರೇಕೆರೂರು: ತಾಲೂಕಿನ ಮಾಸೂರು ಗ್ರಾಮದಲ್ಲಿ ಏ. 4ರಂದು ಭಾವೈಕ್ಯತೆ ಸಂಕೇತವಾದ ಮಹಾಮಹಿಮ ಹಜರತ್ ಮದಾರಶಾವಲಿ (ರಹ) ಸ್ವಾಮೀಗಳ ಉರುಸು ಹಾಗೂ ಖವ್ವಾಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಏ. 3ರಂದು ರಾತ್ರಿ 9ಕ್ಕೆ ಹಜರತ್ ಮದಾರಶಾವಲಿಗಳವರ ಗಲೀಫ್ ಮತ್ತು ಸಂದಲ್ ಅಜಂ ಮಸೀದಿಯಿಂದ ಫಕ್ಕೀರಸ್ವಾಮಿಗಳ ಮೆರವಣಿಗೆಯೊಂದಿಗೆ ದರಗಾ ತಲುಪಿ, ಶ್ರೀಗಳವರ ಗದ್ದುಗೆಗೆ ಗಲೀಫ್ ಮತ್ತು ಸಂದಲ್ ಅರ್ಪಿಸಲಾಯಿತು. 4ರಂದು ಬೆಳಗ್ಗೆಯಿಂದ ಸಂಜೆಯವರೆಗೆ ದರಗಾದಲ್ಲಿ ಫಾತೆಹಾಖ್ವಾನಿ ಜರುಗುವುದು. ರಾತ್ರಿ 10ಕ್ಕೆ ಪ್ರಸಿದ್ಧ ಖವ್ವಾಲರಿಂದ ಖವ್ಹಾಲಿ ಕಾರ್ಯಕ್ರಮ ಜರುಗುವುದು ಎಂದು ದರಗಾ ಕಮಿಟಿ ಅಧ್ಯಕ್ಷ ಅಜಮತ ಉಲ್ಲಾ ಕುಪ್ಪೇಲೂರ, ಉಪಾಧ್ಯಕ್ಷ ರಫೀಕ್ ಗರಡಿಮನಿ, ಕಾರ್ಯದರ್ಶಿ ಸಮಿವುಲ್ಲಾ ಎನ್. ಅನ್ಸಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಳೆ ಮತದಾನ ಜಾಗೃತಿ
ಹಾವೇರಿ:
ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ 18 ಹಾಗೂ ಅದಕ್ಕೂ ಮೇಲ್ಪಟ್ಟ ವಯಸ್ಸಿನ ವಿದ್ಯಾರ್ಥಿ, ವಿದ್ಯಾರ್ಥ್ಥಿನಿಯರಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಲು ಏ. 5 ಹಾಗೂ 6ರಂದು ಸಂಜೆ 4.30ಕ್ಕೆ ದೇವರಾಜ ಅರಸು ಸಭಾ ಭವನದಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಾವೇರಿ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಮತದಾನದ ಮಹತ್ವ ಕುರಿತು ಮಾಹಿತಿ ನೀಡಲಾಗುವುದೆಂದು ತಿಳಿಸಿದ್ದಾರೆ.

ನಾಳೆ ಡಾ, ಜಗಜೀವನರಾಂ ಜಯಂತಿ ಆಚರಣೆ
ಹಾವೇರಿ:
ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ, ಡಾ, ಬಾಬು ಜಗಜೀವನರಾಂ ಅವರ 106ನೇ ಜನ್ಮ ದಿನಾಚರಣೆಯನ್ನು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಏ. 5ರಂದು ಬೆಳಗ್ಗೆ 10.30ಕ್ಕೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸಾಂಕೇತಿವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಸಾರ್ವಜನಿಕರು, ದಲಿತ ಮುಖಂಡರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಬೇಕೆಂದು ಜಿಲ್ಲಾಧಿಕಾರಿ ಕೋರಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ: 668 ವಿದ್ಯಾರ್ಥಿಗಳು ಗೈರು
ಹಾವೇರಿ:
ಜಿಲ್ಲೆಯಲ್ಲಿ ಬುಧವಾರ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಜಿಲ್ಲೆಯ 81 ಪರೀಕ್ಷಾ ಕೇಂದ್ರಗಳಲ್ಲಿ ಸುವ್ಯವಸ್ಥಿತವಾಗಿ ಜರುಗಿರುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಬಿ. ಕೊಡ್ಲಿ ತಿಳಿಸಿದ್ದಾರೆ. ವಿಜ್ಞಾನ ವಿಷಯದ ಕನ್ನಡ ಮಾಧ್ಯಮದ 16,472, ಆಂಗ್ಲ ಮಾಧ್ಯಮದ 1,425 ಹಾಗೂ ಉರ್ದು ಮಾಧ್ಯಮದ 2,154 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 20,051 ವಿದ್ಯಾರ್ಥಿಗಳಲ್ಲಿ 19,383 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 668 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿರುತ್ತಾರೆ. ಜಿಲ್ಲೆಯಲ್ಲಿ ಯಾವುದೇ ಪರೀಕ್ಷಾ ಅಕ್ರಮ ಪ್ರಕರಣಗಳು ಜರುಗಿಲ್ಲ ಹಾಗೂ ಯಾವ ವಿದ್ಯಾರ್ಥಿಯು ಡಿಬಾರ್ ಆಗಿರುವುದಿಲ್ಲ ಎಂದು ತಿಳಿಸಿದ್ದಾರೆ.

ರೈತಸಂಘಕ್ಕೆ ಆಯ್ಕೆ
ಹಾವೇರಿ:
ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆಯ ಹಾವೇರಿ ತಾಲೂಕಿನ ಅಕ್ಕೂರ ಗ್ರಾಮ ಘಟಕದ ಅಧ್ಯಕ್ಷರಾಗಿ ಯಂಕನಗೌಡ ಭೀಮನಗೌಡ ಮರಿಗೌಡ್ರ ಹಾಗೂ ಕಾರ್ಯದರ್ಶಿಯಾಗಿ ಫಕ್ಕೀರಪ್ಪ ಬಸವಣ್ಣೆಪ್ಪ ಮಾಯಪ್ಪನವರ ಅವರನ್ನು ನೇಮಕ ಮಾಡಲಾಗಿದೆ ಎಂದು ಹಾವೇರಿ ತಾಲೂಕು ಘಟಕದ ಅಧ್ಯಕ್ಷ ದಿಳ್ಳೆಪ್ಪ ಮಣ್ಣೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.