ಹಾವೇರಿ

ಕೆಜೆಪಿಗೆ ಗಿರಿಜಾ ಆಯ್ಕೆ

Published On :

ಹಿರೇಕೆರೂರು: ಕರ್ನಾಟಕ ಜನತಾ ಪಕ್ಷದ ನಗರ ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ಗಿರಿಜಾ ಉಮಾಶಂಕರ ಅವರನ್ನು ನೇಮಕ ಮಾಡಲಾಗಿದೆ ಎಂದು ತಾಲೂಕು ಕೆಜೆಪಿ ಅಧ್ಯಕ್ಷ ಮಹೇಶ ಗುಬ್ಬಿ ತಿಳಿಸಿದ್ದಾರೆ.

ನವೋದಯ ಪ್ರವೇಶ ಪರೀಕ್ಷೆ
ಹಾವೇರಿ:
ಹಾನಗಲ್ಲ ಸಮೀಪದ ಮಹಾರಾಜಪೇಟೆ ಜವಾಹರ ನವೋದಯ ವಿದ್ಯಾಲಯದಲ್ಲಿ 2013-14ನೇ ಸಾಲಿಗೆ 9ನೇ ತರಗತಿಯಲ್ಲಿ ಖಾಲಿ ಇರುವ 7 ಸೀಟುಗಳನ್ನು ಪ್ರವೇಶ ಪರೀಕ್ಷೆ ಮೂಲಕ ಭರ್ತಿ ಮಾಡಲಾಗುವುದು. ಮೇ 20ರೊಳಗೆ ಅರ್ಜಿ ಸಲ್ಲಿಸಬೇಕು. 2012-13ನೇ ಸಾಲಿಗೆ ಮಾನ್ಯತೆ ಪಡೆದ ಶಾಲೆಗಳಲ್ಲಿ 8ನೇ ತರಗತಿ ಕಲಿಯುತ್ತಿರುವ ವಿದ್ಯಾರ್ಥಿಗಳು ಅರ್ಹರಾಗಿದ್ದು, ಅರ್ಜಿಗಳನ್ನು ನವೋದಯ ವಿದ್ಯಾಲಯದಿಂದ ಅಥವಾ ವೆಬ್‌ಸೈಟ್‌ನಿಂದ ಉಚಿತವಾಗಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ವಿದ್ಯಾಲಯಕ್ಕೆ ಖುದ್ದಾಗಿ ಸಲ್ಲಿಸಬೇಕು. ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಪರೀಕ್ಷೆ ಬರೆಯಬೇಕು. ಜೂ. 23ರಂದು ಮಹಾರಾಜಪೇಟೆಯ ಜವಾಹರ ನವೋದಯ ವಿದ್ಯಾಲಯದಲ್ಲಿ ಪರೀಕ್ಷೆ ನಡೆಯಲಿದೆ ಎಂದು ಪ್ರಾಚಾರ್ಯೆ ವೈ. ವಲ್ಲಿಯಮ್ಮ ತಿಳಿಸಿದ್ದಾರೆ.

ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ
ಗದಗ:
ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ಹಾಲಸೋಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಅಲ್ಲಿಯ ಫ್ರೆಂಡ್ಸ್ ಕ್ಲಬ್ ರಾಜ್ಯಮಟ್ಟದ ಹೊನಲು-ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಿದೆ. ಏ. 12ರಂದು ಬೆಳಗ್ಗೆ 10 ಗಂಟೆಗೆ ಗ್ರಾಮದ ಗೂಳಿ ಬಸವೇಶ್ವರ ನಗರದ ನಿಂಗಪ್ಪ ಅಳವಂಡಿ ಇವರ ಜಮೀನಿನಲ್ಲಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ಪ್ರಥಮ ಬಹುಮಾನ ರು. 7001, ದ್ವಿತೀಯ ಬಹುಮಾನ 5001, ತೃತೀಯ ಬಹುಮಾನ ರು. 3001, ಚತುರ್ಥ ಬಹುಮಾನ ರು. 1501 ಹಾಗೂ ಆಕರ್ಷಕ ಬಹುಮಾನ ನೀಡಲಾಗುವುದು. ರು. 201 ಪ್ರವೇಶ ಫೀ ನಿಗದಿಪಡಿಸಲಾಗಿದೆ. ಆಸಕ್ತ ತಂಡಗಳು ಮೌನೇಶ-9663157977, ರಂಗಪ್ಪ ಜೊಂಡಿ 8105246360, ಮಂಜು ಆಲೂರ-8880470430, ಶರಣು-880221354, ಸದ್ದಾಂ ದೊಡ್ಡಮನಿ-8861652199 ಇಲ್ಲಿಗೆ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಕಿ ಆಕಸ್ಮಿಕ: 10 ಬಣವೆ ಭಸ್ಮ
ರೋಣ:
ತಾಲೂಕಿನ ಸವಡಿ ಗ್ರಾಮದಲ್ಲಿ ಪ್ರೌಢಶಾಲೆಯ ಹತ್ತಿರ ಬೂದಿಗೇರಿ ರಸ್ತೆಗೆ ಹೊಂದಿಕೊಂಡು ಹಾಕಿದ್ದ 10 ಬಣವೆಗಳಿಗೆ ಶನಿವಾರ ಸಂಜೆ 4.30ರ ಸುಮಾರಿಗೆ ಬೆಂಕಿ ತಗುಲಿ, ಭಸ್ಮವಾಗಿವೆ. ಬೆಂಕಿ ಅವಘಡದಲ್ಲಿ ಎರಡು ಚಕ್ಕಡಿ, ಒಂದು ಸೈಕಲ್ ಕೂಡ ಕರಕಲಾಗಿವೆ. ಒಟ್ಟು ರು. 6 ಲಕ್ಷಕ್ಕೂ ಹೆಚ್ಚು ಹಾನಿ ಅಂದಾಜಿಸಲಾಗಿದೆ.
ಬಣವೆಗಳು ಗ್ರಾಮದ ಮಲ್ಲಪ್ಪ ಹಕ್ಕಿ, ಸುರೇಶ ಯಲಿಗಾರ, ಮಲ್ಲಪ್ಪ ಬಂಕದ, ಕುಬೇರಪ್ಪ ದೇಸಾಯಿ, ಯಲ್ಲಪ್ಪ ಅಕ್ಕಿ ಮತ್ತಿತರ ರೈತರಿಗೆ ಸೇರಿದವು ಎಂದು ತಿಳಿದು ಬಂದಿದೆ. ಸುದ್ದಿ ತಿಳಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸಲು ಸಾಕಷ್ಟು ಶ್ರಮಿಸಬೇಕಾಯಿತು. ಗ್ರಾಮಸ್ಥರು ನೀರಿನ ಅನುಕೂಲ ಕಲ್ಪಿಸಿ ನೆರವಾದರು. ಇದರಿಂದ ಹೆಚ್ಚಿನ ಅನಾಹುತ ತಪ್ಪಿತು.
ಸ್ಥಳಕ್ಕೆ ಕಂದಾಯ ನಿರೀಕ್ಷಕ ಜಿ.ಟಿ. ಕೊಪ್ಪದ, ಗ್ರಾಮ ಲೆಕ್ಕಾಧಿಕಾರಿ ಆರ್.ಸಿ. ಬಾರಕೇರ ಭೇಟಿ ನೀಡಿದ್ದಾರೆ. ಬೆಂಕಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ. ಒಟ್ಟು 10 ಬಣವೆಗಳು, ಎರಡು ಚಕ್ಕಡಿ ಹಾಗೂ ಒಂದು ಸೈಕಲ್ ಸುಟ್ಟು ಹೋಗಿವೆ. ಬೆಂಕಿ ಪೂರ್ಣ ನಂದಿದ ಮೇಲೆ ಹಾನಿಯ ನಿಖರ ಅಂದಾಜು ಮಾಡಲಾಗುವುದು ಎಂದು ಬಾರಕೇರ ತಿಳಿಸಿದರು.

ಇಂದು ಮತದಾನ ಜಾಗೃತಿ
ರಾಣಿಬೆನ್ನೂರು:
ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘಗಳ ಆಶ್ರಯದಲ್ಲಿ ತಾಲೂಕಿನ ಮತದಾರರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಏ. 7ರಂದು ಮುಂಜಾನೆ 10 ಗಂಟೆಗೆ ನಗರದ ಬಸ್ ನಿಲ್ದಾಣ ಹತ್ತಿರವಿರುವ ಕೆಎಲ್‌ಇ ಶಿಕ್ಷಣ ಸಂಸ್ಥೆಯ ರಾಜ-ರಾಜೇಶ್ವರಿ ಕಾಲೇಜಿನಿಂದ ನಗರದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಲಾಗುವುದು. ಮಧ್ಯಾಹ್ನ 11ಕ್ಕೆ ಸ್ಟೇಷನ್ ರಸ್ತೆಯಲ್ಲಿರುವ ನಗರಸಭಾ ಸಭಾ ಭವನದಲ್ಲಿ ಜಾಗೃತಿ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಸಿಡಿಪಿಓ ಸುನಂದಾ ಐಯ್ಯನಗೌಡ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಳೆ ವಿದ್ಯುತ್ ವ್ಯತ್ಯಯ
ರಾಣಿಬೆನ್ನೂರು
: ನಗರದ 220 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್ 5 ಕೈಗಾರಿಕಾ, ಎಫ್ 6 ಮುತ್ಯುಂಜಯ ನಗರ ಹಾಗೂ ಎಫ್ 2 ಶಿದ್ದೇಶ್ವರ ನಗರ, ಎಫ್ 12 ಎಂ.ಜಿ. ರಸ್ತೆ ಮಾರ್ಗಗಳ ವ್ಯಾಪ್ತಿಯಲ್ಲಿ ತುರ್ತು ರೀಪೇರಿ ಇರುವ ಕಾರಣ ಏ. 8ರಂದು ಬೆಲಗ್ಗೆ 10 ಗಂಟೆಯಿಂದ ಸಂಜೆ 6ರ ವರೆಗೆ ಈ ಎಲ್ಲಾ ಮಾರ್ಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ. ಕಾರಣ ನಗರದ ಹಲಗೇರಿ ರಸ್ತೆಯಲ್ಲಿರುವ ಬೀರೇಶ್ವರ ನಗರ, ಈಶ್ವರ ನಗರ, ಉಮಾಶಂಕರ ನಗರ, ವಿದ್ಯಾನಗರ, ಶ್ರೀರಾಮನಗರ, ಇಂಡಸ್ಟ್ರೀಯಲ್ ಏರಿಯಾ, ಅಶೋಕ ನಗರ, ವಾಗೀಶ ನಗರ, ಪಂಪಾನಗರ ಮತ್ತು ಕೊಟ್ಟುರೇಶ್ವರ ನಗರದಲ್ಲಿ ಏ. 8ರಂದು ವಿದ್ಯುತ್ ಸಂಪರ್ಕವಿರುವುದಿಲ್ಲ. ಕಾರಣ ಸಾರ್ವಜನಿಕರು ಸಹಕರಿಸಬೇಕೆಂದು ತಾಲೂಕು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕಾಧಿಕಾರಿ ನಾಗಪ್ಪ ಬೇಳಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.