25ರಂದು ಪಟ್ಟಂಗ-6 ಕಾರ್ಯಕ್ರಮ
ಹಾವೇರಿ: ನಾಡಿನ ಪ್ರಮುಖ ಜನಪದ ಕಲಾವಿದರೊಂದಿಗೆ ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ತಜ್ಞರು ಸಂವಾದ ನಡೆಸುವ ಮೂಲಕ ಜನಪದ ಕಲಾವಿದರ ಬದುಕು-ಬವಣೆ-ಸಾಧನೆ, ಸಾರ್ಥಕತೆಗಳ ಕುರಿತು ಸತ್ವಪೂರ್ಣ ಮಾತುಕತೆ ನಡೆಸಿ ಅದನ್ನು ಆಡಿಯೋ ಹಾಗೂ ವಿಡಿಯೋದಲ್ಲಿ ದಾಖಲಿಸುವ ಯೋಜನೆಗಾಗಿ ತಿಂಗಳ ಅತಿಥಿಯೊಂದಿಗೆ ಪಟ್ಟಂಗ-6 ಎಂಬ ಕಾರ್ಯಕ್ರಮ ಏ. 25ರಂದು ಮಧ್ಯಾಹ್ನ 3ಕ್ಕೆ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಜರುಗಲಿದೆ. ತಿಂಗಳ ಪಟ್ಟಂಗದ ಆರನೇ ಅತಿಥಿಯಾಗಿ ಖ್ಯಾತ ಜನಪದ ಗಾಯಕ ಮತ್ತು ಸಂಶೋಧಕ ಡಾ ಪಿ.ಕೆ. ರಾಜಶೇಖರ ಅವರನ್ನು ಆಹ್ವಾನಿಸಲಾಗಿದೆ. ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಅಂಬಳಿಕೆ ಹಿರಿಯಣ್ಣ ಅವರು ಅಧ್ಯಕ್ಷತೆ ವಹಿಸಲಿದ್ದು, ಕುಲಸಚಿವ ಪ್ರೊ ಸಿ.ಎ. ಸೋಮಶೇಖರಪ್ಪ ಉಪಸ್ಥಿತರಿಸುವರು. ಪ್ರಮುಖ ಕಾರ್ಯಕ್ರಮದಲ್ಲಿ ಅತಿಥಿಯೊಂದಿಗೆ ಪಟ್ಟಂಗದ ಸಂವಾದಲ್ಲಿ ಪಾಲ್ಗೊಳ್ಳಲು ಎಲ್ಲರಿಗೂ ಮುಕ್ತ ಅವಕಾಶವಿದೆ. ಆಸಕ್ತ ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದೆಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಚಿವ ಪ್ರೊ ಸ.ಚಿ. ರಮೇಶ ತಿಳಿಸಿದ್ದಾರೆ.
ಅಕ್ರಮ ಮದ್ಯ ದಾಸ್ತಾನು ಮಾಹಿತಿ ನೀಡಲು ಸಲಹೆ
ಹಾವೇರಿ: ವಿಧಾನಸಭಾ ಸಾರ್ವತ್ರಿಕ ಚುನಾವಣೆ-2013ರ ಹಿನ್ನೆಲೆಯಲ್ಲಿ ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿದ್ದು, ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ, ದಾಸ್ತಾನು, ಕಳ್ಳಭಟ್ಟಿ ಸರಾಯಿ ತಯಾರಿಕೆ ಹಾಗೂ ಮಾರಾಟದ ವಿರುದ್ಧ ಈಗಾಗಲೇ ಅಬಕಾರಿ ಜಾರಿ ಮತ್ತು ಲಾಟರಿನಿಷೇಧ ದಳ ವಿಶೇಷ ಪೊಲೀಸ್ ಠಾಣೆ ಹಾವೇರಿಯಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ. ಸಾರ್ವಜನಿಕ ವಲಯದಲ್ಲಿ ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಕೂಡಲೇ ಪೊಲೀಸ್ ಠಾಣೆ ಅಬಕಾರಿ ಜಾರಿ ಲಾಟರಿ ನಿಷೇಧ ದಳದ ಪೊಲೀಸ್ ಇನ್ಸಪೆಕ್ಟರ್ ಮೊ-94498 85032 ಅಥವಾ ಬೆಳಗಾವಿ ಉತ್ತರ ವಲಯ ಅಬಕಾರಿ ಜಾರಿ ಲಾಟರಿ ನಿಷೇಧ ವಿಭಾಗದ ಪೊಲೀಸ್ ಉಪಾಧೀಕ್ಷಕರ ಮೊ-94498 45028ಗೆ ಮಾಹಿತಿ ನೀಡಲು ಕೋರಲಾಗಿದೆ. ಮಾಹಿತಿ ನೀಡುವವರ ಹೆಸರುಗಳನ್ನು ಗೌಪ್ಯವಾಗಿಡಲಾಗುವುದೆಂದು ಹಾವೇರಿ ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧದಳ ವಿಶೇಷ ಡಾ ಪಿ.ಕೆ. ರಾಜಶೇಖರ ಪಟ್ಟಂಗದ ತಿಂಗಳ ಅತಿಥಿ ಪೊಲೀಸ್ ಠಾಣೆ ಪೊಲೀಸ್ ಇನ್ಸಪೆಕ್ಟರ್ ಅವರು ತಿಳಿಸಿದ್ದಾರೆ.
16ರಂದು ವಿವಿಧ ದೇವರ ಜಾತ್ರೆ
ಸವಣೂರು: ತಾಲೂಕಿನ ಅಲಿಪೂರ ಗ್ರಾಮದ ಶ್ರೀ ದಂಡಿನ ದುರ್ಗಾದೇವಿ ಹಾಗೂ ಶ್ರೀ ಹಿರೇಕೇರಿ ದುರ್ಗಾದೇವಿ ಜಾತ್ರಾ ಮಹೋತ್ಸವ ಮಂಗಳವಾರ ಏ. 16ರಂದು ನೆರವೇರಲಿದೆ. ಕಾರ್ಯಕ್ರಮಗಳ ಅನ್ವಯ ಏ. 16ರಂದು ಬೆಳಗ್ಗೆ ಶ್ರೀ ದೇವಿಯ ಪಲ್ಲಕ್ಕಿ ಉತ್ಸವವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾಧ್ಯ, ವೈಭವಗಳೊಂದಿಗೆ ಕೈಗೊಳ್ಳಲಾಗುತ್ತದೆ. ಬಳಿಕ ಹೋಳಿ ಪೂಜೆ, ಅಭಿಷೇಕ ಕಾರ್ಯಕ್ರಮವಿದೆ. ರಾತ್ರಿ ಭಜನೆ ಹಾಗೂ ಡೊಳ್ಳಿನ ಪದಗಳು ಜರುಗಲಿದೆ. 17ರಂದು ಬೆಳಗ್ಗೆ ಅಗ್ನಿ ಪವಾಡ ನೆರವೇರಲಿದೆ. ಜಾತ್ರಾ ಮಹೋತ್ಸವದಲ್ಲಿ ಸಕಲ ಸದ್ಭಕ್ತರು ಪಾಲ್ಗೊಳ್ಳುವಂತೆ ಗ್ರಾಮಸ್ಥರು ಪ್ರಕಟಣೆಯಲ್ಲಿ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

