ಹಾವೇರಿ

ಸಜ್ಜನರ ಆಸ್ತಿ ರು. 8,74 ಲಕ್ಷ

Published On :

ಬ್ಯಾಡಗಿ: ಬ್ಯಾಡಗಿ ವಿಧಾನಸಭಾ ಕ್ಷೇತ್ರದಿಂದ ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಶಾಸಕ ಶಿವರಾಜ ಸಜ್ಜನರ, ಸ್ಥಿರಾಸ್ತಿ, ಚರಾಸ್ತಿ ಹಾಗೂ ನಗನಾಣ್ಯ ಸೇರಿ ಒಟ್ಟು ಹೊಂದಿರುವ ಆಸ್ತಿ ಮೌಲ್ಯ ರು. 8,74,219 ಮಾತ್ರ.
ಸಜ್ಜನರ ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿರುವ ಆಸ್ತಿ ವಿವರದಿಂದ ತಿಳಿದು ಬರುವ ಮಾಹಿತಿ. ವಿಧಾನಸೌಧ ಶಾಖೆಯ ಎಸ್‌ಬಿಎಂನಲ್ಲಿ ರು. 54 ಸಾವಿರ, ಹಾವೇರಿ ಜಿಲ್ಲೆಯ ದೇವಗಿರಿ ತಾಲೂಕಿನ ಕೆವಿಜಿ ಬ್ಯಾಂಕ್‌ನಲ್ಲಿ ರು. 2096.80, ಎಸ್‌ಬಿಐಎಡಿಬಿ ಬ್ಯಾಂಕ್‌ನಲ್ಲಿ ರು. 80. ಎಕ್ಸಿಸ್ ಬ್ಯಾಂಕ್‌ನಲ್ಲಿ ರು. 1,95,668,03 ಹೊಂದಿದ್ದಾರೆ.
ಪ್ರತಿ ವರ್ಷ ರು. 27,454 ಎಲ್‌ಐಸಿ ವಿಮೆ ಪಾವತಿಸುವ ಸಜ್ಜನರ, ಪತ್ನಿ ಹೇಮಾ ಅವರ ಹೆಸರಿನಲ್ಲಿ ಪ್ರತಿ ವರ್ಷ ಕ್ರಮವಾಗಿ ರು. 4837,349 ಹಾಗೂ 37662 ಪಾವತಿಸುತ್ತಾರೆ. ಅಲ್ಲದೇ, ಪುತ್ರರಾದ ಸಾಗರ ಹಾಗೂ ಶರತ್ ಹೆಸರಿನಲ್ಲಿ ಕ್ರಮವಾಗಿ ರು. 2843, 18133 ಹಾಗೂ ರು. 10609 ಮತ್ತು ರು. 18157. ಎಲ್‌ಐಸಿ ವಿಮೆ ಪಾವತಿಸುತ್ತಾರೆ.
ಸ್ಥಿರಾಸ್ತಿ ವಿವರ: ಹಾವೇರಿ ತಾಲೂಕಿನ ದೇವಗಿರಿ ಗ್ರಾಮದಲ್ಲಿ ರು. 5 ಲಕ್ಷ ಮೌಲ್ಯದ 20 ಎಕರೆ ಕೃಷಿ ಜಮೀನು ಹೊಂದಿರುವ ಸಜ್ಜನರ, ದೇವಗಿರಿ ಗ್ರಾಮದಲ್ಲಿ ರು. 4 ಲಕ್ಷ ಮೌಲ್ಯದ 2 ಗುಂಟೆ ಕೃಷಿಯೇತರ ಜಮೀನು, ಬೆಂಗಳೂರಿನಲ್ಲಿ 10 ಲಕ್ಷ ಮೌಲ್ಯದ ಪ್ಲಾಟ್, ರಾಣಿಬೆನ್ನೂರು ಶಹರದ ಕೆಎಚ್‌ಬಿ ಕಾಲನಿಯಲ್ಲಿ ಪತ್ನಿ ಹೆಸರಿನಲ್ಲಿ 3 ಗುಂಟೆ 9 ಆಣೆ ಪ್ಲಾಟ್, ಪುತ್ರರಾದ ಶರತ ಹಾಗೂ ಸಾಗರ ಹೆಸರಿನಲ್ಲಿ ಕ್ರಮವಾಗಿ ಸಾಮೂಹಿಕ ಖಾತೆಯಲ್ಲಿ ಪ್ಲಾಟ್ ಹೊಂದಿದ್ದಾರೆ. ಅಲ್ಲದೇ, ಪುತ್ರಿ ಗಿರಿಜಮ್ಮ ಹೆಸರಿನಲ್ಲಿ ರಾಣಿಬೆನ್ನೂರು ಶಹರದ ಕೆಎಚ್‌ಬಿ ಕಾಲನಿಯಲ್ಲಿ ರು. 10 ಲಕ್ಷ ಮೌಲ್ಯದ ಪ್ಲಾಟ್ ಹೊಂದಿದ್ದಾರೆ. ಒಟ್ಟು ರು. 5.91 ಲಕ್ಷ. ಸಾಲವನ್ನೂ ಹೊಂದಿರುವ ಬಗ್ಗೆ ಸಜ್ಜನರ ಘೋಷಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.