ಹಾವೇರಿ

ಸುದ್ದಿ ಸಂಕ್ಷೇಪ

Published On :

ಮತದಾರ ಜಾಗೃತಿಗಾಗಿ ಚಿತ್ರಕಲಾ ಶಿಬಿರ
ಹಾವೇರಿ:
  ಮತದಾರರ ಜಾಗೃತಿಗಾಗಿ ಚಿತ್ರಕಲಾವಿದರ ಶಿಬಿರ ಶನಿವಾರ ಹಾವೇರಿಯ ವಾರ್ತಾ ಭವನದಲ್ಲಿ ಜರುಗಿತು. ಭಾರತದ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಹಾಗೂ ಜೇಸೀ ಸಂಸ್ಥೆಯ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಶಿಬಿರವನ್ನು ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ರವಿ ಗುಡಿಸಾಗರ ಉದ್ಘಾಟಿಸಿ, ಚುನಾವಣೆಯಲ್ಲಿ ಸೂಕ್ತ ವ್ಯಕ್ತಿ ಆಯ್ಕೆಗೆ ಚಿತ್ರಕಲಾ ಮಾಧ್ಯಮದ ಮೂಲಕ ಕಲಾವಿದರು ಒತ್ತಾಸೆ ನೀಡಿದರೆ, ಚಿತ್ರಕಲಾ ಪ್ರೇಮಿಗಳು ಆ ಚಿತ್ರಗಳಿಂದ ಪ್ರೇರಿತರಾಗಿ ತಪ್ಪದೆ ಮತದಾನ ಮಾಡಿ, ಸೂಕ್ತ ವ್ಯಕ್ತಿಯ ಆಯ್ಕೆ ಮಾಡಿದಲ್ಲಿ ಕಲಾವಿದರ ಶ್ರಮ ಹಾಗೂ ಶಿಬಿರ ಸಾರ್ಥಕವಾಗುವುದು ಎಂದರು. ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಹಾಗೂ ಜಿಲ್ಲಾ ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತು ಪಾಲ್ಗೊಳ್ಳುವಿಕೆ ಕಾರ್ಯಕ್ರಮ ಅನುಷ್ಠಾನ ಸಮಿತಿಯ ಸದಸ್ಯೆ ಚನ್ನಮ್ಮ ಹೊಳಿಹೊಸೂರ, ಪ್ರಜಾಭುತ್ವ ವ್ಯವಸ್ಥೆಯಲ್ಲಿ ಮತದಾನ ಅತಿ ಮುಖ್ಯ ಹಾಗೂ ಪವಿತ್ರ ಕರ್ತವ್ಯ. ಪ್ರತಿಯೊಬ್ಬ ಮತದಾರರೂ ಹಕ್ಕು ಚಲಾಯಿಸಬೇಕು ಎಂದರು. ಜಿಲ್ಲಾ ಮತದಾರರ ಜಾಗೃತಿ ಕಾರ್ಯಕ್ರಮದ ನೋಡಲ್ ಅಧಿಕಾರಿ ಸಿ.ಪಿ. ಮಾಯಾಚಾರಿ ಮಾತನಾಡಿ, ಚಿತ್ರಕಲಾ ಮಾಧ್ಯಮದ ಮೂಲಕ ಮತದಾನ ಜಾಗೃತಿ ಸಂದೇಶ ಸಾರಲು ಚಿತ್ರಕಲಾವಿದರ ಶಿಬಿರ ಏರ್ಪಡಿಸಲಾಗಿದ್ದು,ನಗರದ ಯುವಜನರು ಹಾಗೂ ಆಸಕ್ತರು ಈ ಚಿತ್ರಕಲಾ ಕೃತಿಗಳನ್ನು ನೋಡಬೇಕು ಎಂದು ವಿನಂತಿಸಿದರು. ಕಾರ್ಯಕ್ರಮದಲ್ಲಿ ಜೇಸಿ ಸಂಸ್ಥೆಯ ಕಾರ್ಯದರ್ಶಿ ಪ್ರೊ೤ ಕೆಂಭಾವಿ ಪಾಲ್ಗೊಂಡಿದ್ದರು. ಶಿಬಿರದಲ್ಲಿ ಅನೇಕ ಚಿತ್ರಕಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಾರ್ತಾ ಇಲಾಖೆಯ ದೇವಕಿ ಶೇರಿ ಪ್ರಾರ್ಥಿಸಿದರು.

ಅಕ್ರಮ ಮದ್ಯ ವಶ
ಹಾವೇರಿ
: ಹಾನಗಲ್ ತಾಲೂಕಿನ ಗುಡ್ಡದಮತ್ತಿಹಳ್ಳಿ ಗ್ರಾಮದ ಶಂಕ್ರಪ್ಪ ಮಲ್ಲಪ್ಪ ಯಲಿಗೊಂಡರ ಎನ್ನುವವರ ಹುಲ್ಲಿನ ಬಣವೆಯಲ್ಲಿ ಶೇಖರಿಸಿಟ್ಟಿದ್ದ 7 ಬಾಕ್ಸ್ ಮದ್ಯವನ್ನು ಹಾನಗಲ್ಲ ತಾಲೂಕಿನ ಅಬಕಾರಿ ನಿರೀಕ್ಷಕರು ದಾಳಿ ನಡೆಸಿ ವಶಪಡಿಸಿಕೊಂಡಿರುತ್ತಾರೆ. ವಶಪಡಿಸಿಕೊಂಡ ಅಕ್ರಮ ಮದ್ಯದ ಒಟ್ಟು ಮೌಲ್ಯ ರು. 25 ಸಾವಿರ ಎಂದು ಅಬಕಾರಿ ಇಲಾಖೆಯ ಜಿಲ್ಲಾ ಅಧೀಕ್ಷಕರಾದ ಸಿ. ನಾಗರಾಜಪ್ಪ ಅವರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ.

ಜಿಲ್ಲೆಗೆ ಸುಧಾ ಪ್ರಥಮ
ಶಿಗ್ಗಾಂವಿ:
ಕ್ಯಾಲಕೊಂಡ ಗ್ರಾಮದ ಸುಧಾ ಶಿವಪ್ಪ ಚೋಟೆಪ್ಪನ್ನವರ  2013-14ನೇ ಸಾಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶೇ. 97ರಷ್ಟು ಅಂಕ ಪಡೆದು ಹಾವೇರಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾಳೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.