ಹಾವೇರಿ

ಕೀಟಬಾಧೆ: ಹತೋಟಿಗೆ ಸಲಹೆ

Published On :

ಹಾವೇರಿ: ಸತತ ಮಳೆಯಾಗುತ್ತಿದ್ದು, ತೇವಾಂಶ ಹೆಚ್ಚಾಗಿ, ಆಮ್ಲಜನಕದ ಕೊರತೆಯಿಂದ ಗೋವಿನಜೋಳದ ಬೆಳೆಯ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿವೆ. ಹತೋಟಿ ಕ್ರಮವಾಗಿ ಬಸಿಗಾಲುವೆ ನಿರ್ಮಿಸಬೇಕು.
ಮಣ್ಣಿನಲ್ಲಿ ಸತು, ರಂಜಕ, ಪೊಟ್ಯಾಷ್ ಮತ್ತು ಲಘು ಪೋಷಕಾಂಶಗಳ ಕೊರತೆಯಿಂದ ಎಲೆಗಳು ಹಳದಿ ಮತ್ತು ಕಂದು ಬಣ್ಣಕ್ಕೆ ತಿರುಗಿ ಬೆಳವಣಿಗೆ ಕುಂಠಿತಗೊಂಡಿದೆ. ಎಲೆ ಮೇಲೆ ತಿಳಿ ಹಳದಿ, ಹಸಿರು ಬಣ್ಣದ ಪಟ್ಟಿಗಳು, ಗೆರೆಗಳು ಕಂಡುಬಂದು ಆಮೇಲೆ ಒಣಗುತ್ತವೆ. ರೈತರು ಲಘು ಪೋಷಕಾಂಶಗಳ ಮಿಶ್ರಣ 2.5 ಗ್ರಾಂ ಪ್ರತಿ ಲೀಟರ್ ನೀರಿಗೆ ಅಥವಾ ಚಿಲೇಟೆಡ್ ಜಿಂಕ್ ಸಲ್ಫೇಟ್ ಮತ್ತು 19:19:19 ಕಾಂಪ್ಲೆಕ್ಸನ್ನು 4-5 ಗ್ರಾಂ ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು.
ಕೇದಿಗೆ ರೋಗದ ಲಕ್ಷಣಗಳಿದ್ದಲ್ಲಿ ರಿಡೋಮಿಲ್ ಎಂ. ಜಡ್. 72 ಡಬ್ಲೂಪಿ 3 ಗ್ರಾಂ ಪ್ರತಿ ಲೀಟರ್ ನೀರಿಗೆ ಅಥವಾ ಡೈಥೇನಿಯಂ 45 (ಮ್ಯಾಂಕೋಜೆಬ್) 2.5 ಗ್ರಾಂಣಲೀ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಕಾಂಡಕೊರಕ ಬಾಧಿತ ಗಿಡಗಳ ಕುಳೆಗಳನ್ನು ಕಿತ್ತು ಸುಡಬೇಕು. ಹತೋಟಿಗಾಗಿ ಕ್ಲೋರೋಫೈರಿಫಾಸ್ 2 ಎಂಎಲ್ ಒಂದು ಲೀಟರ್ ನೀರಿಗೆ ಅಥವಾ ಕಾರ್ಬೋಪ್ಯುರಾನ್ 3 ಜಿ (ಪೋರೆಟ್) 2 ಹರಳನ್ನು ಪ್ರತಿ ಗಿಡದ ಎಲೆಯ ಸುಳಿಯೊಳಗೆ ಹಾಕಬೇಕು.
ಶೇಂಗಾ ಬೆಳೆಯಲ್ಲಿ ಸುರುಳಿ ಪೂಚಿ (ಎಲೆ ಸುರಂಗ ಕೀಟ) ಹಾಗೂ ಎಲೆ ತಿನ್ನುವ ಕೀಟದ ಬಾಧೆ ಕಂಡುಬಂದಿದೆ. ಹತೋಟಿಗಾಗಿ ಮೋನೋಕ್ರೋಟೋಫಾಸ್ ಅಥವಾ ಕ್ವಿನಾಲ್‌ಫಾಸ್ 2 ಎಂ.ಎಲ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. ಎಲೆ ತಿನ್ನುವ ಕೀಟದ ಹಾವಳಿ ಇದ್ದರೆ, ಎಲೆಗಳ ಮೇಲ್ಭಾಗದಲ್ಲಿ ಕೀಟದ ತತ್ತಿಯ ಗುಂಪನ್ನು ಆರಿಸಿ, ಸುಡಬೇಕು.
ಸೋಯಾಬೀನ್: ಸೋಯಾಬೀನ್ ಬೆಳೆಯಲ್ಲಿ ಎಲೆ ತಿನ್ನುವ ಕೀಟದ ಬಾಧೆ ಇದ್ದು, ಹತೋಟಿಗಾಗಿ 1.7 ಮಿಲಿ ಡೈಮಿಥೋಮೇಟ್ ಅಥವಾ 2 ಮಿಲಿ ಕ್ವಿನಾಲ್‌ಪಾಸ್ ಅಥವಾ 2 ಮಿಲಿ ಕ್ಲೋರೋಫರಿಫಾಸ್ ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು.
ಹೈಬ್ರೀಡ್ ಹತ್ತಿ: ಹೈಬ್ರಿಡ್ ಹತ್ತಿ ಬೆಳೆಯಲ್ಲಿ ಥ್ರಿಪ್ಸ್, ಜಿಗಿಹುಳು, ಸಸ್ಯಹೇನು, ಬಿಳಿನೊಣಗಳು ಗಿಡಗಳ ಎಲೆಯಲ್ಲಿ ರಸ ಹೀರುವುದರಿಂದ ಹತ್ತಿ ಬೆಳೆಯ ಎಲೆಗಳು ಮುರುಟುತ್ತಿದ್ದು, ಹತೋಟಿಗೆ 0.20 ಮಿಲಿ ಇಮಿಡಾಕ್ಲೋಪಿಡ್ 200 ಎಸ್.ಎಲ್. ಅಥವಾ 0.20 ಗ್ರಾಂ ಅಸಿಟಾಮಿಪ್ರಿಡ್ 20 ಎಸ್.ಪಿ. ಅಥವಾ 1 ಗಾಂ ಅಸಿಪೇಟ್‌ನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಬೆಳೆಯ ಮೇಲೆ ಸಿಂಪಡಿಸಬೇಕು. ಹತ್ತಿ ಬೆಳೆ 65 ದಿನಗಳ ಹಂತದಲ್ಲಿದ್ದಾಗ ಬಿಟಿ ಹತ್ತಿಯ ಎಲೆಗಳು ಕೆಂಪಾಗುವ ಸಂಭವವಿದ್ದು, ಮ್ಯಾಗ್ನೇಷಿಯಂ ಸಲ್ಫೇಟ್ 10 ಗ್ರಾಂ ಪ್ರತಿ ಲೀ. ನೀರಿಗೆ ಬೆರೆಸಿ ರೈತರು ಸಾಮೂಹಿಕವಾಗಿ ಸಿಂಪರಣೆ ಮಾಡಬೇಕು. ದ್ವಿದಳ ಧಾನ್ಯಗಳ ಬೆಳೆಗಳಲ್ಲಿ ರಸ ಹೀರುವ ಕೀಟ, ಎಲೆ ತಿನ್ನುವ ಹುಳುಗಳ ಬಾಧೆ ನಿಯಂತ್ರಣಕ್ಕಾಗಿ ಮೋನೋಕ್ರೋಟೋಪಾಸ್ 1.3 ಮಿಲಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಔಷಧಿ ಲಭ್ಯ: ತಾಲೂಕಿನ ಹಾವೇರಿ, ಗುತ್ತಲ ಹಾಗೂ ಕರ್ಜಗಿ ರೈತ ಸಂಪರ್ಕ ಕೇಂದ್ರಗಳಲ್ಲಿ ಸಸ್ಯ ಸಂರಕ್ಷಣಾ ಔಷಧಿಗಳಾದ ಇಮಿಡಾಕ್ಲೋಪ್ರೀಡ್, ಮೋನೋಕ್ರೋಟೋಪಾಸ್, ಕ್ಲೋರೋಪೈರಿಫಾಸ್, ಕ್ವಿನಾಲ್‌ಫಾಸ್, ಟ್ರೈಕೋಡರ್ಮಾ, ವ್ಯಾಮ್ ಮತ್ತು ಬೇವಿನ ರಸ, ಲಘು ಪೋಶಕಾಂಶಗಳಾದ ಜಿಪ್ಸಂ, ಜಿಂಕ್, ಬೋರಾನ್ ರಿಯಾಯ್ತಿ ದರದಲ್ಲಿ ಲಭ್ಯ. ಮಾಹಿತಿಗಾಗಿ ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ ಹಾವೇರಿ, ಗುತ್ತಲ ಹಾಗೂ ಕರ್ಜಗಿ - ಸಂಪರ್ಕಿಸಲು ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.