ಹಾವೇರಿ

ಲಾರಿ ಉರುಳಿ ಕಾರ್ಮಿಕ ಸಾವು

Published On :

ಬ್ಯಾಡಗಿ: ಎಲೆಕೋಸು ಸಾಗಿಸುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಅಂಚಿಗೆ ಮಗುಚಿ ಬಿದ್ದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನುಳಿದ 10 ಜನರು ಗಾಯಗೊಂಡ ಘಟನೆ ತಾಲೂಕಿನ ಬಿದರಕಟ್ಟಿ ಕೆರೆಯ ಏರಿ ಮೇಲೆ ಜರುಗಿದೆ.
ಮೃತನನ್ನು ಪಟ್ಟಣದ ವಾಲ್ಮೀಕಿ ಬಡಾವಣೆಯ ನಿವಾಸಿ ಮಾರುತಿ ಯಲ್ಲಪ್ಪ ಗೆಜ್ಜಳ್ಳಿ (23) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ದ್ಯಾಮಪ್ಪ ಭೀಮಪ್ಪ ಕರೂರು, ರಾಜು ಲಕ್ಷಣ ಖಾನಾಪುರ, ಮಲ್ಲೇಶ್ ಈರಪ್ಪ ಕುರ್ತಕೋಟಿ, ಅಜ್ಜಪ್ಪ ಹನುಮಂತಪ್ಪ ಡೊಳ್ಳಿನ, ಚಂದ್ರು ಈರಪ್ಪ ಕೋಡಿಹಳ್ಳಿ, ಕೃಷ್ಣ ಈರಪ್ಪ ತಾಳೂರ, ಮಂಜು ಬಸಪ್ಪ ಹೂಗಾರಗಲ್ಲಿ, ಸೋಮೇಶ್ ದುರ್ಗಪ್ಪ ಕರ್ಚಾಡ, ಬಸವರಾಜ ಫಕ್ಕೀರೇಶ ತೋಟದ, ರಾಜು ಅಜ್ಜಪ್ಪ ತಾಳೂರ ಹಾಗೂ ಚಾಲಕ ದೇವಾಜಿ ಅತಿಯಾಲ ಎಂದು ಗುರುತಿಸಲಾಗಿದೆ. ಇದರಲ್ಲಿ ಐವರ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾವೇರಿ ಹಾಗೂ ದಾವಣಗೆರೆಗೆ ಕಳುಹಿಸಿಕೊಡಲಾಗಿದೆ.
ಗುಜರಾತ್ ರಾಜ್ಯಕ್ಕೆ ಸೇರಿದ ಲಾರಿ ತಾಲೂಕಿನ ಹಿರೇಅಣಜಿ ಗ್ರಾಮದಿಂದ ಎಲೆಕೋಸು ತುಂಬಿಕೊಂಡು ಬ್ಯಾಡಗಿ ಪಟ್ಟಣಕ್ಕೆ ಬರುತ್ತಿತ್ತು, ಕ್ಯಾಬೀಜ ಲೋಡ್ ಮಾಡಲು ಲಾರಿಯಲ್ಲಿ ತೆರಳಿದ್ದ ಹಮಾಲರು ಮರಳಿ ಬರುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.