ಹಾವೇರಿ

ಹಳೆ ಕಂಬ, ತಂತಿ ಬದಲಿಸಿ: ಕರವೇ

Published On :

ಹಿರೇಕೆರೂರು: ಹಳೆಯ ಕಂಬ, ವಿದ್ಯುತ್ ತಂತಿ ಬದಲಾಯಿಸಿ ಸಮರ್ಪಕ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕರವೇ ತಾಲೂಕು ಘಟಕದ ಅಧ್ಯಕ್ಷ ಗಿರೀಶ ಬಾರ್ಕಿ ಮಾತನಾಡಿ, ಹಿರೇಕೆರೂರು 126 ಗ್ರಾಮ ಹೊಂದಿದ ದೊಡ್ಡ ತಾಲೂಕು. ವಿದ್ಯುತ್ ಕಂಬಗಳು ಶಿಥಿಲಾವಸ್ಥೆಗೆ ತಲುಪಿವೆ. ಅವುಗಳಿಗೆ ಜೋಡಿಸಿದ ತಂತಿಗಳೂ ಹಳತಾಗಿದ್ದು, ಜೋತು ಬೀಳುತ್ತಿವೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ಜನತೆ ಭಯದಿಂದ ಜೀವನ ಸಾಗಿಸುವಂತಾಗಿದೆ. ಜನ-ಜಾನುವಾರುಗಳಿಗೆ ತೊಂದರೆ ಆಗದಂತೆ ಕಂಬ, ತಂತಿ ದುರಸ್ತಿಗೊಳಿಸಬೇಕು ಎಂದು ಆಗ್ರಹಿಸಿ, ಮನವಿ ಸಲ್ಲಿಸಿದರು.
ಕರವೇ ವಕ್ತಾರ ಶಿವಾನಂದ ಪೂಜಾರ, ರಟ್ಟಿಹಳ್ಳಿ ಕರವೇ ಅಧ್ಯಕ್ಷ ಮಂಜುನಾಥ ಮುದಿಯಪ್ಪನವರ, ತಾಲೂಕು ಘಟಕದ ಕಾರ್ಯಕರ್ತರಾದ ಮಲ್ಲನಗೌಡ ಪುಟ್ಟಳ್ಳವರ, ಮಲ್ಲಿಕಾರ್ಜುನ ಶಿರಹಟ್ಟಿ, ಹಸನ್ ಸಾಬ ಬಳಿಗಾರ, ಹನುಮಂತಗೌಡ ಹಲಗೇರಿ, ಬಿ.ಎಚ್. ಬಣಕಾರ, ಪ್ರದೀಪ ಬಣಕಾರ, ಕಲ್ಲನಗೌಡ ಕರೇಗೌಡ್ರ, ಮಂಜುನಾಥ ಆರಿಕಟ್ಟಿ, ಬೂದೇಶಿ ಹರಿಜನ, ಬಸವರಾಜ ಹೊಸಕಟ್ಟಿ, ಕಲ್ಲೇಶ ಸುಣಗಾರ, ಗಿರೀಶ ಪಾಟೀಲ, ಪ್ರವೀಣ ಹೊಸಮನಿ, ಮುರಳಿ ಪಾಟೀಲ, ರಾಮಣ್ಣ ಕಡೂರ, ಗಂಗಾಧರ ಮೆಣಸಿನಕಾಯಿ, ಮಲ್ಲೇಶ ಹೊಟ್ಟೇರ, ಈಶ್ವರ ಪುರದಕೇರಿ, ರಾಘು ಉಜ್ಜಪ್ಪಳವರ, ರಮೇಶ ಉಕ್ಕಡಗಾತ್ರಿ, ರಂಗಪ್ಪ ರಟ್ಟಿಹಳ್ಳಿ, ಪ್ರವೀಣ ಜೀನಳ್ಳಿ, ಗಿರೀಶ ಭೋವಿ, ನಾಗರಾಜ, ಮಂಜು ಹಳ್ಳಳ್ಳಿ, ಕರಬಸಪ್ಪ ತೋಟಗಂಟಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.