ದೇಶಸೇವೆ ಮಾಡಿ: ಕೋಳಿವಾಡ
ರಾಣಿಬೆನ್ನೂರು: ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆ ಓದಿ, ಅವರಂತೆಯೇ ದೇಶಸೇವೆಗೆ ಮುಂದಾಗಬೇಕು ಎಂದು ಶಾಸಕ ಕೆ.ಬಿ. ಕೋಳಿವಾಡ ಕರೆ ನೀಡಿದರು.
ಇಲ್ಲಿನ ನಗರಸಭೆ ಕ್ರೀಡಾಂಗಣದಲ್ಲಿ 67ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾರ್ಥಕ್ಕಾಗಿ ಯುವಜನತೆಯನ್ನು ಬಳಸಿಕೊಳ್ಳುತ್ತಿರುವ ದುಷ್ಟಶಕ್ತಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು.
ಧ್ವಜಾರೋಹಣ ಮಾಡಿದ ತಹಸೀಲ್ದಾರ್ ಕೆ.ಎಚ್. ಶಿವಕುಮಾರ್, ದೇಶ ರಕ್ಷಕರಾದ ಪೊಲೀಸರು, ಸೈನಿಕರಿಗೆ, ಅನ್ನದಾತರಾದ ರೈತರಿಗೆ, ಜ್ಞಾನದಾತರಾದ ಶಿಕ್ಷಕರಿಗೆ, ಸಂವಿಧಾನಕ್ಕೆ ಗೌರವ ತೋರಿಸಬೇಕು ಎಂದರು.
ಪೊಲೀಸ್, ಗೃಹರಕ್ಷಕ ದಳ, ಆರ್‌ಟಿಇಎಸ್ ಕಾಲೇಜಿನ ಎನ್‌ಸಿಸಿ ಘಟಕ, ರಾಜರಾಜೇಶ್ವರಿ ಪ್ರೌಢಶಾಲೆ, ಜಗಜ್ಯೋತಿ ಪ್ರೌಢಶಾಲೆ, ಅಂಬೇಡ್ಕರ್ ಪ್ರೌಢಶಾಲೆ, ಓಂ ಪಬ್ಲಿಕ್ ಸ್ಕೂಲ್, ಹೊಸಮನಿ ಸಿದ್ದಪ್ಪ ಪ್ರೌಢಶಾಲೆ, ವೀರಮದಕರಿ ನಾಯಕ ಹೆಣ್ಣುಮಕ್ಕಳ ಪ್ರೌಢಶಾಲೆ ಹಾಗೂ ಅನೇಕ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು, ಕೃಷಿ ಇಲಾಖೆ ಅನುವುದಾರರು ಪಥಸಂಚಲನದಲ್ಲಿ ಪಾಲ್ಗೊಂಡರು. ಶಾಸಕ ಕೆ.ಬಿ. ಕೋಳಿವಾಡ, ತಹಸೀಲ್ದಾರ್ ಕೆ.ಎಚ್. ಶಿವಕುಮಾರ್, ಡಿವೈಎಸ್ಪಿ ಜಯಪ್ರಕಾಶ್, ಪಿಎಸ್‌ಐ ಗೌಡಪ್ಪಗೌಡ್ರ ಧ್ವಜವಂದನೆ ಸ್ವಿಕರಿಸಿದರು. ರೋಟರಿ ಶಾಲೆ ಮಕ್ಕಳು ರೈತಗೀತೆ ಹಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

