ಹಾವೇರಿ

ಭಾಷಾಭಿಮಾನ ಬೆಳೆಸಿಕೊಳ್ಳಿ

Published On :

ರಾಣಿಬೆನ್ನೂರು: ನಾವೆಲ್ಲರೂ ದೇಶಾಭಿಮಾನದ ಜತೆಗೆ ಭಾಷಾಭಿಮಾನ ಬೆಳೆಸಿಕೊಳ್ಳಬೇಕೆಂದು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಿತ್ಯಾನಂದ ಜಿ. ಕುಂದಾಪುರ ಹೇಳಿದರು. ಸ್ವಾಭಿಮಾನಿ ಕರವೇ ಜಿಲ್ಲಾ ಹಾಗೂ ತಾಲೂಕು ಘಟಕ ಹಾಗೂ ವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳ ಸಂಘದ ಆಶ್ರಯದಲ್ಲಿ ತಾಲೂಕಿನ ಕೋಟಿಹಾಳ ಗ್ರಾಮದಲ್ಲಿ ಏರ್ಪಡಿಸಿದ್ದ ಸಂಗೊಳ್ಳಿ ರಾಯಣ್ಣನ 219ನೇ ಜನ್ಮ ದಿನಾಚರಣೆ ಮತ್ತು ಸ್ವಾಭಿಮಾನಿ ಕನ್ನಡಿಗರ ತಾಲೂಕು ಮಟ್ಟದ ಸಮಾವೇಶ ಉದ್ಘಾಟಿಸಿ, 67ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ರಾಜ್ಯದ ಗಡಿ ನಾಡುಗಳಾದ ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರು, ಕಾಸರಗೋಡು, ಬಳ್ಳಾರಿ, ಬೀದರ್, ಮಂಗಳೂರು, ಕಾರವಾರ - ಹೀಗೆ ಎಲ್ಲೆಡೆಯೂ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಸರ್ಕಾರ ಕೂಡಲೇ ಎಲ್ಲ ಕನ್ನಡಿಗರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದರು. ಕೋಟಿಗಾಳ ಗ್ರಾಪಂ ಅಧ್ಯಕ್ಷ ಶಂಭುಲಿಂಗಪ್ಪ ದೊಡ್ಡಗೌಡ್ರ, ವಾಲ್ಮೀಕಿ ಸಂಘದ ಅಧ್ಯಕ್ಷ ಸಿದ್ದಪ್ಪ ಮಾಗೋಡ, ಕಲ್ಲೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಉಪಾಧ್ಯಕ್ಷ ಭರಮಪ್ಪ ಬಣಕಾರ, ಆಲದಮ್ಮ ದೇವಸ್ಥಾನ ಸಮಿತಿ ಹಾಗೂ ಕೋಟಿಹಾಳ ರೈತ ಸಂಘದ ಅಧ್ಯಕ್ಷ ಈರನಗೌಡ ಯಡಚಿ, ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಾಮಪ್ಪ ಗೋದಾಳಿ ಮಾತನಾಡಿದರು. ಜಿಲ್ಲಾ ಸ್ವಾಕರವೇ ಪ್ರಧಾನ ಕಾರ್ಯದರ್ಶಿ ಸಿದ್ಧಾರೂಢ ಗುರಂ, ತಾಲೂಕು ಅಧ್ಯಕ್ಷ ಚಂದ್ರು ಕಡ್ಲಿಗೊಂದಿ, ಪ್ರಧಾನ ಕಾರ್ಯದರ್ಶಿ ಪಾಲಾಕ್ಷಪ್ಪ ಕಡೆಮನಿ, ಕೋಟಿಹಾಳ ಗ್ರಾಮ ಘಟಕದ ಅಧ್ಯಕ್ಷ ಶಿವಶಂಕರಗೌಡ ಪಾಟೀಲ, ಕುಪ್ಪೆಲೂರು ಗ್ರಾಮ ಘಟಕದ ಅಧ್ಯಕ್ಷ ಶಾಮರಡ್ಡಿ, ತುಮ್ಮಿನಕಟ್ಟಿ ಅಧ್ಯಕ್ಷ ಮಡಿವಾಳಪ್ಪ ಮಡಿವಾಳರ, ಪರಸಪ್ಪ ಶೆಟ್ಟೇರ ಇದ್ದರು. ಗ್ರಾಮದಲ್ಲಿ ಭುವನೇಶ್ವರಿ ದೇವಿ, ಭಾರತ ಮಾತೆ ಭಾವಚಿತ್ರಗಳ ಮೆರವಣಿಗೆ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.