ಹೊಸ ನಾಟಕ ಕೃತಿ ಅಗತ್ಯ
ಹಾನಗಲ್ಲ: ಆಧುನಿಕ ಸಂಕೀರ್ಣ ಬದುಕಿನಲ್ಲಿ ಕಾವ್ಯ, ನಾಟಕಗಳು ಸಮಾಜಕ್ಕೆ ಮಾರ್ಗದರ್ಶನ ನೀಡುವ ಶಕ್ತಿಯಾಗಿ ಹೊರಹೊಮ್ಮಬೇಕು. ವೃತ್ತಿ ರಂಗಭೂಮಿಗೆ ಹೊಸ ಹೊಸ ನಾಟಕ ಕೃತಿಗಳ ಅಗತ್ಯವಿದೆ ಎಂದು ಸಾಹಿತಿ ಸತೀಶ ಕುಲಕರ್ಣಿ ಅಭಿಪ್ರಾಯಪಟ್ಟರು.
ಹಾನಗಲ್ಲಿನಲ್ಲಿ ಶನಿವಾರ ಕರ್ನಾಟಕ ಚುಟುಕ ಸಾಹಿತ್ಯ ಪರಿಷತ್ ತಾಲೂಕು ಘಟಕದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು, ಬೀರೇಶ ಬಾಣಿ ಅವರ 'ಧರ್ಮದ ಕೊಲೆ ಅನ್ಯಾಯದ ನೆಲೆ' ನಾಟಕ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಾಹಿತ್ಯ ರಂಜನೆಯ ಜೊತೆಗೆ ಮೌಲ್ಯದ ಪ್ರತಿಪಾದನೆಗೆ ಮುಂದಾಗಬೇಕು. ವೃತ್ತಿ ರಂಗಭೂಮಿಗೆ ಹೊಸ ನಾಟಕಗಳ ಅಗತ್ಯವಿದೆ. ಸಾಹಿತ್ಯ ಒಂದೇ ಮಗ್ಗುಲಲ್ಲಿ ಮುನ್ನಡೆಯುವುದಲ್ಲ. ಸಾಹಿತ್ಯ ವಿಸ್ತಾರ ಪರಿಧಿ ಪಡೆಯಬೇಕು. ಬರವಣಿಗೆ ಬಲಗೊಳ್ಳಬೇಕು ಎಂದರು.
ಸಾಹಿತಿ ಮಾರುತಿ ಶಿಡ್ಲಾಪುರ ಮಾತನಾಡಿ, ಸಾಹಿತ್ಯ ಚಟುವಟಿಕೆ ಸಾಂಸ್ಕೃತಿಕ ಜೀವಂತಿಕೆಯಾಗಿವೆ. ಹಣ-ಅಧಿಕಾರ ಲಾಭಕ್ಕಾಗಿ ಸಾಹಿತ್ಯವಲ್ಲ, ಸುಂದರ ಬದುಕು ರೂಪಿಸಿಕೊಳ್ಳಲು ಬೇಕಾಗುವ ಹೆಗ್ಗಳಿಕೆಯ ಮಾರ್ಗದರ್ಶನ ಕಾವ್ಯ. ಸಾಹಿತ್ಯ ಸಂಘಟನೆಗಳ ಸಂಖ್ಯೆ ಹೆಚ್ಚಿದಂತೆ ಸಾಂಸ್ಕೃತಿಕ ಚಟುವಟಿಕೆಗೆ ಒತ್ತು ಸಿಗುತ್ತದೆ. ಯುವಕರನ್ನು ಕಾವ್ಯ ಕ್ಷೇತ್ರದಲ್ಲಿ ಒಗ್ಗೂಡಿಸುವ ಕಾರ್ಯ ನಡೆಯಬೇಕು ಎಂದರು.
ಸ್ನೇಹಾ ಮಹಿಳಾ ಸಮಾಜದ ಅಧ್ಯಕ್ಷೆ ಮಧುಮತಿ ಪೂಜಾರ ಕರ್ನಾಟಕ ಚುಟುಕ ಸಾಹಿತ್ಯ ಪರಿಷತ್‌ನ ತಾಲೂಕು ಘಟಕವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಘಟಕದ ಅಧ್ಯಕ್ಷೆ ಮಂಜುಳಾ ನಾಮದೇವ, ಕನ್ನಡ ಸಾಹಿತ್ಯದ ಸೇವೆಯ ಸದವಕಾಶ ಸಿಕ್ಕಿರುವುದು ನನ್ನ ಪುಣ್ಯ. ಕನ್ನಡ ಸಾಹಿತ್ಯದ ಕೆಲಸವನ್ನು ಬರಿ ಪಟ್ಟಣಗಳಿಗೆ ಸೀಮಿತಗೊಳಿಸದೇ ಗ್ರಾಮೀಣ ಕ್ಷೇತ್ರಕ್ಕೂ ಕೊಂಡೊಯ್ಯುವ ಹಂಬಲ ತಮ್ಮದು ಎಂದರು.
ಸಾಹಿತಿ ವಿಜಯಕಾಂತ ಪಾಟೀಲ್, ಪ್ರಾಚಾರ್ಯ ಪ್ರಸನ್ನಕುಮಾರ ಮೈಸೂರು, ಕಸಾಪ ತಾಲೂಕು ಘಟಕದ ಅಧ್ಯಕ್ಷ ವಿ.ಜಿ. ಶಾಂತಪುರಮಠ, ನಾಟಕ ಕೃತಿಕಾರ ಬೀರೇಶ ಬಾಣಿ ಇದ್ದರು. ಸೌಭಾಗ್ಯ ಸಂಗಡಿಗರು ಪ್ರಾರ್ಥಿಸಿದರು. ಎಲ್.ಎಲ್. ಪಾಟೀಲ್ ಸ್ವಾಗತಿಸಿದರು. ಟಿಪ್ಪುಸುಲ್ತಾನ್ ನಾಯಕವಾಡಿ ಕಾರ್ಯಕ್ರಮ ನಿರೂಪಿಸಿದರು. ಕವಿ ಅಶೋಕ ಕೊಂಡ್ಲಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

