ನೂರು ಮಾತು ಬಿಂಬಿಸುವ ಹಾಡು
ಹಾನಗಲ್ಲ: ನಮ್ಮೊಳಗಿನ ನೂರು ಮಾತುಗಳನ್ನು ಒಂದೇ ಹಾಡಿನಲ್ಲಿ ಬಿಂಬಿಸುವ ಶಕ್ತಿ ಜನಪದಕ್ಕಿದೆ. ಟೀವಿ ಕಾಲದಲ್ಲಿ ಜನಪದ ಸಾಹಿತ್ಯ ಗುಡ್ಡ ಬೆಟ್ಟ ಸೇರುವಂತಾಗಬಾರದು ಎಂದು ಜನಪದ ಹಾಡುಗಳ ಮೂಲಕ ಜನಮನದ ಹೃದಯ ಗೆದ್ದ ಕಲಾವಿದ ಫಕ್ಕೀರಪ್ಪ ಜೋಗಿ ಹೇಳಿದರು.
ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ 'ನಮ್ಮ ಜನಪದ ಹಾಡುಗಳು' ಕಾರ್ಯಕ್ರಮದಲ್ಲಿ ಶಿರಸಿ ತಾಲೂಕಿನ ಬನವಾಸಿಯ ಫಕ್ಕೀರಪ್ಪ ಜೋಗಿ ಭಕ್ತಿಗೀತೆ, ಜನಪದ ಹಾಡು, ಕಿನ್ನರಜೋಗಿ, ಶಿಶುವಿನಹಾಳ ಶರೀಫ ಶಿವಯೋಗಿಗಳ ರಚನೆಗಳನ್ನು ಹಾಡಿದರು. ಲಾವಣಿ ತ್ರಿಪದಿಗಳು ಸಹೃದಯರ ಮನ ಗೆದ್ದವು.
ಸಾಹಿತಿ ಪ್ರೊ ಮಾರುತಿ ಶಿಡ್ಲಾಪುರ ಮಾತನಾಡಿ, ನಮ್ಮೊಳಗಿನ ಆಗುಹೋಗುಗಳ ಆಂತರ್ಯವನ್ನು ಬಿಚ್ಚಿಡುವ ಜನಪದ ಸಾಹಿತ್ಯ ಸಹಜವಾಗಿಯೇ ನಮ್ಮ ಹಾಡುಗಳಾಗುತ್ತವೆ. ಅತ್ಯಂತ ಸರಳ, ಸುಲಭ ಹಾಗೂ ರಸವತ್ತಾಗಿ ನಮ್ಮ ಬದುಕಿನ ವಿವಿಧ ಮಜಲುಗಳನ್ನು ತೆರೆದಿಡುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಸಿ. ಪೀರಜಾದೆ , ಜನಪದ ಸಂಸ್ಕೃತಿ ಪುನರುತ್ಥಾನಗೊಳಿಸುವ, ಜನಪದ ಕಲಾವಿದರನ್ನು ಪ್ರೋತ್ಸಾಹಿಸವ ಅಗತ್ಯವಿದೆ. ಈ ಮೂಲಕ ಜನಪದ ಸಂಸ್ಕೃತಿ ಮತ್ತೆ ನಮ್ಮದಾಗಬೇಕು ಎಂದರು.
ಉಪನ್ಯಾಸಕರಾದ ಎಸ್.ಬಿ. ಕಮಾಟಿ, ಟಿ. ಈಶ್ವರ, ರಶ್ಮಿ, ವಿ.ಯು. ಪಾಟೀಲ, ವೀಣಾ ದೇವರಗುಡಿ, ಹೊನ್ನತ್ತಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

