ಸೋಲು ಗೆಲುವಿನ ಸೋಪಾನ: ಅಡಿಗ
ಹಾವೇರಿ: ಕ್ರೀಡಾಪಟುಗಳು ಸೋಲು-ಗೆಲುವು ಎಂಬ ಪ್ರತಿಫಲವನ್ನು ಅಪೇಕ್ಷಿಸದೇ ಕ್ರೀಡಾ ಮನೋಭಾವನೆ ಮೂಲಕ ಕ್ರೀಡೆಯಲ್ಲಿ ಭಾಗವಹಿಸಿ ತಮ್ಮ ಸಾಮರ್ಥ್ಯ ವ್ಯಕ್ತಪಡಿಸಬೇಕೆಂದು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಸ್.ಎಸ್. ಅಡಿಗ ಹೇಳಿದರು.
ಅವರು ಕರ್ನಾಟಕ ಜಿಲ್ಲಾ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಹಾಗೂ ತಾಪಂ ಹಾವೇರಿ ಇವರ ಆಶ್ರಯದಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಹಾಗೂ ಪಂಚಾಯತ್ ಖೇಲ್ ಅಭಿಯಾನ ಕ್ರೀಡಾಕೂಟಕ್ಕೆ ಧ್ವಜಾರೋಹಣ ನೆರವೇರಿಸಿ, ಚಾಲನೆ ನೀಡಿ ಮಾತನಾಡಿದರು.
ಅತಿಥಿಗಳಾಗಿದ್ದ ಜಯ ಕರ್ನಾಟಕ ಅಧ್ಯಕ್ಷ ರಮೇಶ ಆನವಟ್ಟಿ, ಕ್ರೀಡಾಪಟುಗಳು ಕ್ರೀಡೆಯಲ್ಲಿ ಶಿಸ್ತು, ಪ್ರಾಮಾಣಿಕತೆ ಹಾಗೂ ಸಮಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ಎಲ್ಲರೂ ಕ್ರೀಡಾ ಮನೋಭಾವನೆಯಿಂದ ಭಾಗವಹಿಸಬೇಕೆಂದು ಕರೆ ನೀಡಿದರು.
ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವೈ. ಮುತ್ತು ಕಾಮಾಚ್ಚಿ, ಕ್ರೀಡೆಯೆನ್ನುವುದು ಒಂದು ದೇಶದ ಪ್ರತಿಷ್ಠೆಯಾಗಿದೆ. ಅದನ್ನು ಬೆಳೆಸಲು ಕ್ರೀಡಾಪಟುಗಳು ಹಾಗೂ ತರಬೇತಿದಾರರೂ ನೇರವಾಗಬೇಕೆಂದರು.
ಅತಿಥಿಗಳಾಗಿ ಬ್ಯಾಡ್ಮಿಂಟನ್ ಸಂಸ್ಥೆ ಕಾರ್ಯದರ್ಶಿ ಶಿವರಾಜ ಮರ್ತೂರ, ಜಿಲ್ಲಾ ಹಾಕಿ ಅಸೋಶಿಸಿಯನ್ ಕಾರ್ಯದರ್ಶಿ ರಮೇಶ ಆನವಟ್ಟಿ, ಹ್ಯಾಂಡ್ಬಾಲ್ ಕಾರ್ಯದರ್ಶಿಗಳಾದ ಪ್ರಭು ಹಿಟ್ನಳ್ಳಿ, ದೈಹಿಕ ಶಿಕ್ಷಕ ಎಂ.ಎಸ್. ಮರಿಗೌಡರ, ವಾಲಿಬಾಲ್ ತರಬೇತಿದಾರ ಜಮಾಅಹ್ಮದ್, ತಾಪಂ ಕ್ರೀಡಾಧಿಕಾರಿಗಳಾದ ಸುರೇಖಾ ನಿರಲೇಕರ, ಮಹಿಳಾ ನಾಗರಿಕ ವೇದಿಕೆಯ ಅಧ್ಯಕ್ಷರಾದ ರಾಜೇಶ್ವರಿ ಬೀಷ್ಠನಗೌಡರ, ಮೂಡಣ ದಿನಪತ್ರಿಕೆ ಉಪಸಂಪಾದಕರಾದ ತೇಜಶ್ವಿನಿ ಕಾಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಪ್ರತಿನಿಧಿಗಳಾದ ಭಾರತಿ ಯಾವಗಲ್ ಆಗಮಿಸಿದ್ದರು.
ಕ್ರೀಡಾ ನಿಲಯದ ಗೌರವ ಶಿಕ್ಷಕರಾದ ಬಸವರಾಜ ಕರಿಸಣ್ಣವರ ನಿರೂಪಿಸಿದರು. ಅಥ್ಲೇಟಿಕ್ ತರಬೇತಿದಾರರಾದ ಶಿವರಾಜ ಗುಂಡೆ ಸ್ವಾಗತಿಸಿದರು. ದೈಹಿಕ ಶಿಕ್ಷಕರಾದ ಅರುಣ ಕಾಳಪ್ಪನವರ ವಂದನಾರ್ಪಣೆ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

