ರು. 5 ಲಕ್ಷದ ಚಿನ್ನಾಭರಣ ವಶ
ಹಾವೇರಿ: ನಗರದ ವಿವಿಧೆಡೆ ಮನೆಗಳ್ಳತನ ನಡೆಸಿದ್ದ ಆರೋಪಿಗಳನ್ನು ಈಚೆಗೆ ಬಂಧಿಸಿದ್ದ ಪೊಲೀಸರು ವಿಚಾರಣೆ ನಡೆಸಿ ಅವರು ಕದ್ದಿದ್ದ ರು. 5 ಲಕ್ಷ ಮೌಲ್ಯದ 16 ತೊಲೆ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಗುರುವಾರ ನಗರ ಠಾಣೆಯಲ್ಲಿ ಎಎಸ್ಪಿ ಎಸ್.ಡಿ. ಜಗಮೈನವರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಆರೋಪಿಗಳಿಂದ ವಶಪಡಿಸಿಕೊಂಡ ಚಿನ್ನಾಭರಣಗಳನ್ನು ಪ್ರದರ್ಶಿಸಿ ಮಾಹಿತಿ ನೀಡಿದರು. ಡಿ. 3ರಂದು ಕಳ್ಳತನಕ್ಕೆ ಸಂಬಂಧಿಸಿದ 7 ಆರೋಪಿಗಳನ್ನು ಬಂಧಿಸಲಾಗಿತ್ತು. ಆ ಪೈಕಿ ವಾಸುದೇವ ಚವ್ಹಾಣ, ರವಿ ಶಾಂಡಗಿ, ನಾಗನಗೌಡ ಸಿದ್ದನಗೌಡ್ರ ಹಾಗೂ ಚನ್ನವೀರಗೌಡ ಹೊಸಗೌಡ್ರ ಎಂಬುವರ ವಿಚಾರಣೆ ನಡೆಸಲಾಗಿದೆ. ಅವರು ಹಾವೇರಿ ಗ್ರಾಮೀಣ ಠಾಣೆ ವ್ಯಾಪ್ತಿಯ ದಿಡಗೂರು ಗ್ರಾಮದಲ್ಲಿ ಕೀಲಿ ಹಾಕಿದ್ದ ಎರಡು ಮನೆಗಳಲ್ಲಿ, ಹಾವೇರಿ ನಗರ ವ್ಯಾಪ್ತಿಯ ಶಿವಬಸವನಗರದ ಚನ್ನಬಸವಣ್ಣ ಎಂಬವರ ಮನೆ ಬಾಗಿಲಿನ ಕೀಲಿ ಮುರಿದು ಚಿನ್ನಾಭರಣ ಕಳವು ಮಾಡಿದ್ದರು. ಬಸವೇಶ್ವರನಗರದ ತೇಜಸ್ವಿನಿ ಕಾಶೆಟ್ಟಿ ಎಂಬವರ ಮಾಂಗಲ್ಯದ ಸರವನ್ನು ಅಪಹರಿಸಿದ್ದರು. ದಾನೇಶ್ವರಿ ನಗರದಲ್ಲಿ ಒಂದು ಬೈಕ್ ಕದ್ದಿದ್ದರು. ವಿಚಾರಣೆ ವೇಳೆ ಅವರು ನೀಡಿದ ಮಾಹಿತಿ ಆಧರಿಸಿ, ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಹಾವೇರಿ ನಗರಠಾಣೆ ಸಿಪಿಐ ಸಂತೋಷ ಪವಾರ್, ಪಿಎಸ್ಐಗಳಾದ ಬಿ.ಕೆ. ಗಣಪತಿ, ಮಹಾಂತೇಶ ಲಂಬಿ, ಎಎಸ್ಐ ಕುಲಕರ್ಣಿ ಸುತ್ತಕೋಟಿ, ಸಿಬ್ಬಂದಿ ಎಸ್.ಡಿ. ಸಾಗರ, ಎಲ್.ಎನ್. ಅಣ್ಣಿಗೇರಿ, ಜಿ.ಜಿ. ಅಶೋಕ, ಸುರೇಶ ನಾಯಕ, ಯಲ್ಲಪ್ಪ ತಹಶೀಲ್ದಾರ, ಸಿ.ಎಂ. ಕಿಳ್ಳಿ, ವಿಶ್ವನಾಥ ನಾಯಕ, ಸುಧೀರ ನಾಯಕ, ಲೋಕನಾಥ ಪಸಗಿ ಸಾಹಸಕ್ಕೆ ಹೆಚ್ಚುವರಿ ಎಸ್ಪಿ ಜಗಮೈನವರ್ ಮೆಚ್ಚುಗೆ ವ್ಯಕ್ತಪಡಿಸಿದರು. ಡಿಎಸ್ಪಿ ಬಿ.ಎನ್. ಅಂಬಿಗೇರ, ಸಿಪಿಐ ಸಂತೋಷ ಪವಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

