ಹಾವೇರಿ

ಪಿಡಿಒ ಅಮಾನತಿಗೆ ಆಗ್ರಹ

Published On :

ಶಿಗ್ಗಾಂವಿ: ಸರ್ಕಾರದ ನಿಯಮಾವಳಿ ಗಾಳಿಗೆ ತೂರಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿಯ ಅಮಾನತಿಗೆ ಆಗ್ರಹಿಸಿ ತಾಲೂಕಿನ ಮಡ್ಲಿ ಗ್ರಾಪಂ ಸದಸ್ಯರು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ.  ಪಾಟೀಲ, ತಾಪಂ ಹಾಗೂ ಜಿಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಮಡ್ಲಿ ಗ್ರಾಪಂ ಪಿಡಿಒ ಸರ್ವಾಧಿಕಾರ ಪ್ರದರ್ಶಿಸಿದ್ದಾರೆ. ಸದಸ್ಯರನ್ನು ಪರಿಗಣಿಸದೆ, ರಾಜಕೀಯ ಮುಖಂಡರನ್ನು ಕರೆಸಿಕೊಂಡು ಗ್ರಾಮಸಭೆ ನಡೆಸಿದ್ದಾರೆ. ಸೆ. 28ರಂದು ಕರೆದಿದ್ದ ವಿಶೇಷ ಗ್ರಾಮಸಭೆಯಲ್ಲಿ ಬಸವ ಹಾಗೂ ಇಂದಿರಾ ಆವಾಸ್ ಯೋಜನೆ ಫಲಾನುಭವಿಗಳ ಆಯ್ಕೆ ಪ್ರಸ್ತಾವನೆ ಮಾಡಲಿಲ್ಲ. ನ. 27ರಂದು ತರಾತುರಿಯಲ್ಲಿ ಗ್ರಾಮಸಭೆ ಕರೆದಿದ್ದರು. ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರಿಗೆ ನಿಯಮಾನುಸಾರ 7 ದಿನ ಮುಂಚಿತವಾಗಿ ನೋಟಿಸ್ ನೀಡಿಲ್ಲ. ಗ್ರಾಪಂ ಸದಸ್ಯರ ಅಭಿಪ್ರಾಯ ಪರಿಗಣಿಸದೆ, ಗ್ರಾಮದಲ್ಲಿ ಡಂಗೂರ ಸಾರದೆ, ಸೂಚನಾ ಫಲಕಕ್ಕೆ ನೋಟಿಸ್ ಲಗತ್ತಿಸದೆ ಸಭೆ ನಡೆಸಿದ್ದಾರೆ. ಎರಡು ದಿನ ಬಾಕಿ ಇರುವಂತೆ ನ. 25ರಂದು ನೆಟಿಸ್ ನೀಡಿದ್ದಾರೆ. ಬೇಸತ್ತಿರುವ ತಾವು ರಾಜಿನಾಮೆ ಸಲ್ಲಿಸುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ. ಕ್ರಮಬದ್ಧವಾಗಿ ಗ್ರಾಮಸಭೆ ನಡೆಸಲು ಅವಕಾಶ ಕಲ್ಪಿಸಬೇಕು. ಪಿಡಿಒ ಅಮಾನತು ಮಾಡಬೇಕೆಂದು ಆಗ್ರಹಿಸಿದ್ದಾರೆ. ಮಡ್ಲಿ ಗ್ರಾಪಂ ಅಧ್ಯಕ್ಷೆ ಶಿವಲೀಲಾ ವಾಲೀಕಾರ, ಉಪಾಧ್ಯಕ್ಷೆ ಅನಸವ್ವ ಓಲೇಕಾರ, ಸದಸ್ಯರಾದ ಎಲ್ಲಪ್ಪಗೌಡ ಪಾಟೀಲ, ಮೈಲಾರೆಪ್ಪ ಹರಿಜನ ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.