ಕೆಡಿಪಿ ಸಭೆ ಮುಂದೂಡಿಕೆ
ಹಾವೇರಿ: ಡಿ. 13ರಂದು ಜರುಗಬೇಕಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯನ್ನು ಮುಂದೂಡಲಾಗಿದೆ. ಡಿ. 18ರಂದು ಮಧ್ಯಾಹ್ನ 12 ಗಂಟೆಗೆ ಜಿಪಂ ಸಭಾಂಗಣದಲ್ಲಿ ಸಭೆ ಜರುಗಲಿದೆ ಎಂದು ಜಿಪಂ ಸಿಇಒ ಕೆ.ಬಿ. ಅಂಜನಪ್ಪ ತಿಳಿಸಿದ್ದಾರೆ.
ಪ್ರತಿಭಾ ಕಾರಂಜಿ ಇಂದು
ಹಾವೇರಿ: ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಪಂ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ಹಾವೇರಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸಾಂಸ್ಕೃತಿಕ, ಶೈಕ್ಷಣಿಕ ಸ್ಪರ್ಧೆಗಳು ಡಿ. 13 ಹಾಗೂ 14ರಂದು ನಗರದ ಚನ್ನಬಸಪ್ಪ ಮಾಗಾವಿ ಪ್ರೌಢಶಾಲೆಯಲ್ಲಿ ನಡೆಯಲಿವೆ. ಡಿ. 13ರಂದು ಬೆಳಗ್ಗೆ 10 ಗಂಟೆಗೆ ಶಾಸಕ ಬಸವರಾಜ ಶಿವಣ್ಣನವರ ಉದ್ಘಾಟಿಸುವರು. ಶಾಸಕ ರುದ್ರಪ್ಪ ಲಮಾಣಿ ಅಧ್ಯಕ್ಷತೆ ವಹಿಸುವರು. ಸಂಸದ ಶಿವಕುಮಾರ ಉದಾಸಿ ಪಾಲ್ಗೊಳ್ಳುವರು. ಡಿ. 13ರಂದು 8ರಿಂದ 10ನೇ ತರಗತಿಗಳ, ಡಿ. 14ರಂದು 1 ರಿಂದ 7ನೇ ತರಗತಿಗಳ ಸ್ಪರ್ಧೆಗಳು ಜರುಗಲಿವೆ.
ಇಂದು ವಿದ್ಯುತ್ ವ್ಯತ್ಯಯ
ಹಾವೇರಿ: ಹಾವೇರಿಯಿಂದ ಹೊರಡುವ ಎಪಿಎಂಸಿ, ಹುಕ್ಕೇರಿಮಠ, ಕರ್ಜಗಿ ಎಕ್ಸ್ಪ್ರೆಸ್, ಅಗಡಿ, ಕರ್ಜಗಿ ರೂರಲ್, ಕುರುಬಗೊಂಡ, ದೇವಿಹೊಸೂರ ಫೀಡರ್ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಡಿ. 13ರಂದು ಬೆಳಗ್ಗೆ 8ರಿಂದ ಸಂಜೆ 5ರ ತನಕ ವಿದ್ಯುತ್ ವ್ಯತ್ಯಯವಾಗಲಿದೆ. ನಗರದ ಪಿ.ಬಿ. ರೋಡ್, ಅಶ್ವಿನಿ ನಗರ, ಶಿವಾಜಿನಗರ, ದಾನೇಶ್ವರಿ ನಗರ, ಉದಯನಗರ, ನಾಗೇಂದ್ರನಮಟ್ಟಿ, ಜಿಲ್ಲಾ ನ್ಯಾಯಾಲಯ, ಜಿಲ್ಲಾಸ್ಪತ್ರೆ, ಹಾನಗಲ್ ರಸ್ತೆ, ಗುತ್ತಲ ರಸ್ತೆ, ಶಿವಲಿಂಗ ನಗರ ಹಾಗೂ ಗ್ರಾಮೀಣ ಪ್ರಧೇಶಗಳಾದ ಕರ್ಜಗಿ, ಜಾನಕೊಪ್ಪ ಡೈರಿ, ಗಾಂಧಿಪುರ, ಅಗಡಿ, ಜಂಗಮನಕೊಪ್ಪ, ಕರ್ಜಗಿ ನೀರು ಪೂರೈಕೆ, ಮಾಳಪುರ, ತಿಮ್ಮೇನಹಳ್ಳಿ, ಕಾಟೇನಹಳ್ಳಿ, ಕನವಳ್ಳಿ, ಕಳ್ಳಿಹಾಳ, ಮಾಚಾಪುರ, ಬೂದಗಟ್ಟಿ, ದೇವಿಹೊಸೂರ, ಕುರುಬಗೊಂಡದಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂ ಉಪ ವಿಭಾಗದ ಸಕಾನಿ ಎಂಜಿನಿಯರ್ ವಿನಂತಿಸಿದ್ದಾರೆ.
ಕಮಲಾಬಾಯಿ ನಿಧನ
ಶಿಗ್ಗಾಂವಿ: ಇಲ್ಲಿಯ ಮಾಳವದೆ ಪರಿವಾರದ ಹಿರಿಯರು, ಶ್ರೀನಿವಾಸ ಚಿತ್ರಮಂದಿರದ ಮಾಲಕಿ ಕಮಲಾಬಾಯಿ ತುಕಾರಾಮಪ್ಪ ಮಾಳವದೆ (87) ಗುರುವಾರ ನಿಧನರಾದರು. ಅವರಿಗೆ ಆರು ಜನ ಪುತ್ರರು, ಮೂವರು ಪುತ್ರಿಯರು ಇದ್ದಾರೆ. ಮಾಜಿ ಶಾಸಕ ಅಜ್ಜಂಪೀರ ಎಸ್. ಖಾದ್ರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎನ್. ವೆಂಕೋಜಿ, ಜಿಪಂ ಮಾಜಿ ಅಧ್ಯಕ್ಷ ಗುಡ್ಡಪ್ಪ ಜಲದಿ, ಎನ್.ಸಿ. ಪಾಟೀಲ, ಚಂದ್ರಣ್ಣ ನಡುವಿನಮನಿ, ಹನುಮರೆಡ್ಡಿ ನಡುವಿನಮನಿ, ಪ್ರಕಾಶ ಬಂಕಣ್ಣನವರ, ಸುಧೀರ ಲಮಾಣಿ, ನ್ಯಾಮದೇವ ಸಿಂಪಿ, ಸಮಾಜದ ಅಧ್ಯಕ್ಷ ಸುರೇಶ ಮುಳೆ, ವಿನಾಯಕ ಗಂಜಿಗಟ್ಟಿ ಸಂತಾಪ ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

