ಹಾವೇರಿ

ಎಲ್ಲರಿಗೂ ಸೂರು: ಶಿವಣ್ಣನವರ

Published On :

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಡಿ. 20
ಇತ್ತೀಚಿನ ದಿನಗಳಲ್ಲಿ ವಿಭಕ್ತ ಕುಟುಂಬಗಳು ಹೆಚ್ಚಾಗುತ್ತಿವೆ. ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಮೂಲಸೌಕರ್ಯ ಕಲ್ಪಿಸುವುದು ಅಸಾಧ್ಯವಾಗಿದೆ. ಸೂರಿಲ್ಲದ ಬಡವರು ಬಾಡಿಗೆ ಮನೆಯಲ್ಲಿ ಜೀವಿಸುವಂತಾಗಿದೆ. ಅಧಿಕಾರಾವಧಿಯಲ್ಲಿ ಅವಧಿಯಲ್ಲಿ ಎಲ್ಲರಿಗೂ ನಿವೇಶನ ಒದಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಭರವಸೆ ನೀಡಿದರು.
ಇಲ್ಲಿನ ಪುರಸಭೆಯಲ್ಲಿ ಮಂಗಳವಾರ ಬಸವ ಇಂದಿರಾ ಆವಾಸ್ ಯೋಜನೆಯಲ್ಲಿ ನಿರಾಶ್ರಿತ ಫಲಾನುಭವಿಗಳಿಗೆ ಮನೆ ಮಂಜೂರಾತಿ ಕಾರ್ಯಾದೇಶ ವಿತರಿಸಿ ಮಾತನಾಡಿದರು.
ಪಟ್ಟಣಡ ನಿರಾಶ್ರಿತರಿಗೆ ಮನೆ ನಿರ್ಮಿಸಿಕೊಳ್ಳಲು ನಿವೇಶನ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲೇ ಅನುಮೋದನೆ ಸಿಗಲಿದೆ. ಈಗಿರುವ ಆಶ್ರಯ ಬಡಾವಣೆಗೆ ಹೊಂದಿಕೊಂಡು ನೂತನವಾಗಿ ನಿವೇಶನ ನಿರ್ಮಿಸಿ, ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಕಳೆದ ಸಾಲಿನಲ್ಲಿ 280 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದ್ದು, ಈ ಬಾರಿ 75 ಮನೆಗಳಿಗೆ ಅರ್ಹರಿಂದ ಅರ್ಜಿ ಕರೆಯಲಾಗಿದೆ. ಈ ಪೈಕಿ 65 ಫಲಾನುಭವಿಗಳ ಆಯ್ಕೆ ಮುಗಿದಿದ್ದು, ಕಾರ್ಯಾದೇಶ ನೀಡಲಾಗುತ್ತಿದೆ. ಉಳಿದ 10 ಜನರಿಗೂ ಶೀಘ್ರ ಮಂಜೂರಾತಿ ಕೊಡಿಸುವುದಾಗಿ ಹೇಳಿದರು.
ಮನೆ ಕಟ್ಟಿಕೊಳ್ಳಲು ಈ ಹಿಂದಿನ ಸರ್ಕಾರ ರು. 75 ಸಾವಿರ ಸಹಾಯಧನ ನೀಡುತ್ತಿತ್ತು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ಮೊತ್ತವನ್ನು ರು. 1.25 ಲಕ್ಷಕ್ಕೆ ಹೆಚ್ಚಿಸಿದೆ. ಇದರ ಜತೆಗೆ ರು. 50 ಸಾವಿರ ಸಾಲವನ್ನೂ ನೀಡಲಾಗುತ್ತಿದೆ. ಫಲಾನುಭವಿಗಳು ಉತ್ತಮವಾಗಿ ಮನೆ ನಿರ್ಮಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪುರಸಭೆ ಸದಸ್ಯ ಮುರಿಗೆಪ್ಪ ಶೆಟ್ಟರ, ಹುಸೇನಸಾಬ್ ದೊಡ್ಮನಿ, ರಾಮಣ್ಣ ಕೋಡಿಹಳ್ಳಿ, ಪ್ರಶಾಂತ ಯಾದವಾಡ, ದುರ್ಗೇಶ ಗೋಣೆಮ್ಮನವರ, ಯಮನೂರಪ್ಪ ಉಜನಿ, ಮುನಾಫ್ ಸಾಬ್ ಎರೇಶೀಮಿ, ಮೊಕ್ತಿಯಾರ ಮುಲ್ಲಾ, ರಾಜೇಸಾಬ್ ಕನವಳ್ಳಿ, ಮಂಜುನಾಥ ಬೋವಿ, ಭದ್ರಗೌಡ್ರ ಮಲ್ಲನಗೌಡ್ರ, ಮುಖಂಡ ಎಸ್.ಸಿ. ಶಿಡೇನೂರ, ತಹಸೀಲ್ದಾರ್ ಶಿವಶಂಕರ ನಾಯಕ, ಪುರಸಭೆ ಮುಖ್ಯಾಧಿಕಾರಿ ಜೆ.ಟಿ. ವೀರೇಶಕುಮಾರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.