ಹಾವೇರಿ

ಸಂಕ್ಷಿಪ್ತ ಸುದ್ದಿ

Published On :

ಅಧ್ಯಯನದಿಂದ ಭವಿಷ್ಯ
ಶಿಗ್ಗಾಂವಿ: ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಅಭ್ಯಾಸದತ್ತ ಗಮನ ಹರಿಸಿದಾಗ ಮಾತ್ರ ಉಜ್ವಲ ಭವಿಷ್ಯ ಕಾಣಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಹೇಳಿದರು. ಪಟ್ಟಣದ ಜೆಎಂಜೆ ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ, ಇಂದಿನ ವಿದ್ಯಾರ್ಥಿಗಳು ಪಠ್ಯ ಅಭ್ಯಾಸಕ್ಕಿಂತ ಮೊಬೈಲ್, ಟಿವಿಯತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ದುಶ್ಚಟಗಳಿಗೂ ಬಲಿಯಾಗುತ್ತಿದ್ದಾರೆ. ಕಲಿತು ದೇಶದ ಸಂಪತ್ತಾಗಬೇಕಾದ ವಿದ್ಯಾರ್ಥಿ ದಾರಿ ತಪ್ಪುತ್ತಿದ್ದಾನೆ. ಪಾಲಕರು ಈ ಕುರಿತು ಗಮನಹರಿಸಬೇಕು ಎಂದರು. ಸವಣೂರು ಉಪವಿಭಾಗಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಭವಿಷ್ಯದ ಗುರಿ ನಿಶ್ಚಯವಾದಾಗ ಮಾತ್ರ ಬದಲಾವಣೆ ಕಾಣಲು ಸಾಧ್ಯ. ಜಗತ್ತಿನಲ್ಲಿ ಅಸಾಧ್ಯವಾದದ್ದು ಯಾವುದೂ ಇಲ್ಲ. ಸಾಧಿಸುವ ಛಲ ಬೇಕಷ್ಟೇ ಎಂದರು. ಫಾ. ಪ್ರಮೋದ್ ದಲಭಂಜನ್, ಫಾ. ಪ್ರದೀಪ್ ಮಂಗಳಿ, ಸಿ. ಉಷಾ, ಪ್ರಾಚಾರ್ಯ ಆರೋಗ್ಯ ಮೇರಿ ಇದ್ದರು.
ಈಜಲು ಹೋಗಿ ಸಾವು
ಹಗರಿಬೊಮ್ಮನಹಳ್ಳಿ: ತುಂಗಭದ್ರೆ ತಟದಲ್ಲಿ ತೋಡಿದ್ದ ಮರಳು ಗುಂಡಿಗೆ ಬಿದ್ದು ತಾಲೂಕಿನ ಆನೆಕಲ್ಲು ತಾಂಡಾದ ನಿವಾಸಿ, ಧಾರವಾಡದ ಕೆಸಿಡಿ ಕಾಲೇಜಿನ ಅಂತಿಮ ಬಿಎ ವಿದ್ಯಾರ್ಥಿ ಜಗ್ಗನಾಯ್ಕ (21) ಬಲಿಯಾಗಿದ್ದಾನೆ. ಹಾವೇರಿ ತಾಲೂಕಿನ ಹಾವನೂರು ಬಳಿ ಕಬ್ಬು ಕಟಾವಿಗೆ ತೆರಳಿದ್ದ ಪಾಲಕರನ್ನು ಕಾಣಲು ಹೋಗಿದ್ದ ಜಗ್ಗನಾಯ್ಕ ಶುಕ್ರವಾರ ಸಹಪಾಠಿ ಜತೆ ಈಜಲು ಹೋದಾಗ ಈ ದುರ್ಘಟನೆ ಸಂಭವಿಸಿದೆ. ಸಂಬಂಧಿ ಯಮುನಾ ನಾಯ್ಕ ನೀಡಿದ ದೂರಿನಂತೆ ಗುತ್ತಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.