ಹಾವೇರಿ

ಶಾಂತಿ ನಾಯಕನಿಗೆ ಯುವ ನಮನ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಡಿ. 26
ಬಿಜೆಪಿ ಯುವ ಮೋರ್ಚಾ ಘಟಕದಿಂದ ಚತುಷ್ಪಥ ಹೆದ್ದಾರಿ ಹರಿಕಾರ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 90ನೇ ಜನ್ಮದಿನದ ಅಂಗವಾಗಿ ನಗರದ ಮುನ್ಸಿಪಲ್ ಮೈದಾನದಲ್ಲಿ 'ಶಾಂತಿ ನಾಯಕನಿಗೆ ಯುವನಮನ' ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ವಕ್ತಾರರಾಗಿ ಆಗಮಿಸಿದ ಹುಬ್ಬಳ್ಳಿ ಪೂರ್ವ ಕ್ಷೇತ್ರದ ಮಾಜಿ ಶಾಸಕ ವೀರಭದ್ರಪ್ಪ ಹಾಲರವಿ ಮಾತನಾಡಿ, ಜನಸಂಘದ ಕಾಲದಿಂದಲೂ ರಾಷ್ಟ್ರೀಯ ವಾದವನ್ನು ಪ್ರತಿಪಾದಿಸುತ್ತಾ, ರಾಷ್ಟ್ರದ ಪರವಾಗಿ ಧ್ವನಿ ಎತ್ತುವ ನಾಯಕರಲ್ಲಿ ವಾಜಪೇಯಿ ಮೊದಲಿಗರು. ಅವರ ಸರಳ ನಡವಳಿಕೆ, ತೀಕ್ಷ್ಣ ಮಾತುಗಾರಿಕೆ ಹಾಗೂ ಜನರ ಸಮಸ್ಯೆಯನ್ನು ತನ್ನ ಸಮಸ್ಯೆ ಎಂಬಂತೆ ಪರಿಹರಿಸುವವರೆಗೂ ಸಮಾಧಾನಪಡದ ತಾಂತ್ರಿಕ ಮನುಷ್ಯ. ನಮ್ಮ ದೇಶದ ಪ್ರಧಾನಿಯಾಗಿದ್ದಾಗ ಪೊಖ್ರಾಣ್ ಅಣು ಪರೀಕ್ಷೆ ನಡೆಸಿದಾಗ ಪ್ರಪಂಚದ ಮುಂದುವರೆದ ರಾಷ್ಟ್ರಗಳು ತಬ್ಬಿಬ್ಬಾದವು. ಭಾರತಕ್ಕೆ ನೀಡುತ್ತಿದ್ದ ಸಹಾಯ ನಿಲ್ಲಿಸಿದಾಗ, ಭಾರತದಲ್ಲಿ ನಪುಂಸಕರಿಲ್ಲ, ಎಲ್ಲರೂ ತಾಯಿಯ ಮಕ್ಕಳು. ಎದೆ ಹಾಲು ಕುಡಿದು ಬೆಳೆದ ಮಕ್ಕಳು. ನಮಗೆ ಯಾರದೂ ಆವಶ್ಯಕತೆ ಇಲ್ಲ ಎಂಬ ದಿಟ್ಟ ಸಂದೇಶವನ್ನು ಶಕ್ತಿಶಾಲಿ ರಾಷ್ಟ್ರಗಳಿಗೆ ರವಾನಿಸಿದ್ದರು. ಅವರು ಪ್ರಧಾನಿಯಾಗಿದ್ದಾಗ ಸರ್ವ ಶಿಕ್ಷಣ ಅಭಿಯಾನ ಯೋಜನೆ ಜಾರಿಗೆ ತಂದರು. ಇದರ ಫಲವಾಗಿ ಎಲ್ಲ ಮಕ್ಕಳೂ ಶಾಲೆಗಳತ್ತ ಆಕರ್ಷಿತರಾದರು. ಮುತ್ಸದ್ದಿಯಾಗಿರುವ ಅವರು ಪ್ರಸಿದ್ಧ ಕವಿಯೂ ಆಗಿದ್ದಾರೆ. ಭ್ರಷ್ಟಾಚಾರ ಮುಕ್ತ ದೇಶ ಅವರ ಕನಸು. ದೇಶದ ಮಹಾನಗರಗಳನ್ನು ಸಂಪರ್ಕಿಸುವ ಚತುಷ್ಪಥ ಹೆದ್ದಾರಿ ನಿರ್ಮಾಣ ಅವರ ಕಾರ್ಯ ವೈಖರಿಯನ್ನು ಬಿಂಬಿಸುತ್ತದೆ ಎಂದರು.
ಮೋದಿ ಬೆಂಬಲಿಸಿ
ರಾಜ್ಯ ಕಾರ್ಯದರ್ಶಿ ಶಿವಾನಂದ ಕಲ್ಲೂರ ಮಾತನಾಡಿ, ವಾಜಪೇಯಿ ಕನಸನ್ನು ನನಸಾಗಿಸುವ ಜವಾಬ್ದಾರಿ ನರೇಂದ್ರ ಮೋದಿ ಮೇಲಿದೆ. ನಾವೆಲ್ಲ ಅವರೊಂದಿಗೆ ಕೈಜೋಡಿಸಬೇಕೆಂದರು. ಯುವ ಮೋರ್ಚಾ ನಗರ ಅಧ್ಯಕ್ಷ ವೆಂಕಟೇಶ ದೈವಜ್ಞ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ ಅಟಲ್‌ಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರದೀಪ ಪ್ರಾಸ್ತಾವಿಕ ಮಾತನಾಡಿದರು. ಸೋಮೇಶ್ವರ ಕುರ್ಡೇಕರ ಸ್ವಾಗತಿಸಿದರು. ರಾಜು ತಳವಾರ ನಿರೂಪಿಸಿದರು. ಇಮಾಮ ಹಿರೇಮುಗದೂರ ವಂದಿಸಿದರು.
ನೂರಾರು ಬಡ ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದ ಜೀವನ ಚರಿತ್ರೆ ಪುಸ್ತಕ, ನೋಟ್‌ಬುಕ್, ಪೆನ್ ಹಾಗೂ ಪೆನ್ಸಿಲ್‌ಗಳನ್ನು ಹೊಂದಿರುವ ಸ್ಕೂಲ್ ಬ್ಯಾಗ್ ಕಿಟ್ ವಿತರಿಸಲಾಯಿತು.
ಹುಸೇನಸಾಬ ನದಾಫ್, ಅಶೋಕ ಜೋಶಿ, ಫಕ್ಕೀರಪ್ಪ ತೊಂಡೂರ, ಮಧುಕರ ನವಲೆ, ಲಕ್ಷ್ಮಣ ರಜಪೂತ, ವಿನಯ ಪಾಟೀಲ, ಕಾಂತೇಶ ಬೇನಳ್ಳಿ, ಚೇತನ ಕುರುಬಗೊಂಡಶೆಟ್ರ, ನಗರಸಭೆ ಸದಸ್ಯರಾದ ಕರಬಸಪ್ಪ ಹಳದೂರ, ಪ್ರಮುಖರಾದ ವೇದವ್ಯಾಸ ಕಟ್ಟಿ, ಶಿವಲಿಂಗಪ್ಪ ಕಲ್ಯಾಣಿ, ರತ್ನಾ ಕಾಶಪ್ಪನವರ, ಮಂಜುಳಾ ಕರಬಸಮ್ಮನವರ, ಪ್ರಭು ಹಿಟ್ನಳ್ಳಿ, ಮುತ್ತಣ್ಣ ಹಿರೇಮಠ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.