ಸ್ಥಳೀಯರಿಗೆ ಟಿಕೆಟ್
ಹಾನಗಲ: ಹಾನಗಲ್ಲ ವಿಧಾನಸಭಾ ಕ್ಷೇತ್ರಕ್ಕೆ ಹೊರಗಿನ ಅಭ್ಯರ್ಥಿಗಳ ಅಗತ್ಯವಿಲ್ಲವೆಂಬುದು ಕಾಂಗ್ರೆಸ್ ಪಕ್ಷದ ಅರಿವಿಗಿದೆ. ಸ್ಥಳೀಯರನ್ನೇ ಕಾಂಗ್ರೆಸ್ನಿಂದ ಕಣಕ್ಕಿಳಿಸಲಾಗುವುದು ಎಂದು ಮಾಜಿ ಸಚಿವ ಕೆ.ಬಿ. ಕೋಳಿವಾಡ ಸ್ಪಷ್ಟಪಡಿಸಿದರು. ಹಾನಗಲ್ಲಿನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಬಿಜೆಪಿ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ನಡೆಸಿದ ಪ್ರತಿಭಟನೆ ಹಾಗೂ ಸರತಿ ಉಪವಾಸ ಸತ್ಯಾಗ್ರಹಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಚ್ಚಾಟ ರಾಜಕೀಯ: ಪ್ರಸ್ತುತ ವಿಧಾನಸಭಾ ಚುನಾವಣೆಯು, ಜನ ಬಲ-ಹಣ ಬಲದ ನಡುವಿನ ಆಯ್ಕೆಯಾಗಿದೆ. ಹಣಕ್ಕೆ ಮತ ಮಾರಿಕೊಳ್ಳದೇ ಜನೋಪಯೋಗಿ ಸಮಾಜ ಸೇವಕನಿಗೆ ಮತ ಹಾಕುವ ಕಾಲ ಬಂದಿದೆ. ಬಿಜೆಪಿ ಸರ್ಕಾರಕ್ಕೆ ಜನರ ಹಿತ ಬೇಕಾಗಿಲ್ಲ. ಕಚ್ಚಾಟದ ಮೂಲಕ ಅಧಿಕಾರ ಹಂಚಿಕೊಳ್ಳುವ ಹಂಚಿಕೆ ನಡೆಸಿದ್ದಾರೆ ಎಂದರು.
ಬಜೆಟ್ನಲ್ಲಿ ಹುರುಳಿರಲ್ಲ: ಇಡೀ ರಾಜ್ಯದ ಜನತೆಗೆ ಬಿಜೆಪಿ ಹಾಗೂ ಕೆಜೆಪಿ ಬಣ್ಣ ತಿಳಿದಿದೆ. ರಾಜ್ಯಕ್ಕೆ ಕಾಂಗ್ರೆಸ್ ಮಾತ್ರ ಸುಭದ್ರ ಸರ್ಕಾರ ನೀಡಬಲ್ಲದು. ಚುನಾವಣೆ ಹತ್ತಿರದಲ್ಲಿ ಹಾಗೂ ತಮ್ಮೊಳಗಿನ ಕಚ್ಚಾಟ, ರಾಜಿನಾಮೆ ಪ್ರಹಸನಗಳ ನಡುವೆ ತರಾತುರಿಯಲ್ಲಿ ಮಂಡಿಸುತ್ತಿರುವ ಬಜೆಟ್ ಕೇವಲ ಚುನಾವಣಾ ಪ್ರಣಾಳಿಕೆ ಮಾತ್ರವಾಗಿದೆ. ಬಜೆಟ್ನ್ನು ಕಾರ್ಯರೂಪಕ್ಕೆ ತರಲು ಇವರಿಂದ ಸಾಧ್ಯವೇ ಇಲ್ಲ. ಇದರಲ್ಲಿ ಏನೂ ಹುರುಳಿದಿಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯ ಲೋಕೋಪಯೋಗಿ ಇಲಾಖೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ. ಗಣಿ ಹಗರಣದಂತೆ ಲೋಕೋಪಯೋಗಿ ಇಲಾಖೆಯ ಹಗರಣಗಳೂ ಶೀಘ್ರ ಬಯಲಿಗೆ ಬೀಳಲಿವೆ ಎಂದು ಹೇಳಿದರು.
ಬೆಳೆ ವಿಮೆ: ಕಳೆದೆರಡು ವರ್ಷಗಳಿಂದ ರಾಜ್ಯದಲ್ಲಿ ರೈತರು ಸತತವಾಗಿ ಬರಗಾಲ ಎದುರಿಸುತ್ತಿದ್ದು, ಪ್ರಸಕ್ತ ಬಿಜೆಪಿ ಸರ್ಕಾರ ಬೆಳೆವಿಮೆ ಪರಿಹಾರ ದೊರಕಿಸಿಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಆದಾಗ್ಯೂ ರೈತರ ಬೆಳೆಸಾಲಗಳನ್ನು ಪೂರ್ಣ ಪ್ರಮಾಣದಲ್ಲಿ ಮನ್ನಾ ಮಾಡದೇ ರೈತ ವಿರೋಧಿ ತಾಳಿದೆ.
ರೈತಪರ ಸರ್ಕಾರ: ಬರಪರಿಹಾರ ಕಾಮಗಾರಿ ಪ್ರಾರಂಭಿಸಿ, ಜನರಿಗೆ ಉದ್ಯೋಗ ಸೃಷ್ಟಿಸಬೇಕು ಎಂದು ಆಗ್ರಹಿಸಿದ ಅವರು, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ರೈತಪರ ಸರ್ಕಾರವನ್ನು ಅಧಿಕಾರಕ್ಕೆ ತರಲು ಮನವಿ ಮಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮನೋಹರ ತಹಸೀಲ್ದಾರ್, ಶಿಗ್ಗಾವಿ ಮಾಜಿ ಶಾಸಕ ಅಜ್ಜಂಪೀರ ಖಾದ್ರಿ ಮಾತನಾಡಿದರು. ಕೆಪಿಸಿಸಿ ಸದಸ್ಯ ಸತೀಶ ದೇಶಪಾಂಡೆ, ಆರ್.ಎಸ್. ಸಾಲಿಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಸ್.ಬಡಿಗೇರ, ಉಜ್ಜನಗೌಡ ಪಾಟೀಲ, ಜಿಪಂ ಸದಸ್ಯ ಮಹದೇವಪ್ಪ ಬಾಗಸರ, ಅಬಿದಾಬಿ ನದಾಫ, ಜಿ.ಎಸ್. ಗಂಟೇರ, ತಾಪಂ ಸದಸ್ಯ ಮಧು ಪಾಣೀಗಟ್ಟಿ, ಸುರೇಶ ನೆರಕಿಮನಿ, ಕಲವೀರಪ್ಪ ಪವಾಡಿ, ಮುಖಂಡರಾದ ನಾಗೇಶ ಪಡೆಪ್ಪನವರ, ಮಲ್ಲನಗೌಡ ಪಾಟೀಲ, ಕೆ.ಎಲ್. ದೇಶಪಾಂಡೆ, ಶಾಂತಕ್ಕ ಅಂಗಡಿ, ವನಜಾಕ್ಷಿ ಬ್ಯಾತನಾಳ, ವೀರೇಶ ಬೈಲವಾಳ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

