ಹಾವೇರಿ

ನಾಮಪತ್ರ ಸಲ್ಲಿಕೆ: ಗೊಂದ

Published On :

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಫೆ. 23
ಸ್ಥಳೀಯ ಪುರಸಭೆಗೆ ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ಶನಿವಾರ ತಾಲೂಕು ಕಚೇರಿ ಅಕ್ಷರಶಃ ಗೊಂದಲದ ಗೂಡಾಯಿತು.
ನಿಯಮದಂತೆ ನಾಮಪತ್ರ ಸಲ್ಲಿಸಲು ಅಭ್ಯರ್ಥಿ ಜೊತೆ ಸೂಚಕರು ಮಾತ್ರ ಪ್ರವೇಶಿಸಬೇಕು. ಆದರೆ, ತರಾತುರಿಯಲ್ಲಿದ್ದ ಅಭ್ಯರ್ಥಿಗಳು ತಮ್ಮ ನೂರಾರು ಬೆಂಬಲಿಗರನ್ನು ಒಳಗೆ ಕರೆ ತಂದದ್ದೇ ಗೊಂದಲ ಸೃಷ್ಟಿಯಾಗಲು ಕಾರಣವಾಯಿತು.
ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ನಾ ಮುಂದು ತಾ ಮುಂದು ಎಂದು ವಾಗ್ವಾದ ನಡೆಸಿದ ಸಣ್ಣಪುಟ್ಟ ಘಟನೆಗಳು ಜರುಗಿದವು. ಹೀಗಿದ್ದರೂ ಜನರನ್ನು ನಿಯಂತ್ರಿಸಲಾಗದ ರಿಟರ್ನಿಂಗ್ ಆಫೀಸರ್ ಸಹ ನಿಸ್ಸಹಾಯಕರಾದರು.
ಮಧ್ಯಪ್ರವೇಶಿಸಿದ ಉಪ ವಿಭಾಗಾಧಿಕಾರಿ: ಪರಿಸ್ಥಿತಿ ನಿಯಂತ್ರಿಸಲು ಮುಂದಾದ ಹಾವೇರಿ ಉಪ ವಿಭಾಗಾಧಿಕಾರಿ ಚನ್ನಬಸಪ್ಪ ಪೊಲೀಸರ ಸಹಕಾರದೊಂದಿಗೆ ಅನಗತ್ಯವಾಗಿ ಒಳಗೆ ನುಗ್ಗಿದ್ದ ಬೆಂಬಲಿಗರನ್ನು ಹೊರ ಹಾಕಿದರು. ಸಿಬ್ಬಂದಿಯೊಂದಿಗೆ ಆಗಮಿಸಿದ ಸಿಪಿಐ ಚಿಕ್ಕರೆಡ್ಡಿ, ಪಿಎಸ್‌ಐ ಕಲ್ಲಮ್ಮನವರ ಸೂಕ್ತ ಬಂದೋಬಸ್ತ್ ಮಾಡಿದರಲ್ಲದೇ ಅಭ್ಯರ್ಥಿಗಳನ್ನು ಸಾಲಾಗಿ ನಿಲ್ಲಿಸಿ, ನಾಮಪತ್ರ ಸಲ್ಲಿಸಲು ಅನುವು ಮಾಡಿಕೊಟ್ಟರು. ಆದರೆ, ಕಚೇರಿಯಲ್ಲಿದ್ದ ತಹಸೀಲ್ದಾರ್ ಎ.ಎ. ಗನಿ ಮಾತ್ರ ಏನೂ ಆಗೇ ಇಲ್ಲವೆನ್ನುವಂತೆ ಕಚೇರಿ ಆವರಣದಲ್ಲೇ ಓಡಾಡುತ್ತಿದ್ದ ದೃಶ್ಯಗಳು ಕಂಡು ಬಂದವು.
ಕೆಜೆಪಿ, ಕಾಂಗ್ರೆಸ್ ಮೆರವಣಿಗೆ
ಕೆಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಶನಿವಾರ ಪ್ರತ್ಯೇಕ ಮೆರವಣಿಗೆ ನಡೆಸುವ ಮೂಲಕ ಒಟ್ಟಾಗಿ ಬಂದು ನಾಮಪತ್ರ ಸಲ್ಲಿಸಿದರು.
ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನ, ಮಾಜಿ ಶಾಸಕ ಸುರೇಶಗೌಡ ಪಾಟೀಲ ನೇತೃತ್ವದಲ್ಲಿ ಇಲ್ಲಿನ ಸಿದ್ದೇಶ್ವರ ಕಲ್ಯಾಣ ಮಂಟಪದಿಂದ ಆರಂಭವಾದ ಕೆಜೆಪಿ ಮೆರವಣಿಗೆ ಮುಖ್ಯರಸ್ತೆ ಮೂಲಕ ಹಾಯ್ದು ತಹಸೀಲ್ದಾರ ಕಚೇರಿ ತಲುಪಿತು. ಮಾಜಿ ಸಚಿವ ಬಸವರಾಜ ಶಿವಣ್ಣನವರ, ಪುರಸಭೆ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ ನೇತೃತ್ವದಲ್ಲಿ ಜರುಗಿದ ಕಾಂಗ್ರೆಸ್ ಮೆರವಣಿಗೆಯಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.