ಹಾವೇರಿ

ರೈಲ್ವೆ ಬಜೆಟ್ 2013 ಜನ ಏನಂತಾರೆ?

Published On :

ರಾಜ್ಯದ ಪಾಲಿಗೆ ಯಾವುದೇ ಹೊಸ ಯೋಜನೆಗಳಿಲ್ಲದೇ ತೀವ್ರ ಅನ್ಯಾಯವಾಗಿದೆ. ಬಜೆಟ್ ಅಧಿವೇಶನ ಪೂರ್ವದಲ್ಲಿಯೇ ರೇಲ್ವೆ ಸಚಿವರನ್ನು ಖುದ್ದು ಭೇಟಿ ಮಾಡಿ, ಪತ್ರದ ಮೂಲಕ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
-ಶಿವಕುಮಾರ್ ಉದಾಶಿ



ಪ್ರತ್ಯೇಕ ಸ್ಲೀಪರ್ ಬೋಗಿಗಳನ್ನು ಪ್ರಕಟಿಸುವ ಮೂಲಕ ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ ಕಲ್ಪಿಸಬೇಕಾಗಿತ್ತು. ದೇಶದಲ್ಲಿ ಜರುಗಿದ ಕೆಲ ಕಹಿ ಘಟನೆ ನೋಡಿದರೇ ಮೆಟ್ರೋ ಪಾಲಿಟಿನ್ ನಗರಗಳಲ್ಲಿ ಅವಶ್ಯಕವೆನಿಸುತ್ತಿವೆ.
-ವಿಜಯಶ್ರೀ ಹಿರೇಮಠ, ಗೃಹಿಣಿ


ಸಿ ದರ್ಜೆ ಪ್ರಯಾಣದ ದರ ಹೆಚ್ಚಿಸದಿರುವುದು ಸ್ವಾಗತಾರ್ಹ. ರಾಜ್ಯದ ಮಟ್ಟಿಗೆ ತುಮಕೂರು-ದಾವಣಗೆರೆ, ಯಲವಿಗಿ-ಗದಗ ಹೊಸ ರೈಲು ಮಾರ್ಗಗಳ ಪ್ರಸ್ತಾಪ ಮಾಡದಿರುವುದು ಈ ಭಾಗದ ಜನರಿಗೆ ಮಾಡಿದ ಮೋಸ.

-ಎಸ್.ಆರ್. ಪಾಟೀಲ್, ಮುಖಂಡ


ಕೇಂದ್ರ ರೇಲ್ವೆ ಬಜೆಟ್‌ನಲ್ಲಿ ರಾಜ್ಯಕ್ಕೆ ಶೂನ್ಯ ಕೊಡುಗೆ ಬಂದಿದ್ದು, ಕೋಲಾರಕ್ಕೆ ರೇಲ್ವೆ ಕೋಚ್ ನಿರ್ಮಾಣ ಘಟಕ, ಮುಂಬೈಗೆ ಸಂಪರ್ಕ ರೈಲು ನೀಡಿ ಕೈತೊಳೆದುಕೊಳ್ಳಲಾಗಿದೆ. ರಾಜ್ಯ ನಿರ್ಲಕ್ಷ್ಯೀಡಾಗಿದೆ
-ಸೋಮಣ್ಣ ಬೇವಿನಮರದ, ಬಿಜೆಪಿ


 ಬಜೆಟ್‌ನಲ್ಲಿ ಅಭಿವೃದ್ಧಿಗೆ ಒತ್ತು ನೀಡಬೇಕಾಗಿತ್ತು. ವಾಣಿಜ್ಯ ಕೇಂದ್ರಗಳಾದ ಬೆಂಗಳೂರು-ಮುಂಬೈ ನಗರಗಳಿಗೆ ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ ಮೂಲಕ ಸಂಪರ್ಕಿಸುವ ರೈಲು ಮಾರ್ಗ ಜೋಡಿಸುವ ಕಾರ್ಯವಾಗಬೇಕಿತ್ತು.
-ಶಂಕರಗೌಡ ಪಾಟೀಲ, ಕೃಷಿಕ



ಹಾವೇರಿ ಜಿಲ್ಲೆಗೆ ಕೇಂದ್ರ ರೇಲ್ವೆ ಬಜೆಟ್‌ನಲ್ಲಿ ಸೌಲಭ್ಯ ತರುವಲ್ಲಿ ಸಂಸತ್ ಸದಸ್ಯರು ವಿಫಲರಾಗಿದ್ದಾರೆ. ಸರಕು ಸಾಗಣೆ ದರಗಳಲ್ಲಿ ಹೆಚ್ಚಳ, ದಿನಬಳಕೆ ವಸ್ತುಗಳ, ಪೆಟ್ರೋಲ್, ಡೀಸೆಲ್ ದರ ಹೆಚ್ಚಳಕ್ಕೆ ಕಾರಣವಾಗಲಿವೆ.
-ರವಿ ಮೆಣಸಿನಕಾಯಿ, ಹಾವೇರಿ


ನೆನೆಗುದಿಗೆ ಬಿದ್ದಿದ್ದ ಗದಗ- ಹಾವೇರಿ ರೇಲ್ವೆ ಮಾರ್ಗದ ಉನ್ನತೀಕರಣ, ಹಾವೇರಿ ರೇಲ್ವೆ ಸ್ಟೇಷನ್ ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ಕನಸು ಕನಸಾಗಿಯೇ ಉಳಿದಿದೆ. ಕೇಂದ್ರ ರೇಲ್ವೆ ಬಜೆಟ್‌ನ್ನು ತೋರಿಕೆಗೆ ಮಂಡಿಸಲಾಗಿದೆ.
-ಮಲ್ಲಣ್ಣ ಸಾತೇನಹಳ್ಳಿ, ಹಾವೇರಿ


ಕೇಂದ್ರ ರೇಲ್ವೆ ಬಜೆಟ್‌ನಲ್ಲಿ ರಾಜ್ಯಕ್ಕೆ ಹೆಚ್ಚು ಪಾಲು ಸಿಕ್ಕಿದ್ದು, ಕೋಲಾರಕ್ಕೆ ರೇಲ್ವೆ ಕೋಚ್ ನಿರ್ಮಾಣ ಘಟಕ, ರೇಲ್ವೆ ಸುರಕ್ಷತೆಗೆ ಹೆಚ್ಚಿನ ಒತ್ತು ಕೊಡಲಾಗಿದೆ. ಗದಗ-ವಾಡಿ ರೈಲು ಮಾರ್ಗ ಕೈಗೆತ್ತಿಕೊಂಡಿರುವುದು ಸಂತವಾಗಿದೆ.
-ಪ್ರಕಾಶಗೌಡ ಪಾಟೀಲ, ಕಾಂಗ್ರೆಸ್


ರೇಲ್ವೆ ಬಜೆಟ್‌ನಲ್ಲಿ ಅಭಿವೃದ್ಧಿ ಚಿಂತನೆ ನಡೆಸದೇ ಬೆಲೆ ಏರಿಕೆ ಗುಮ್ಮ ಎದುರಿಟ್ಟುಕೊಂಡು ಮಂಡಿಸಲಾಗಿದೆ. ಇದರಿಂದಾಗಿ ಈಗಾಗಲೇ ಆಕಾಶಕ್ಕೆ ತಲುಪಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ಮತ್ತಷ್ಟು ತುಟ್ಟಿಯಾಗಲಿವೆ.
-ವಾಗೀಶ ಹಿರೇಮಠ, ಖಾಸಗಿ ನೌಕರ

ಕೇಂದ್ರ ರೇಲ್ವೆ ಬಜೆಟ್ ಪರಿಸರ ಸ್ನೇಹಿ ಆಗಬೇಕಿತ್ತು. ಆಗಿಲ್ಲ. ರಾಜ್ಯದ ಯೋಜನೆಗಳು ನೆನೆಗುದಿಗೆ ಬಿದ್ದಿದ್ದು, ಬೆರಳೆಣಿಕೆ ಯೋಜನೆ ಯಾವ ಪುರುಷಾರ್ಥಕ್ಕೆ? ಕೇಂದ್ರ ದ. ಭಾರತ ರಾಜ್ಯಗಳ ಹಿತಾಸಕ್ತಿಗೆ ಬದ್ಧವಾಗಬೇಕಿದೆ.
-ವೀರಣ್ಣ ಶೀಲವಂತರ, ಹಾವೇರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.