ಪ್ರೊ. ಚಂಪಾಗೆ ಕಸಾಪ ಆಹ್ವಾನ
ಕನ್ನಡಪ್ರಭ ವಾರ್ತೆ, ಹಾವೇರಿ, ಜ. 27
ಹಾವೇರಿ ಜಿಲ್ಲಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ ಚಂದ್ರಶೇಖರ ಪಾಟೀಲ ಅವರನ್ನು ಹಾವೇರಿ ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ಧಾರವಾಡದಲ್ಲಿ ಭೇಟಿ ಮಾಡಿ, ಜ. 30, 31ರಂದು ಹಾವೇರಿ ತಾಲೂಕಿನ ಹೊಸರಿತ್ತಿಯಲ್ಲಿ ನಡೆಯುವ ಸಮ್ಮೇಳನಕ್ಕೆ ಅಧಿಕೃತವಾಗಿ ಆಹ್ವಾನಿಸಿದೆ.
ಕಸಾಪ ಜಿಲ್ಲಾಧ್ಯಕ್ಷ ಜಿ.ಬಿ. ಮಾಸಣಗಿ ಮಾತನಾಡಿ, ಪ್ರೊ ಚಂಪಾ ಜಿಲ್ಲಾ ಸಮ್ಮೇಳನದ ಅಧ್ಯಕ್ಷರಾಗಲು ಸಮ್ಮತಿಸಿದ್ದು ಸಂತಸ ಉಂಟುಮಾಡಿದೆ. ಕನ್ನಡದ ಹಿರಿಯ ಚಿಂತಕ, ಸಾಹಿತಿ ಹಾಗೂ ಸಾಂಸ್ಕೃತಿಕ ಪ್ರತಿರೋಧದ ಧ್ವನಿ ಹಾವೇರಿ ಜಿಲ್ಲೆಯ ಡಂಬರಮತ್ತೂರಿನ ಚಂಪಾ ನಾಡಿಗೆಲ್ಲ ಚಿರಪರಿಚಿತರು. ತಮ್ಮದೇ ನೆಲದಲ್ಲಿ ಸಾಂಸ್ಕೃತಿಕ ಸಂಭ್ರಮಕ್ಕೆ ಸಾಕ್ಷಿಯಾಗಲಿರುವ ಚಂಪಾ ನಮ್ಮವರು ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದರು.
ಆಹ್ವಾನ ಸ್ವೀಕರಿಸಿದ ಚಂಪಾ
ಸನ್ಮಾನ ಸ್ವೀಕರಿಸಿದ ಚಂದ್ರಶೇಖರ ಪಾಟೀಲರು, ಹಾವೇರಿ ನನ್ನ ಸಾಹಿತ್ಯದ ಸೃಜನಶೀಲತೆಯ ತಾಯ್ನೆಲ. ನನ್ನ ಮೊದಲ ಗುರು ನನ್ನ ತಂದೆ. ಅನಂತರ ನನ್ನ ಕನಸುಗಳಿಗೆ ರೆಕ್ಕೆ-ಪುಕ್ಕ ಹಚ್ಚಿ ಬೆಳೆಸಿ ಹೊಸ ದಿಗಂತದೆಡೆಗೆ ಅಣಿಗೊಳಿಸಿದ ಹಾವೇರಿ ನನಗೆ ಎಲ್ಲಿಲ್ಲದ ಪ್ರೀತಿ. ನನ್ನ ವಿದ್ಯಾ ಗುರು ರಾ.ಕು., ಬಿದರಿ, ಹಿರೇಮಠ ಇನ್ನೂ ಅನೇಕರು ನನ್ನ ಮನಸ್ಸಿನಲ್ಲಿ ಶಾಶ್ವತವಾಗಿದ್ದಾರೆ. ಕಸಾಪ ಕಾರ್ಯಕಾರಿ ಸಮಿತಿಯ ಪ್ರೀತಿಯ ಆಗ್ರಹ ನನ್ನನ್ನು ಅಧ್ಯಕ್ಷನನ್ನಾಗಿ ಒಪ್ಪಿಕೊಳ್ಳುವಂತೆ ಮಾಡಿದೆ ಎಂದರು.
ವಿರೂಪಾಕ್ಷಪ್ಪ ಪಡಿಗೋದಿ, ಪ್ರಭುಲಿಂಗಪ್ಪ ಹಲಗೇರಿ, ಎಂ.ಎಂ. ಪಾಟೀಲ, ಬಿ. ಶ್ರೀನಿವಾಸ, ಧರಣೇಂದ್ರ ಕುರಕುರಿ, ಕೃಷ್ಣಮೂರ್ತಿ, ಪ್ರೊ ಎಸ್.ಪಿ. ಗೌಡರ, ಮಾಲತೇಶ ಅರಳಿಮಟ್ಟಿ, ಶಿವಾನಂದ ಸಂಗಾಪುರ, ಮಲ್ಲಿಕಾರ್ಜುನ ಶಾಂತಗಿರಿ, ಪ್ರಾಚಾರ್ಯ ಹೇಮಂತ ಗಂಟೇರ, ಜಿ.ಎನ್. ಜಾವೂರ, ವಿ.ವಿ. ಮಾತನವರ, ಎಂ.ಸಿ. ಬೆನಕನಕೊಂಡ, ಎಂ.ಎಂ. ಕರೆಣ್ಣನವರ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

