ಸಾವಯವ ಕೃಷಿ ವಿಸ್ತಾರ ಅಗತ್ಯ
ಗುದ್ಲೆಪ್ಪ ಹಳ್ಳಿಕೇರಿ ವೇದಿಕೆ, ಹೊಸರಿತ್ತಿ
ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿರುವ, ಸಾಮಾಜಿಕ ಬದಲಾವಣೆಗೆ ಕಾರಣವಾಗಬೇಕಿರುವ ವಿಷಯವೇ ಸಾವಯವ ಕೃಷಿ. ಈ ಕುರಿತಂತೆ ಚರ್ಚೆಗಳಾಗುತ್ತಿದ್ದು, ಇನ್ನೂ ವ್ಯಾಪಕತೆ ಪಡೆಯಬೇಕಿದೆ ಎಂದು ಧಾರವಾಡದ ಸಾವಯವ ಕೃಷಿ ಸಂಸ್ಥೆ ಮುಖ್ಯಸ್ಥ ಡಾ. ಎಚ್.ಬಿ. ಬಬಲಾದ ನುಡಿದರು.
ತಾಲೂಕಿ ಹೊಸರಿತ್ತಿಯ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜು ಆವರಣದಲ್ಲಿ ನಡೆಯುತ್ತಿರುವ 7ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಂಕೀರ್ಣ ಗೋಷ್ಠಿಯಲ್ಲಿ ಪಾಲ್ಗೊಂಡು ಸಾವಯವ ಕೃಷಿ ಒಂದು ಸುಸ್ಥಿರ ಕೃಷಿ ಎಂಬ ವಿಷಯ ಕುರಿತು ಮಾತನಾಡಿದರು.
ಸಮಯೋಚಿತ ನಿರ್ಧಾರ:ಇತ್ತೀಚಿನ ದಿನಗಳಲ್ಲಿ ಸಾವಯವ ಕೃಷಿ ಕುರಿತಂತೆ ಉತ್ತಮ ಸ್ಪಂದನೆ, ಜಾಗೃತಿ ಮೂಡುತ್ತಿರುವುದು ಸಾವಯವ ಕೃಷಿಕರಿಂದ. 2003-04ರಲ್ಲಿ ಕೇವಲ 35 ಸಾವಿರ ಎಕರೆ ಭೂಮಿ ಸಾವಯವ ಕೃಷಿಗೆ ಒಳಪಟ್ಟಿತ್ತು. ಸಾವಯವ ಕೃಷಿಕರಲ್ಲಿನ ಸಮಯೋಚಿತ ನಿರ್ಧಾರ, ಚಿಂತನೆ ಚರ್ಚೆಗಳಿಂದಾಗಿ 2011-12ನೇ ಸಾಲಿನಲ್ಲಿ ಸುಮಾರು 31 ಲಕ್ಷ ಹೆಕ್ಟೇರ್ನಷ್ಟು ಭೂಮಿ ಸಾವಯವ ಕೃಷಿ ಒಳಪಟ್ಟಿದ್ದು, ಇದು ಈ ಕುರಿತಂತೆ ರೈತರಲ್ಲಿನ ಸೂಕ್ತ ಸಮಯೋಚಿತ ಜಾಗೃತಿಗೆ ಹಿಡಿದ ಕನ್ನಡಿ ಎಂದರೇ ತಪ್ಪಾಗಲಾರದು ಎಂದರು.
ಇತ್ತೀಚಿನ ದಿನಗಳಲ್ಲಿ ಸರ್ಕಾರ ಎಚ್ಚೆತ್ತುಕೊಂಡಿದ್ದು, ಸಾವಯವ ಕೃಷಿಗೆ ಪ್ರಾಶಸ್ತ್ಯ ಕಲ್ಪಿಸುತ್ತಿವೆ. ಈ ಕುರಿತಂತೆ ಸಂಶೋಧನೆ, ಅಭಿವೃದ್ಧಿ ನಡೆದು, ಸಂಶೋಧಕರು, ವಿಜ್ಞಾನಿಗಳು ಹಾಗೂ ರೈತರು ನೂತನ ಚಿಂತನೆಗಳಲ್ಲಿ ತೊಡಗಿಸಿಕೊಂಡರು. ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿ ಫಲವತ್ತತೆ ಕುಂಠಿತವಾಗುತ್ತಿರುವುದು ಆತಂಕದ ವಿಷಯ ಎಂದು ಹೇಳಿದರು.
ಅಲಭ್ಯ: ರಾಸಾಯನಿಕಗಳಲ್ಲಿ ನೈಟ್ರೇಟ್ ಬಳಕೆಯಿಂದಾಗಿ ಕುಡಿಯುವ ನೀರಿನ ಮೂಲವೇ ಕಲುಷಿತಗೊಂಡಿದೆ. ಭೂಮಿ, ಮಾನವನ ಫಲವತ್ತೆಯೂ ಕುಸಿದಿದೆ. ಶುದ್ಧ ಕುಡಿಯುವ ನೀರು ದೊರಕದಂತಾಗಿದೆ. ಪೌಷ್ಟಿಕ ಆಹಾರವೂ ಸಿಗದಾಗಿದೆ.
ಸಾವಯವ ಕೃಷಿಯಲ್ಲಿ ಹೆಚ್ಚಿನ ಸಂಶೋಧನೆಗಳಾಗುತ್ತಿರುವುದು ಸ್ವಾಗತಾರ್ಹ. ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ರಾಸಾಯನಿಕ ರಹಿತ ಕೃಷಿಯ ಅಗತ್ಯ ಈ ಹಿಂದಿಗಿಂತ ಇಂದು ಹೆಚ್ಚಿದೆ. ದೇಶದ ಆಹಾರ ಭದ್ರತೆ ಸಾವಯವ ಕೃಷಿಯಿಂದ ಮಾತ್ರವೇ ಸಾಧ್ಯವಾಗಲಿದೆ. ಈ ಕುರಿತಂತೆ ಎಲ್ಲರೂ ಸಹಕರಿಸಬೇಕಿದೆ. ವೈಜ್ಞಾನಿಕ ಹಾಗೂ ತಾಂತ್ರಿಕತೆ ಅಳವಡಿಸಿಕೊಂಡು ಸಾವಯವ ಕೃಷಿಯೆಡೆಗೆ ಎಲ್ಲರೂ ಸಾಗಬೇಕಿದೆ ಎಂದರು.
ಪತ್ರಕರ್ತ ಡಾ. ಸಿದ್ದನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಡಾ. ಭೋಜರಾಜ ಪಾಟೀಲ, ಡಾ. ರಾಮರೆಡ್ಡಿ ರಡ್ಡೇರ, ಡಾ. ಎಚ್.ಡಿ. ಪ್ರಶಾಂತ, ಪತ್ರಕರ್ತ ವಿಜಯ ಹೂಗಾರ ಮುಂತಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

