ಜಾನಪದ ಕಲೆ ಬೆಳೆಸಿ: ಮೂಲಗಿ
ಶಿಗ್ಗಾಂವಿ: ಜನರಿಂದಲೇ ಹುಟ್ಟಿರುವ ಜಾನಪದ ಕಲೆ, ಸಾಹಿತ್ಯ ಉಳಿಸಿ ಬೆಳೆಸುವ ಹೊಣೆಗಾರಿಕೆ ಪ್ರತಿಯೊಬ್ಬರದ್ದಾಗಿದೆ. ಈ ದಿಸೆಯಲ್ಲಿ ಮುನ್ನಡೆಯಬೇಕಿದೆ ಎಂದು ಜಾನಪದ ತಜ್ಞ ಡಾ ರಾಮು ಮೂಲಗಿ ಅಭಿಪ್ರಾಯಪಟ್ಟರು.
ಪಟ್ಟಣದ ಕರ್ನಾಟಕ ಕೀರ್ತಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ 'ಜನರತ್ತ ಜಾನಪದ ವಿಶ್ವವಿದ್ಯಾಲಯ' ಕಾರ್ಯಕ್ರಮದಲ್ಲಿ ಜಾನಪದ ಗೀತೆಗಳನ್ನು ಹಾಡುವ ಮೂಲಕ ಜಾನಪದ ವಿದ್ಯಾಲಯದ ತರಬೇತಿಗಳ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕೀರ್ತಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಎಂ.ಎನ್. ಮಲ್ಲಾಡದ, ಜಾನಪದ ಸಂಸ್ಕೃತಿಯನ್ನು ಪುನರ್ ರಚಿಸಲು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಸಾಕಷ್ಟು ಶ್ರಮಿಸುತ್ತಿದೆ. ನಾಡು-ನುಡಿಯ ಬಗ್ಗೆ ಅಪಾರ ಜವಾಬ್ದಾರಿ ಹೊಂದಿದೆ. ಪ್ರತಿಯೊಬ್ಬರೂ ಅದರಲ್ಲಿರುವ ತರಬೇತಿಗಳ ಪ್ರಯೋಜನ ಪಡೆಯುವ ಮೂಲಕ ಬದುಕನ್ನು ಹಸನಾಗಿಸಿಕೊಳ್ಳಬೇಕು ಎಂದರು.
ಜಾನಪದ ಕಲಾವಿದ ಬಸವರಾಜ ಶಿಗ್ಗಾವಿ, ವೀರೇಶ ಬಡಿಗೇರ, ಎಚ್.ಎನ್. ನದಾಫ್, ಕಲ್ಲಪ್ಪಣ್ಣ, ಮುಖಂಡರಾದ ಮಂಜುನಾಥ ವಳಗೇರಿ, ಮಂಜುನಾಥ ಕೂಲಿ, ಉಪನ್ಯಾಸಕರಾದ ಎಸ್.ಆರ್. ಕಾರಗಿ, ಜಗದೀಶ ಪುರದ, ಎಂ.ಆರ್. ಅಶೋಕ, ಎಸ್.ಸಿ. ಕುರಂದವಾಡ, ಎಸ್.ಬಿ. ಗೌಡರ, ಗಿರೀಶ ಕುರಂದವಾಡ, ಎಸ್.ಬಿ. ಕುರಬರ, ಎಂ.ಎಸ್. ಕನಕನವರ, ವೈ.ಪಿ. ಹುಲತ್ತಿಯವರ ಮತ್ತಿತರರು ಉಪಸ್ಥಿತರಿದ್ದರು.
ಎಂ.ವಿ. ಗಾಡದ ಸ್ವಾಗತಿಸಿದರು. ಜಾನಪದ ಕಲಾವಿದ ಬಸವರಾಜ ಶಿಗ್ಗಾಂವಿ ಹಾಗೂ ತಂಡದವರು ಜಾನಪದ ಗೀತೆ, ಸುಗ್ಗಿ ಹಾಡು, ಗೀಗೀ ಪದಗಳನ್ನು ಹಾಡಿ ವಿದ್ಯಾರ್ಥಿಗಳ ಮನರಂಜಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

