ಆಟದ ಮೂಲಕ ಪಾಠ ಕಲಿಸಿ
ಹಾನಗಲ್ಲ: ಆಟದ ಮೂಲಕ ಪಾಠ ಕಲಿಸುವ ವಿನೂತನ ಪದ್ಧತಿ ಮಕ್ಕಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವಂತಹದ್ದು ಎಂದು ತಾಪಂ ಅಧ್ಯಕ್ಷ ಮಲ್ಲನಗೌಡ್ರು ವೀರನಗೌಡ್ರ ಅಭಿಪ್ರಾಯಪಟ್ಟರು.
ಹಾನಗಲ್ಲ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಸೇವಾ ನಿರತ ಶಿಕ್ಷಕರಿಗಾಗಿ ನಡೆಯುತ್ತಿರುವ ನಲಿ-ಕಲಿ ತರಬೇತಿ ಶಿಬಿರಕ್ಕೆ ಭೇಟಿ ನೀಡಿ ಶಿಕ್ಷಕರೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡ ಅವರು, ನಲಿ-ಕಲಿ ಯೋಜನೆಯು ಅತ್ಯುತ್ತಮ ಕಲಿಕಾ ಪದ್ಧತಿಯಾಗಿದ್ದು, ಶಿಕ್ಷಕರು ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಪಠ್ಯವನ್ನು ಆಟಿಕೆಗಳ ಮೂಲಕ ಮನದಟ್ಟು ಮಾಡಬಹುದಾಗಿದೆ ಎಂದರು. ತಾಪಂ ಉಪಾಧ್ಯಕ್ಷೆ ಅನಿತಾ ಶಿವೂರ ಮಾತನಾಡಿ, ಪ್ರಾಥಮಿಕ ಶಿಕ್ಷಣ ಮಗುವಿನ ಭವಿಷ್ಯ ರೂಪಿಸುವ ಮೊದಲ ಮೆಟ್ಟಿಲು. ಶಿಕ್ಷಕರು ಇಂತಹ ಹಂತದಲ್ಲಿ ನಿರ್ಮಲ ಮನಸ್ಸಿನ ಮಗುವಿಗೆ ಮೌಲ್ಯಗಳು ಹಾಗೂ ಸಂಸ್ಕಾರಯುತ ಭಾವನೆಗಳನ್ನು ಬಿತ್ತಿ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಅಡಿಪಾಯ ಹಾಕುವ ಕಾರ್ಯಕ್ಕೆ ಮುಂದಾಗಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಎಸ್.ಎಸ್. ಹಿರೇಮಠ, ನಲಿ-ಕಲಿಯ ಯೋಜನೆ ಕುರಿತು ವಿವರಿಸಿದರು. ಕೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ಮಾತನಾಡಿ, ಶಿಕ್ಷಕರು ನೂತನ ಪದ್ಧತಿ ಅಳವಡಿಸಿಕೊಂಡರೆ ಶೈಕ್ಷಣಿಕವಾಗಿ ಹೆಚ್ಚಿನ ಸಾಧನೆ ಸಾಧ್ಯ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಬಾಲಚಂದ್ರ ಅಂಬಿಗೇರ, ಶ್ರೀನಿವಾಸ ದೀಕ್ಷಿತ, ಎಸ್.ಎಫ್. ಕಠಾರೆ ಅಭಿನಯ ಗೀತೆಯ ಚಟುವಟಿಕೆ ಮೂಲಕ ಅತಿಥಿಗಳ ಗಮನ ಸೆಳೆದರು. ಸಂಪನ್ಮೂಲ ವ್ಯಕ್ತಿ ಎ.ವಿ. ಹನುಮಾಪುರ ಕಾರ್ಯಕ್ರಮ ನಿರ್ವಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

