ಸಾಮರಸ್ಯದಿಂದ ಉತ್ತಮ ಸಮಾಜ
ಶಿಗ್ಗಾಂವಿ: ಮನುಕುಲದಲ್ಲಿ ಸ್ವಾರ್ಥ ಹೆಚ್ಚಾಗಿ ಪ್ರತಿಯೊಂದು ರಂಗದಲ್ಲಿ ಸಂಘರ್ಷದ ಮನೋಭಾವನೆ ಬೆಳೆಯುತ್ತಿದೆ. ಅದ್ದರಿಂದ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕಡಿವಾಣವಾಗುತ್ತಿದೆ. ಪರಸ್ಪರ ಸೌಜನ್ಯ ಸಾಮರಸ್ಯದಿಂದ ಮಾತ್ರ ಶಾಂತಿ ನೆಲೆಗೊಳ್ಳಲು ಸಾಧ್ಯ ಎಂದು ಬಾಳೆಹೊನ್ನೂರಿನ ರಂಭಾಪುರಿಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ತಡಸ ಗ್ರಾಮದಲ್ಲಿ ನಡೆದ ವೀರಭದ್ರೇಶ್ವರ ದೇವರ ನೂತನ ಸ್ಥಿರಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯ ಶ್ರೀಗಳ ಅಡ್ಡಪ್ಲಲಕ್ಕಿ ಮಹೋತ್ಸವ ಹಾಗೂ ಧರ್ಮಸಭೆ ಸಾನಿಧ್ಯ ವಹಿಸಿ ಮಾತನಾಡಿದರು.
ಶ್ರೀಗಳ ಕಾರ್ಯ ಶ್ಲಾಘನೀಯ: ಧರ್ಮ ಸಂಸ್ಕೃತಿಯಲ್ಲಿ ಅಡಗಿರುವ ಉದಾತ್ತ ಮೌಲ್ಯಗಳನ್ನು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಬೇಕು. ಧರ್ಮ ಪರಿಪಾಲನೆಯಿಂದ ಬದುಕಿನ ಶ್ರೇಯಸ್ಸಿಗೆ ಕಾರಣ, ವೀರಶೈವ ಧರ್ಮದ ಸಂಹಿತೆಯಲ್ಲಿ ರೇಣುಕಾಚಾರ್ಯರು ತಮ್ಮ ಬದುಕಿನ ಅಧಿಯಲ್ಲಿ ವಿಶಾಲ ತತ್ವದ ತಳಹದಿ ಮೇಲೆ ಮಾನವೀಯ ಸಂಬಂಧಗಳನ್ನು ಬೆಸೆಯುವ ಕಾಯಕ ಮಾಡಿದ್ದಾರೆ. ನೊಂದು, ಬೆಂದವರ ಬಾಳಿನ ಉನ್ನತಿಗಾಗಿ ಶ್ರಮಿಸಿದ್ದನ್ನು ಮರೆಯಲಾಗದು. ಆಧುನಿಕತೆ ಹೆಸರಿನಲ್ಲಿ ವೈಚಾರಿಕತೆ ಸೋಗಿನಲ್ಲಿ ಧರ್ಮ ಸಂಸ್ಕೃತಿ ಮತ್ತು ಪರಂಪರೆ ಕಲುಷಿತಗೊಳ್ಳುಸುತ್ತಿರುವದು ವಿಷಾದದ ಸಂಗತಿಯಾಗಿದೆ ಎಂದರು.
ಇದೇ ಸಂದರ್ಭ ಹುಬ್ಬಳ್ಳಿ ಸುಳ್ಳ ಪಂಚಗ್ರಹ ಹಿರೇಮಠದ ಅಭಿನವ ಸಿದ್ದರಾಮ ಶಿವಾಚಾರ್ಯ ಶ್ರೀಗಳು ರೇಣುಕಾಚಾರ್ಯರ ಮಹಾತ್ಮೆ ಕುರಿತು ಧರ್ಮ ಬೋಧಿಸಿದರು. ಮುಳ್ಳಳ್ಳಿ ಶ್ರೀಕಾಂತ ಶಾಸ್ತ್ರಿಗಳಿಂದ ಸಂಗೀತ ಕಾರ್ಯಕ್ರಮ ನೀಡಿದರು. ದೇವಸ್ಥಾನದಲ್ಲಿ ಹೋಮ, ಹವನ, ರುದ್ರಾಭಿಷೇಕ, ಜಂಗಮ ವಟುಗಳಿಗೆ ಶಿವದೀಕ್ಷೆ ಆಯಾಚಾರ ಕಾರ್ಯಕ್ರಮ ಹಾಗೂ ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ಗ್ರಾಮದ ಪ್ರಮಖ ಬೀದಿಯಲ್ಲಿ ನೂರಾರು ಭಕ್ತ ಸಮೂಹದ ನಡುವೆ ಶ್ರದ್ಧಾಭಕ್ತಿಯಿಂದ ಜರುಗಿತು.
ಕಲಾದಗಿ ಚಂದ್ರಶೇಖರ ಶ್ರೀಗಳು ಉಪದೇಶ ನೀಡಿದರು. ಬಂಕಾಪುರದ ರೇವಣಸಿದ್ದೇಶ್ವರ ಶ್ರೀಗಳು, ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿ ಶಿವಾಚಾರ್ಯರು, ಮಳಲಿಮಠದ ಗುರುನಾಗಭೂಷಣ ಶಿವಾಚಾರ್ಯರು, ಶೈಲೇಶ್ವರ ಮಠದ ಸಿದ್ಧಲಿಂದ ಶಿವಾಚಾರ್ಯರು, ಕುಂದಗೋಳ ಪಂಚಗ್ರಹ ಹಿರೇಮಠದ ಶಿಥಿಕಂಠ ಶಿವಾಚಾರ್ಯರು ಸಮ್ಮುಖ ವಹಿಸ್ದಿದರು.
ಶಾಸಕ ಬಸವರಾಜ ಬೊಮ್ಮಾಯಿ, ವಿಪ ಸದಸ್ಯ ಸೋಮಣ್ಣ ಬೇವಿನಮರದ, ಜಿಪಂ ಸದಸ್ಯ ಸಿ.ಎಸ್. ಪಾಟೀಲ, ತಾಪಂ ಉಪಾಧ್ಯಕ್ಷೆ ಸುನಂದಾಬಾಯಿ ಘೋಡಕೆ, ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಸುರಟಿ, ಉಪಾಧ್ಯಕ್ಷ ಅಬ್ದುಲ್ ಕರಿಂ ಹುಬ್ಬಳ್ಳಿ, ಜ. ರಂಭಾಪುರಿ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ವಿಶ್ವನಾಥ ಕಂಬಾಳಿಮಠ, ಪುಟ್ಟನಗೌಡ್ರ ಪಾಟೀಲ, ಶೇಖಪ್ಪ ನಂಜನವರ, ಕಲ್ಲನಗೌಡ್ರ ಪಾಟೀಲ, ಪ್ರಶಾಂತ ಕಜ್ಜಿ, ಆನಂದಗೌಡ ಪಾಟೀಲ, ಹೇಮಂತ ದೇಟಿನ, ಬಸವರಾಜ ಕೌದಿ, ವೀರಣ್ಣ ಗೋಣೆಪ್ಪನವರ, ಮ್ಲಲಿಕಾರ್ಜುನ ಗುದ್ದೇನವರ, ಬಸವರಾಜ ಗಾಣಿಗೇರ, ಶಿವನಾಗಪ್ಪ ಶೆಟ್ಟರ, ಕೃಷ್ಣಾ ಚವಡಾಳ, ಗಿರೀಶ ಹಿರೇಮಠ, ಎಸ್.ವಿ. ಸೋಮಣ್ಣವರ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

