ಇಂದು ಮಾಸಿಕ ಶಿವಗೋಷ್ಠಿ
ರಾಣಿಬೆನ್ನೂರು: ಶಿವಜ್ಞಾನ ಪ್ರಚಾರ ಪರಿಷತ್ ಹಾಗೂ ತರಳಬಾಳು ಜಗದ್ಗುರುಗಳ ಶಾಖಾಮಠ ರಾಣಿಬೆನ್ನೂರು ಆಶ್ರಯದಲ್ಲಿ ನಗರದ ಹಳೆ ತಹಸೀಲ್ದಾರ್ ಕಚೇರಿ ಹತ್ತಿರವಿರುವ ಶಿವಾ ಹೈಸ್ಕೂಲ್ ಆವರಣದಲ್ಲಿ ಜೂನ್ 10ರಂದು ಸಂಜೆ 5-30ಕ್ಕೆ ಮಾಸಿಕ ಶಿವಘೋಷ್ಠಿ 7 ಎಂಬ ಆಧ್ಯಾತ್ಮಿಕ ಚಿಂತನ ಕಾರ್ಯಕ್ರಮ ಜರುಗಲಿದೆ.
ಸಾಣೆಹಳ್ಳಿಯ ತರಳಬಾಳು ಜಗದ್ಗುರುಗಳ ಶಾಖಾಮಠದ ಪೀಠಾಧಿಪತಿಗಳಾದ ಡಾ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನ್ನಿದ್ಯ ವಹಿಸುವರು.
ತಾಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷರಾದ ಶರಣ ಎಂ.ಎಸ್, ಅರಕೇರಿ ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭದಲ್ಲಿ ನೂತನ ಶಾಸಕ ಕೆ.ಬಿ. ಕೋಳಿವಾಡ ಹಾಗೂ ನಗರಸಭೆಗೆ ಆಯ್ಕೆಯಾಗಿರುವ ಎಲ್ಲಾ ಸದಸ್ಯರುಗಳಿಗೆ ಸನ್ಮಾನಿಸಲಾಗುವುದು.
ಶಿಕಾರಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ ಶೈಲಜಾ ಹೊಸಳ್ಳೇರರವರು, ಬಸವಣ್ಣನವರ ವಿಚಾರಗಳು ಮತ್ತು ಪ್ರಸ್ತುತತೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡುವರು. ಸುಣಕಲ್ಲಬಿದರಿ ಗ್ರಾಮದ ಸಾಧು ವೀರಶೈವ ಸಮಾಜ ಗ್ರಾಮ ಘಟಕದ ಅಧ್ಯಕ್ಷರಾದ ವೀರನಗೌಡ ಪೊಲೀಸ್ಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡುವರು ಎಂದು ಎಪಿಎಂಸಿ ಸದಸ್ಯ ಜಿ.ಜಿ. ಹೊಟ್ಟಿಗೌಡ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅನಧಿಕೃತ ಶಾಲೆ ಘೋಷಣೆ
ರಾಣಿಬೆನ್ನೂರು: ತಾಲೂಕಿನ ಗುಡ್ಡದ ಆನ್ವೇರಿ ಮತ್ತು ಮೇಡ್ಲೆರಿ ಗ್ರಾಮಗಳಲ್ಲಿ 2012-13ನೇ ಸಾಲಿನಲ್ಲಿ ಪ್ರಾರಂಭಗೊಂಡಿರುವ ಮಾರುತಿ ಪ್ರೌಢಶಾಲೆಗಳೆರಡನ್ನು ಅನಧಿಕೃತ ಪ್ರೌಢಶಾಲೆಗಳೆಂದು 2013-14ನೇ ಸಾಲಿನಿಂದ ಘೋಷಿಸಲಾಗಿದೆ.
ಕಾರಣ ಗುಡ್ಡದ ಆನ್ವೇರಿಯ ಮಾರುತಿ ಪ್ರೌಡಶಾಲೆಯ ಮುಖ್ಯ ಶಿಕ್ಷಕರು ಶಾಲೆಯಲ್ಲಿರುವ ಮಕ್ಕಳ ಎಲ್ಲಾ ದಾಖಲಾತಿಗಳನ್ನು ಪಕ್ಕದ ಗ್ರಾಮವಾದ ದೇವರಗುಡ್ಡದಲ್ಲಿರುವ ಮಾಲತೇಶ ಪ್ರೌಢಶಾಲೆ ಹಾಗೂ ಮೇಡ್ಲೆರಿ ಗ್ರಾಮದ ಮಾರುತಿ ಪ್ರೌಢಶಾಲೆ ಶಿಕ್ಷಕರು ಆ ಶಾಲೆಯ ಮಕ್ಕಳ ದಾಖಲಾತಿಗಳನ್ನು ಮೇಡ್ಲೆರಿ ಗ್ರಾಮದಲ್ಲಿರುವ ಬೀರೇಶ್ವರ ಪ್ರೌಢಶಾಲೆಗೆ ಕೂಡಲೆ ಹಸ್ತಾಂತರಿಸಬೇಕು.
ಗುಡ್ಡದ ಆನ್ವೇರಿ ಮತ್ತು ಮೇಡ್ಲೆರಿ ಗ್ರಾಮಗಳ ಸಾರ್ವಜನಿಕರು ತಮ್ಮ ಮಕ್ಕಳನ್ನು ಮಾರುತಿ ಪ್ರೌಢಶಾಲೆಗೆ ಕಳುಹಿಸಬಾರದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಲಕ್ಷ್ಮಣರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

