ಜನಾಕರ್ಷಣೆ ಜಂಬೋ ಸರ್ಕಸ್
ರಾಣಿಬೆನ್ನೂರು: ದೇಶ, ವಿದೇಶಗಳಲ್ಲಿ ಹೆಸರುವಾಸಿಯಾಗಿರುವ ಜಂಬೋ ಸರ್ಕಸ್ ಕಳೆದೊಂದು ವಾರದಿಂದ ನಗರದ ಪಿ.ಬಿ. ರಸ್ತೆ ಪಕ್ಕದಲ್ಲಿರುವ ಬಿ.ಟಿ. ಪಾಟೀಲ ಮೈದಾನದಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ದೇಶ, ವಿದೇಶ ಮಟ್ಟದ ಕಲಾವಿದರು ಸರ್ಕಸ್ ಪ್ರದರ್ಶಿಸುವ ಕಲೆಗಳು ಜನಾಕರ್ಷನೀಯವಾಗಿವೆ.
ನೋಡಲು ಬಹು ಆಕರ್ಷಣಿಯವಾಗಿರುವ ಮಹಿಳೆಯರು ಸೇರಿದಂತೆ 45 ಜನ ಕಲಾವಿದರು ತಮ್ಮ ಮನಸನ್ನು ಹಿಡಿತದಲ್ಲಿಟ್ಟುಕೊಂಡು, ದೈಹಿಕ ಕಸರತ್ತಿನಿಂದ ಪ್ರತಿದಿನ ಮಧ್ಯಾಹ್ನ 1ರಿಂದ ರಾತ್ರಿ 9ರ ವರೆಗೆ ಪ್ರದರ್ಶನಗೊಳ್ಳಲಿರುವ 3 ಆಟಗಳಲ್ಲಿ ತಮ್ಮ ನೈಜಕಲೆ ಪ್ರದರ್ಶಿಸುತ್ತಿದ್ದಾರೆ.
ಸರ್ಕಸ್ ಪ್ರಾರಂಭದಿಂದ ಮುಕ್ತಾಯದವರೆಗೆ ಕಲಾವಿದರು ನೀಡುವ ಸಾಹಸಮಯ ಪ್ರದರ್ಶನವನ್ನು ನೋಡುತ್ತಿರುವ ಪ್ರೇಕ್ಷಕರಿಗೆ ರೋಮಾಂಚನವೆನ್ನಿಸದಿರಲಾರದು. ಬಾಯಿಂದ ಬೆಂಕಿ ಉಗುಳುವುದು, ಕಬ್ಬಿಣದ ಬಲೆಯೊಳಗೆ ಬೈಕ್ ಸವಾರರಿಬ್ಬರು ಬೈಕ್ ಓಡಿಸುವುದು, ಹದಿ ಹರೆಯದ ಯುವತಿಯರು ಕಾಲಿಗೆ ಹಗ್ಗ ಕಟ್ಟಿಕೊಂಡು ಒಂದು ಬದಿಯಿಂದ ಮತ್ತೊಂದು ಬದಿಗೆ ಜಿಗಿಯುವದು, ಸುಮಾರು 40 ಅಡಿ ಎತ್ತರದಲ್ಲಿ ಯಾವ ಸಹಾಯವಿಲ್ಲದೆ ಹಗ್ಗದ ಮೇಲೆ ಯುವತಿಯೊಬ್ಬಳು ನೀಡುವ ಪ್ರದರ್ಶನ ಹಾಗೂ ಒಬ್ಬ ಯುವತಿಯು ತನ್ನ ಕಾಲುಗಳಗೆ ಜೊತು ಬಿದ್ದ ನಾಲ್ಕು ಯುವತಿಯರನ್ನು ಮೇಲಕ್ಕೆತ್ತುವುದನ್ನು ನೋಡಿದರೆ ಮೈ ಜುಮ್ಮೆನ್ನುತ್ತದೆ. ಒಂಟಿಯ ಜೀವನ ಕಥೆ, ಆನೆಯ ಕ್ರಿಕೆಟ್, ಕತ್ತೆ ಹೊತ್ತ ಭಾರ ಯಾರಿಗೆ ಬ್ಯಾಡ, ಆಫ್ರಿಕನ್ ಗಿಳಿಗಳ ನಾಟ್ಯ, ನಾಯಿ ಮತ್ತು ನಾಯಿಮರಿಗಳು ಆಡುವ ಡೆಂಬೆಲ್ಸ್ ಹಾಗೂ 3 ಅಡಿ 20 ಇಂಚು ಎತ್ತರದ ಕುಳ್ಳರು, ಜೋಕರ್ಗಳು ನೀಡುವ ಪ್ರದರ್ಶನ ಆಕರ್ಷಣಿಯವಾಗಿವೆ. ಒಬ್ಬ ಜೋಕರ್ ತಾನು ಕುಡಿದಿದ್ದ ಬಣ್ಣ ಬಣ್ಣದ ನೀರನ್ನು ಮರಳಿ ಹಾಗೆಯೇ ತನ್ನ ಬಾಯಿಂದ ಪ್ರತ್ಯೇಕವಾಗಿ ಹೊರಗೆ ತೆಗೆಯುವ ಕಲೆಗೆ ನೋಡುಗರು ಬೆರಗಾಗದೆ ಇರಲಾರರು.
-ಸಾಬ್ಜಾನ್ ಇಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

