ಗಣಿತ ಕಬ್ಬಿಣದ ಕಡಲೆಯಲ್ಲ
ಹಾನಗಲ್ಲ: ಗಣಿತ ಕಬ್ಬಿಣದ ಕಡಲೆಯಲ್ಲ. ವಿದ್ಯಾರ್ಥಿಗಳು ಆಸಕ್ತಿಯಿಂದ ಈ ವಿಷಯಕ್ಕೆ ಹೆಚ್ಚು ಒತ್ತು ನೀಡಿ ಅಭ್ಯಸಿಸಿದಾಗ ಯಾವುದೂ ಕಠಿಣವಲ್ಲ. ಗಣಿತ ವಿಷಯದಲ್ಲಿ ಹೆಚ್ಚು ಸಾಧನೆ ಮಾಡಿದ ಸಮಾಧಾನ ತಮಗಿದೆ ಎಂದು ಜನತಾ ಬಾಲಿಕೆಯರ ಫ್ರೌಢಶಾಲೆ ಮುಖ್ಯೋಪಾಧ್ಯಾಯ ಎಚ್.ಕೆ. ನಾಗರವಳ್ಳಿ ಹೇಳಿದರು.
ಶನಿವಾರ ಜನತಾ ಬಾಲಿಕೆ ಪ್ರೌಢಶಾಲೆಯಲ್ಲಿ, ಶಾಲಾ ಸಿಬ್ಬಂದಿ ಆಯೋಜಿಸಿದ್ದ ಬೀಳ್ಕೊಡುಗೆ ಹಾಗೂ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮೂರೂವರೆ ದಶಕಗಳ ತಮ್ಮ ಶಿಕ್ಷಕ ಸೇವೆ ತೃಪ್ತಿ ತಂದಿದೆ. 1977ರಲ್ಲಿ ಜನತಾ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸೇವೆ ಪ್ರಾರಂಭಿಸಿ, ಮುಂದೆ ಇದೇ ಸಂಸ್ಥೆಯ ಹಲವು ಪ್ರೌಢಶಾಲೆಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತಿದ್ದರಿಂದ ಗಣಿತ ಹಾಗೂ ವಿಜ್ಞಾನ ವಿಷಯಗಳಲ್ಲಿ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿ ಉನ್ನತ ಶ್ರೇಣಿಗಳಲ್ಲಿ ತೇರ್ಗಡೆಗೊಳ್ಳುವಂತೆ ಪ್ರಾಮಾಣಿಕ ಪ್ರಯತ್ನ ಮಾಡಲು ಸಾಧ್ಯವಾಯಿತು ಎಂದು ತಮ್ಮ ಅನುಭವ ಹಂಚಿಕೊಂಡರು.
ಹಿರೇಕಣಗಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಎನ್.ಐ. ಕೋಮಾರ, ಶಿಕ್ಷಕ ತನ್ನ ವೃತ್ತಿಜೀವನದಲ್ಲಿ ಪರಿಪೂರ್ಣ ಹಾಗೂ ನಿಸ್ವಾರ್ಥ ಸೇವೆ ಸಲ್ಲಿಸಿದಾಗ ಮಾತ್ರ ವಿದ್ಯಾರ್ಥಿಗಳ ಮನದಲ್ಲಿ ಉಳಿಯಲು ಸಾಧ್ಯ. ವಿಶ್ರಾಂತ ಜೀವನಕ್ಕೆ ತೆರಳುತ್ತಿರುವ ನಾಗರವಳ್ಳಿಯವರ ಸೇವೆ ಅಪಾರ. ಇಂಥ ಶಿಕ್ಷಕರು ಸಿಕ್ಕಿದ್ದು ನಿಮ್ಮೆಲ್ಲರ ಪುಣ್ಯ ಇವರ ಶಿಕ್ಷಕ ವೃತ್ತಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಕಲಿತು ಮುಂದೆ ಬಂದಿದ್ದಾರೆ. ಅವರ ನಿವೃತ್ತಿ ಜೀವನ ಸುಖಕರವಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಜನತಾ ಬಾಲಿಕೆ ಫ್ರೌಡಶಾಲೆಯ ವಿ.ಎಲ್. ಚೌಹಾಣ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ರಾಕೇಶ ಜಿಗಳಿ, ಎಸ್.ಜಿ. ಗಿರೆಣ್ಣನವರ, ಪ್ರಕಾಶ ಚೌಹಾಣ, ರೂಪಶ್ರೀ ಕೆ, ಕೆ. ರೇಣುಕಾ, ಎನ್.ಎಂ. ಹೊಳಲದ, ವಿಜಯ ರಿತ್ತಿ, ಮಲ್ಲಮ್ಮ ಹಿರೇಮಠ, ಗಿರೀಶ ಮತ್ತೂರ, ಎಸ್.ಎಸ್. ಕಾಶೀಕರ, ಟಿ.ಆರ್. ವೇದಂಭಟ್ನವರ, ಲಲಿತಾ ನಾಗರವಳ್ಳಿ, ಲಕ್ಷೀ ನಾಗರವಳ್ಳಿ, ವೈಷ್ಣವಿ ಚಿಕ್ಕಣ್ಣನವರ ಇದ್ದರು. ಜಯಶ್ರೀ ಆರ್. ಸ್ವಾಗತಿಸಿದರು. ನಿರಂಜನ ಗುಡಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

