ಏತ ನೀರಾವರಿ ಆರಂಭಿಸಿ
ಹಿರೇಕೆರೂರು: ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರಕ್ಕಾಗಿ ಶುಕ್ರವಾರ ಬಸರೀಹಳ್ಳಿ ಗ್ರಾಮದ ಹೆಲಿಪ್ಯಾಡ್‌ಗೆ ಬಂದಿಳಿದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ರೈತ ಸಂಘದ ಪದಾಧಿಕಾರಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು.
ತಾಲೂಕಿನಲ್ಲಿ ಸ್ಥಾಪನೆಯಾಗಿ ನಿಂತಿರುವ ಯಲಿವಾಳ, ಬೈರನಪಾದ, ಮದಗ ಮಾಸೂರು, ಕವಳಿಕುಪ್ಪಿ ಏತ ನೀರಾವರಿ ಯೋಜನೆಗಳನ್ನು ಪುನಃ ಪ್ರಾರಂಭಿಸಬೇಕು. ಮದಗ ಮಾಸೂರು ಕೆರೆ ಸಹಿತ ತಾಲೂಕಿನ ಎಲ್ಲಾ ಕೆರೆಗಳಿಗೆ ತುಂಗಾ ಮೇಲ್ದಂಡೆ ಯೋಜನೆ ಕಾಲುವೆಯಿಂದ ನೀರು ತುಂಬಿಸಬೇಕು.
ಏತ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು. ಮದಗ ಮಾಸೂರು ಕೆರೆಯ ಅಚ್ಚುಕಟ್ಟು ಪ್ರದೇಶದ ಕಾಲುವೆಗಳನ್ನು ಆಧುನೀಕರಣ ಮಾಡಬೇಕು. ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ರಾಜ್ಯದಲ್ಲಿ ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂ, ಚೆಸ್ಕಾಂ, ಬೆಸ್ಕಾಂ ವಿಭಾಗಗಳನ್ನು ವಿಸರ್ಜನೆ ಮಾಡಿ ಈ ಮೊದಲಿನಂತೆ ಕೆಇಬಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಉತ್ತರ ಕರ್ನಾಟಕದ ವಿದ್ಯುತ್ ಸಮಸ್ಯೆಯನ್ನು ಹೋಗಲಾಡಿಸಬೇಕೆಂದು ಮನವಿ ಮಾಡಿದರು.
ನೀರಾವರಿ ಪದ್ಧತಿಯಲ್ಲಿ ಶೇ. 75ರಷ್ಟು ಸಹಾಯ ಧನವನ್ನು ನೇರವಾಗಿ ರೈತರಿಗೆ ಒದಗಿಸಬೇಕು. ಟ್ರ್ಯಾಕ್ಟರ್ ಖರೀದಿಸಿದ ರೈತರಿಗೆ ಸಹಾಯ ಧನ ಯೋಜನೆ ಜಾರಿಗೆ ಬರಬೇಕು. ಅಗ್ನಿ ಆಕಸ್ಮಿಕದಿಂದ ರೈತರಿಗೆ ಉಂಟಾಗುವ ಹಾನಿಗೆ ಸೂಕ್ತ ಪರಿಹಾರ ನೀಡಬೇಕು. ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆಗಟ್ಟಬೇಕು ಎಂದು ಒತ್ತಾಯಿಸಿದರು. ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಪ್ರೊ. ನಂಜುಂಡಸ್ವಾಮಿ ಬಣದ ರೈತ ಸಂಘದ ಅಧ್ಯಕ್ಷ ರಾಜಶೇಖರ ದೂದೀಹಳ್ಳಿ, ರಾಜ್ಯ ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ, ಬಸನಗೌಡ ಗಂಗಪ್ಪಳ್ಳವರ, ಶಿವನಗೌಡ ಹೊಸಗೌಡ್ರ, ಮಲ್ಲನಗೌಡ ಸೊರಟೂರು, ಎಲ್.ವಿ. ಸಂಕೊಳ್ಳಿ, ಸೋಮಶೇಖರಪ್ಪ ಚಪ್ಪರದಳ್ಳಿ, ಶಂಕ್ರಗೌಡ ಮಕ್ಕಳ್ಳಿ, ಈರಪ್ಪ ಗೋಣಿಮಠ, ಚನ್ನಪ್ಪ ಆರೀಕಟ್ಟಿ, ಈರನಗೌಡ ಕೆರೂರು, ಶಿವನಗೌಡ ಪಾಟೀಲ, ಬೀಮಪ್ಪ ನರೇಗೌಡ್ರ, ಜಗದೀಶ ಶಿರಗಂಬಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

