ಇಂದಿನಿಂದ ಯುವ ಕಾವ್ಯ ಕಮ್ಮಟ
ಹಾವೇರಿ:ಡಾ.ವಿ.ಕೃ. ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ನ ಆಶ್ರಯದಲ್ಲಿ ಮಾ.14ರಿಂದ 17ರವರೆಗೆ ಯುವ ಕಾವ್ಯ ಕಮ್ಮಟವನ್ನು ಇಲ್ಲಿನ ವಾರ್ತಾ ಭವನದಲ್ಲಿ ಆಯೋಜಿಸಲಾಗಿದೆ.
ಮಾ.14ರಂದು ಬೆಳಗ್ಗೆ 10ಕ್ಕೆ ಉದ್ಘಾಟನಾ ಸಮಾರಂಭ ಜರುಗುವುದು. ನಾಡಿನ ಹಿರಿಯ ಕವಿ ಜಿನದತ್ತ ದೇಸಾಯಿ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಗೋಕಾಕ ಟ್ರಸ್ಟ್ನ ಅಧ್ಯಕ್ಷ ನಾಡೋಜ ಪಾಟೀಲ ಪುಟ್ಟಪ್ಪ ವಹಿಸುವರು. ಅತಿಥಿಗಳಾಗಿ ಗೋಕಾಕರ ಪುತ್ರಿ ಡಾ.ಯಶೋಧಾ ಭಟ್ಟ ಆಗಮಿಸುವರು. ಅಪರ ಜಿಲ್ಲಾಧಿಕಾರಿ ಜಿ. ಜಗದೀಶ, ಟ್ರಸ್ಟ್ನ ಹಿರಿಯ ಸದಸ್ಯ ಎನ್.ಪಿ. ಭಟ್ಟ, ವಾರ್ತಾಧಿಕಾರಿ ಸಿ.ಪಿ. ಮಾಯಾಚಾರಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಿಂಗಪ್ಪ ಚಾವಡಿ ಭಾಗವಹಿಸುವರು.
ಮಧ್ಯಾಹ್ನ 2.30ಕ್ಕೆ ಕನ್ನಡ ವಿಮರ್ಶಾ ಪರಂಪರೆ ಕುರಿತು ಡಾ.ಜಿ.ಎಂ. ಹೆಗಡೆ ಹಾಗೂ ಜಾನಪದ ಕಾವ್ಯ ಪರಂಪರೆ ಕುರಿತು ಡಾ. ನಿಂಗಪ್ಪ ಮುದೇನೂರ ಉಪನ್ಯಾಸ ನೀಡುವರು.
ಮಾ.15ರಂದು ಬೆಳಗ್ಗೆ 10ಕ್ಕೆ ನವೋದಯ ಕಾವ್ಯ ಪಂಪರೆ ಕುರಿತು ಹೇಮಾ ಪಟ್ಟಣಶೆಟ್ಟಿ, ನವ್ಯ ಕಾವ್ಯ ಕುರಿತು ಕವಿ ಜಗದೀಶ ಮಂಗಳೂರಮಠ ಮಾತನಾಡುವರು.
ನಂತರ ನಡೆಯುವ ಕವಿ ಕಾವ್ಯ ಸಂವಾದದಲ್ಲಿ ಶಿರಸಿಯ ಡಾ.ಧರಣೇಂದ್ರ ಕುರಕುರಿ, ಸಂಕಮ್ಮ ಸಂಕಣ್ಣನವರ, ಗಂಗಾಧರ ನಂದಿ ಹಾಗೂ ಮಾರುತಿ ಶಿಡ್ಲಾಪುರ ಭಾಗವಹಿಸುವರು.
ಮಾ.16ರಂದು ಬೆಳಗ್ಗೆ 10ಕ್ಕೆ ಮಹಿಳಾ ಕಾವ್ಯ ಕುರಿತು ಕವಯತ್ರಿ ಮಾಲತಿ ಪಟ್ಟಣಶೆಟ್ಟಿ, ದಲಿತ ಬಂಡಾಯ ಕಾವ್ಯ ಪರಂಪರೆ ಕುರಿತು ಮೋಹನ ನಾಗಮ್ಮನವರ ಉಪನ್ಯಾಸ ನೀಡುವರು. ಮಧ್ಯಾಹ್ನ ಕವಿ ಕಾವ್ಯ ಸಂವಾದದಲ್ಲಿ ವಿಜಯಕಾಂತ ಪಾಟೀಲ ಮತ್ತು ಬಿ. ಶ್ರೀನಿವಾಸ ಪಾಲ್ಗೊಳ್ಳುವರು. ಮಾ.17ರಂದು ಬೆಳಗ್ಗೆ 11ಕ್ಕೆ ಪರಂಪರೆ ಕುರಿತು ಗೋಷ್ಠಿ ಜರುಗಲಿದೆ. ಅಧ್ಯಕ್ಷತೆಯನ್ನು ಡಾ.ಐ.ಎ. ಲೋಕಾಪುರ ವಹಿಸುವರು. ಪ್ರಾತ್ಯಕ್ಷಿಕೆಯಲ್ಲಿ ಕೆ.ಆರ್. ಹಿರೇಮಠ, ಬಸವರಾಜ ಶಿಗ್ಗಾಂವಿ, ಮಾಲತೇಶ ಮರಿಗೂಳಪ್ಪನವರ ಹಾಗೂ ಎ.ಬಿ. ಗುಡ್ಡಳ್ಳಿ ಪಾಲ್ಗೊಳ್ಳುವರು. ಇವುಗಳ ರಚನಾ ವಿಧಾನ ಕುರಿತು ನಾಗರಾಜ ನಡುವಿನಮಠ ವಿವರಣೆ ನೀಡುವರು.
ಮಧ್ಯಾಹ್ನ ಜರುಗುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಹಾವೇರಿ ಜಿಲ್ಲಾ ಕಸಾಪ ಅಧ್ಯಕ್ಷ ಜಿ.ಬಿ. ಮಾಸಣಗಿ ವಹಿಸುವರು. ಕವಿವಿ ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿ ಡಾ.ಟಿ.ಎಂ. ಭಾಸ್ಕರ ಸಮಾರೋಪ ಭಾಷಣ ಮಾಡುವರು. ಅತಿಥಿಗಳಾಗಿ ಪ್ರಾಚಾರ್ಯೆ ಡಾ.ಸವಿತಾ ಹಿರೇಮಠ, ಪತ್ರಕರ್ತ ಗಂಗಾಧರ ಹೂಗಾರ, ಸುರೇಶ ನಾಯ್ಕ, ಸಿ.ಆರ್. ಮಾಳಗಿ ಹಾಗೂ ತಾಲೂಕು ಕಸಾಪ ಅಧ್ಯಕ್ಷ ವೈ.ಬಿ. ಆಲದಕಟ್ಟಿ ಆಗಮಿಸುವರು. ಸಾಹಿತಿ ಸತೀಶ ಕುಲಕರ್ಣಿ ಮತ್ತು ಡಾ.ಪಿ.ಟಿ. ಲಕ್ಕಣ್ಣನವರ ಶಿಬಿರದ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

