ಎಂ.ಎಚ್. ಪಾಟೀಲಗೆ ಸನ್ಮಾನ
ರಾಣಿಬೆನ್ನೂರು: ಇಲ್ಲಿನ ತಾಲೂಕು ಅಕ್ಷರ ದಾಸೋಹ ಕಾರ್ಯಕ್ರಮ ಸಹಾಯಕ ನಿರ್ದೇಶಕ ಎಂ.ಎಚ್. ಪಾಟೀಲ ಅವರು, ಬೆಳಗಾವಿಯ ಡಯಟ್ ಹಿರಿಯ ಇಂಗ್ಲಿಷ್ ಉಪನ್ಯಾಸಕರಾಗಿ ಪದೋನ್ನತಿ ಹೊಂದಿರುವ ಕಾರಣ ಅವರ ಹುಟ್ಟೂರು ಹಾಗೂ ಪ್ರಾಥಮಿಕ ಶಿಕ್ಷಣವನ್ನು ಕಲಿತ ತಾಲೂಕಿನ ಪತ್ತೆಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಪಂ ಇಓ ಅವರು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ ಎಂ.ಎಚ್. ಪಾಟೀಲ ಮಾತನಾಡಿ, ತಮ್ಮ ತಂದೆಯಿಂದ ಬಂದ ಬಳುವಳಿ ಈ ಶಿಕ್ಷಕ ವೃತ್ತಿ ಎಂದು ಸ್ಮರಿಸಿಕೊಂಡರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಪಂ ಇಓ ಉಜನೆಪ್ಪ ಮಾತನಾಡಿ, ದೇಶದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿ ಸೇವೆ ಸಲ್ಲಿಸಿರುವವರಲ್ಲಿ, ಅನೇಕರು ಗ್ರಾಮೀಣ ಪ್ರದೇಶಗಲ್ಲಿ ಹುಟ್ಟಿ ಬೆಳೆದವರೇ ಆಗಿದ್ದು, ಅವರಲ್ಲಿ ಪಾಟೀಲರೂ ಒಬ್ಬರು. ಅವರ ಸಾಧನೆ ಮಾದರಿಯಾಗಿದೆ ಎಂದರು. ಪತ್ತೆಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎಚ್.ಎಂ. ಪಾಟೀಲ, ಎಸ್ಡಿಎಂಸಿ ಅಧ್ಯಕ್ಷ ಲಿಂಗರಾಜ ಪರಸಣ್ಣನವರ, ಲಕ್ಷ್ಮವ್ವ ಚಿತ್ತಣ್ಣನವರ, ಎಚ್.ಎಚ್. ಬ್ಯಾಲದಹಳ್ಳಿ, ಬಸನಗೌಡ ಪರಸಣ್ಣನವರ, ಎಚ್.ಆರ್. ವೆಂಕಣ್ಣನವರ, ಜಿ.ಉಷಾ, ಕೆ.ಬಿ. ಕೀರಗೇರಿ, ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

