ಮಾಜಿ ಸೈನಿಕರಿಗೆ ಸೂಚನೆ
ಹಾವೇರಿ: ಜಿಲ್ಲೆಯಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2013ರ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಲಿಚ್ಛಿಸುವ ಮಾಜಿ ಸೈನಿಕರು ತಮ್ಮ ಹೆಸರನ್ನು ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಧಾರವಾಡ ಅವರಲ್ಲಿ ಏ. 4ರೊಳಗಾಗಿ ನೋಂದಾಯಿಸಬಹುದೆಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ-0836-2440176 ಇಲ್ಲಿಗೆ ಸಂಪರ್ಕಿಸಬಹುದು.
ವ್ಯಕ್ತಿ ನಾಪತ್ತೆ
ಹಾವೇರಿ: ದುಡಿಯಲೆಂದು ಹೋದವನು ತಿರುಗಿ ಮನೆಗೆ ಬಾರದೆ ನಾಪತ್ತೆಯಾದ ಘಟನೆ ಬ್ಯಾಡಗಿ ತಾಲೂಕಿನ ಬೆಳಕೇರಿ ಗ್ರಾಮದಲ್ಲಿ ಜರುಗಿದೆ. ಕಾಣೆಯಾದವನ್ನು ನಾಗಪ್ಪ ಫಕ್ಕೀರಪ್ಪ ಹೊಳೆಯಮ್ಮನವರ (54) ಎಂದು ಗುರುತಿಸಲಾಗಿದೆ. 2010ರ ಅಕ್ಟೋಬರ್ನಲ್ಲಿ ದುಡಿಯಲೆಂದು ಉಡುಪಿಗೆ ಹೋಗಿದ್ದು, ಇನ್ನೂ ಮನೆಗೆ ಮರಳಿಲ್ಲ ಎಂದು ಆತನ ಪತ್ನಿ ಪುಟ್ಟವ್ವ ನಾಗಪ್ಪ ಹೊಳೆಯಮ್ಮನವರ ಬ್ಯಾಡಗಿ ಪೊಲೀಸ್ ಠಾಣೆಗೆ ವರದಿ ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ.
ನದಿಯಲ್ಲಿ ಮುಳುಗಿ ಸಾವು
ಹಾವೇರಿ: ಅಕಸ್ಮಾತ್ತಾಗಿ ತುಂಗಭದ್ರಾ ನದಿಗೆ ಇಳಿದ ವ್ಯಕ್ತಿಯೋರ್ವ ಅಲ್ಲಿಂದ ಮೇಲೆದ್ದು ಬಾರದೇ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ರಾಣಿಬೆನ್ನೂರು ತಾಲೂಕು ಕೋಟಿಹಾಳ ಗ್ರಾಮದಲ್ಲಿ ಜರುಗಿದೆ. ಮೃತನನ್ನು ಹನುಮಂತಪ್ಪ ಬೈರಪ್ಪ ಕಾಳೇರ (38) ಎಂದು ಗುರುತಿಸಲಾಗಿದೆ. ಈತನ ಪತ್ನಿ ಹಾಲಮ್ಮ ಹನಮಂತಪ್ಪ ಕಾಳೇರ ಹಲಗೇರಿ ಪೊಲೀಸ್ ಠಾಣೆಗೆ ವರದಿ ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ.
ಕೃಷ್ಣಮೃಗಕ್ಕೆ ಗಾಯ: ಚಿಕಿತ್ಸೆ
ಬ್ಯಾಡಗಿ: ಶ್ವಾನದಿಂದ ತಪ್ಪಿಸಿಕೊಳ್ಳಲು ಕೃಷ್ಣಮೃಗವೊಂದು ರಸ್ತೆ ದಾಟುವ ಸಂದರ್ಭದಲ್ಲಿ ಹಿಂದಿನ ಕಾಲು ಮುರಿದು ವೈದ್ಯರ ಚಿಕಿತ್ಸೆಯೊಂದಿಗೆ ಆರೈಕೆ ಪಡೆದ ಘಟನೆ ತಾಲೂಕಿನ ಮಾಸಣಗಿ ಗ್ರಾಮದ ಬಳಿ ಗುರುವಾರ ನಡೆದಿದೆ. ಕಾಲು ಮುರಿದ ಸುದ್ದಿಯನ್ನು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮುಟ್ಟಿಸಿದರು. ಸ್ಥಳಕ್ಕೆ ಧಾವಿಸಿದ ಉಪ ವಲಯ ಅರಣ್ಯಾಧಿಕಾರಿ ಟಿ.ಐ. ಕಳಸ ಹಾಗೂ ಸಿಬ್ಬಂದಿ ಕೃಷ್ಣಮೃಗವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಪಶು ವೈದ್ಯಕೀಯ ಕೇಂದ್ರಕ್ಕೆ ಚಿಕಿತ್ಸೆ ನೀಡಿದರು. ಪತ್ರಿಕೆಯೊಂದಿಗೆ ಉಪ ವಲಯ ಅರಣ್ಯಾಧಿಕಾರಿ ಟಿ.ಐ. ಕಳಸ ಮಾತನಾಡಿ, ಕಾಲಿನ ಗಾಯದಿಂದ ಬಳಲುತ್ತಿರುವ ಕೃಷ್ಣಮೃಗ ಗುಣವಾಗಲು ಕೆಲ ದಿನಗಳು ಬೇಕಾಗಲಿವೆ. ಅಲ್ಲಿಯ ತನಕ ಇಲಾಖೆ ಸುಪರ್ದಿಯಲ್ಲಿ ಚಿಕಿತ್ಸೆ ನಡೆಯಲಿದ್ದು, ಪೂರ್ತಿ ಗುಣಮುಖವಾದ ನಂತರ ಅರಣ್ಯಕ್ಕೆ ಬಿಡಲಾಗುವುದು ಎಂದರು. ಪಶು ವೈದ್ಯಾಧಿಕಾರಿ ಡಾ ಎಚ್. ನಾಗರಾಜ. ಡಾ ರಮೇಶ, ಇನ್ನಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

