ಹಾವೇರಿ

ಸಹಾಯ ಧನ ಚೆಕ್ ವಿತರಣೆ

Published On :

ಶಿಗ್ಗಾಂವಿ: ತಾಲೂಕಿನ ಬಂಕಾಪುರ ಹಾಲು ಉತ್ಪಾದಕರ ಸಹಕಾರಿ ಸಂಘದ ಉತ್ಪಾದಕರ ಕಲ್ಯಾಣ ನಿಧಿ ಯೋಜನೆಯಡಿ ಸಂಘದ ಮೃತ ಸದಸ್ಯ ಈರಪ್ಪ ಅಕ್ಕಿ ಅವರ ಪತ್ನಿಗೆ ರು. 50 ಸಾವಿರ ಸಹಾಯ ಧನದ ಚೆಕ್,ನ್ನು ಗುರುವಾರ ವಿತರಿಸಲಾಯಿತು. ಚೆಕ್ ವಿತರಿಸಿ ಸಂಘದ ಅಧ್ಯಕ್ಷ ಗೂಳಪ್ಪ ಪ್ಯಾಟಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಸಂಘದ ಸದಸ್ಯ ಅಕಾಲಿಕ ನಿಧನ ಹೊಂದಿದಲ್ಲಿ ಉತ್ಪಾದಕರ ಕಲ್ಯಾಣ ಯೋಜನೆಯಡಿ ಸಹಾಯ ಧನ ವಿತರಣೆ ಮಾಡಲಾಗುತ್ತದೆ ಎಂದರು. ಕಾರ್ಯದರ್ಶಿ ಜಿ.ಎಸ್. ಕೋರಿ, ನಿರ್ದೇಶಕ ವೈ.ಎಚ್. ಹಳವಳ್ಳಿ, ಎಸ್.ಕೆ. ಸಕ್ರಿ, ಸಂಗಪ್ಪ ದೇವತಿ, ಶಿವಾಜಪ್ಪ ಲಡಾಯಿ, ನಾಗನಗೌಡ ಪಾಟೀಲ್, ಗಿರಿಜವ್ವ ಹಡಪದ, ಬಸವರಾಜ ಕುರಬಗೊಂಡ, ಸಹದೇವ ನಿರೊಳ್ಳಿ, ಮತ್ತಿತರರು ಉಪಸ್ಥಿರಿದ್ದರು. ಎಸ್. ಪರಶುರಾಮ ಸ್ವಾಗತಿಸಿ, ವಂದಿಸಿದರು.

ವಸಂತಗೌಡಗೆ ದತ್ತಿ ಪುರಸ್ಕಾರ
ಹಿರೇಕೆರೂರು:
ತಾಲೂಕು ಕನ್ನಡ ಸಾಹಿತ್ಯ ಪರಿಷತ್-2013ನೇ ಸಾಲಿನ ದತ್ತಿ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಸಾರ್ವಜನಿಕ ಹಿತಾಸಕ್ತಿಯ ಉತ್ತಮ ಬರಹಗಳಿಗೆ ಬಿ.ಜಿ. ಬಣಕಾರ ಪ್ರತಿಷ್ಠಾನದಿಂದ ನೀಡುವ ದತ್ತಿ ಪುರಸ್ಕಾರಕ್ಕೆ ಪತ್ರಕರ್ತ ವಸಂತಗೌಡ ಪಾಟೀಲ ಭಾಜನರಾಗಿದ್ದಾರೆ. ಶಿಕ್ಷಣ ಕ್ಷೇತ್ರದ ಉತ್ತಮ ಸೇವೆ ಗುರುತಿಸಿ ಕಾಳಮ್ಮ ಚಳಗೇರಿ ದತ್ತಿ ಪುರಸ್ಕಾರ ಕವಳಿಕುಪ್ಪಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಚಂದ್ರಶೇಖರ ಅಂಗಡಿ ಹಾಗೂ ಜಿಲ್ಲೆಯ ಉತ್ತಮ ಕಥೆಗಾರರಿಗೆ ನೀಡುವ ದಿ. ಸದಾಶಿವ ಕೋರಿ ಸ್ಮರಣಾರ್ಥ ಕಥಾ ಪ್ರಶಸ್ತಿ ಜಿಲ್ಲಾ ನ್ಯಾಯಾಲಯದ ಶಿರಸ್ತೇದಾರರಾಗಿ ಕಾರ್ಯನಿರ್ವಹಿಸುತ್ತಿರುವ ಬಿ. ಶ್ರೀನಿವಾಸ ಅವರಿಗೆ ಸಂದಿವೆ. ಮಾ. 30ರಂದು ಪಟ್ಟಣದ ಕಸಾಪ ಕಾರ್ಯಾಲಯದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಾಲೂಕು ಕಸಾಪ ಅಧ್ಯಕ್ಷ ಪ್ರೊ. ಎಸ್.ಪಿ. ಗೌಡರ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.