ಕೈ ಕಾರ್ಯಕರ್ತರ ಸಂಭ್ರಮ
ಹಾನಗಲ್ಲ: 9 ವರ್ಷಗಳ ಬಳಿಕ ಮತ್ತೆ ಗೆಲವಿನ ಸಂಭ್ರಮ ಕಂಡ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ನಗರದಾದ್ಯಂತ ಸಂಚರಿಸಿ ಮನೋಹರ ತಹಶೀಲ್ದಾರ ಪರ ಜಯಘೋಷ ಹಾಕುತ್ತಾ ಸಂತಸ ವ್ಯಕ್ತಪಡಿಸಿ ಗುಲಾಲು ಎರೆಚಿ, ಕೇಕೆ ಹಾಕುತ್ತ ಕುಣಿದಾಡಿದರು.
ತಮ್ಮ ಗೆಲವಿನ ಬಳಿಕ 4 ಗಂಟೆ ಹೊತ್ತಿಗೆ ಆನೇಕರೆ ಕಡೆಯಿಂದ ಟ್ರ್ಯಾಕ್ಟರ್ ಮೂಲಕ ಮೆರವಣಿಗೆಯಲ್ಲಿ ಹಾನಗಲ್ಲ ಪ್ರವೇಶಿಸಿದ ಮನೋಹರ ತಹಶೀಲ್ದಾರ ಅವರನ್ನು ಕಾರ್ಯಕರ್ತರು ಉತ್ಸಾಹದಿಂದ ಬರಮಾಡಿಕೊಂಡರು. ನಗರದ ಕಿತ್ತೂರು ಚನ್ನಮ್ಮ ರಸ್ತೆ ಮೂಲಕ ಸಾಗಿದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಹಾಯ್ದು ಮಿನಿ ವಿಧಾನಸೌಧದ ಬಳಿಯ ಮನೋಹರ ತಹಶೀಲ್ದಾರ ಮನೆ ತಲುಪಿತು. ಮೆರವಣಿಗೆಯುದ್ದಕ್ಕೂ ಮನೋಹರ ತಹಶೀಲ್ದಾರ, ಕಾಂಗ್ರೆಸ್ ಪರ ಜಯಘೋಷಗಳು ಕೂಗಿದ ಕಾರ್ಯಕರ್ತರು, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಹಾನಗಲ್ಲ ತಾಲೂಕಿನ ಸಿಂಗಾಪುರ, ಆಡೂರ, ಬಾಳಂಬೀಡ, ಅಕ್ಕಿಆಲೂರು, ಗೆಜ್ಜಿಹಳ್ಳಿ ಗ್ರಾಮಗಳ ಮೂಲಕ ವಿಜಯೋತ್ಸವದ ಮೆರವಣಿಗೆ ಹಾನಗಲ್ಲ ತಲುಪಿತು. ಇಡೀ ತಾಲೂಕಿನ ಎಲ್ಲ ಗ್ರಾಮಗಳಿಂದ ಕಾಂಗ್ರೆಸ್ ಕಾರ್ಯಕರ್ತರು ಹಾನಗಲ್ಲಿಗೆ ಆಗಮಿಸಿ ತಮ್ಮ ಗೆಲವಿನ ಸಂಭ್ರಮ ಹಂಚಿಕೊಂಡರು.
ಕೆಪಿಸಿಸಿ ಸದಸ್ಯ ಸತೀಶ ದೇಶಪಾಂಡೆ, ಹಾನಗಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಸ್. ಬಡಿಗೇರ, ಅಕ್ಕಿಆಲೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಪಕ್ಷದ ಮುಖಂಡರಾದ ಕೆ.ಎಲ್. ದೇಶಪಾಂಡೆ, ಯಲ್ಲಪ್ಪ ಕಿತ್ತೂರು, ರಾಮಣ್ಣ ಮಾಸನಕಟ್ಟಿ, ಸಯ್ಯದ ಸರ್ವರಪಾಶಾ ಪೀರಜಾದೆ, ರಂಗನಗೌಡ ಪಾಟೀಲ ಮುಂತಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

