ನೂತನ ಔಷಧಿ ನೀತಿ ಖಂಡನೆ
ಶಿಗ್ಗಾಂವಿ: ಕೇಂದ್ರ ಸರ್ಕಾರದ ನೂತನ ಔಷಧಿ ನೀತಿ ಖಂಡಿಸಿ ತಾಲೂಕು ಔಷಧಿ ವ್ಯಾಪಾರಿಗಳ ಸಂಘ ಶುಕ್ರವಾರ ಶಿಗ್ಗಾಂವಿ ಪಟ್ಟಣದಲ್ಲಿ ತಾಲೂಕಿನ ಔಷಧಿ ವ್ಯಾಪಾರಿಗಳು ಪ್ರತಿಭಟಿಸಿ, ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ 20 ವರ್ಷಗಳ ಹಿಂದೆ ನಿಗದಿಪಡಿಸಿರುವ ಔಷಧ ವ್ಯಾಪಾರಸ್ಥರ ಕಡಿತಗೊಳಿಸುವ ಕಾಯ್ದೆಗೆ 2013ರ ತಿದ್ದುಪಡಿಗೆ ಸೂಚಿಸಲಾಗಿರುವ ಲಾಭಾಂಶ ಕಡಿತಗೊಳಿಸಲಾರದೇ ಯಥಾ ಪ್ರಕಾರವೇ ಮುಂದುವರೆಸುವುದು ಹಾಗೂ ಔಷಧಿ ವ್ಯಾಪಾರದಲ್ಲಿ ನಿರತರಾಗಬೇಕಿದ್ದ ಫಾರ್ಮಾಸಿಸ್ಟ್ ಔಷಧ ತಜ್ಞರ ಕೊರತೆ ನೀಗಿಸಲು ವ್ಯಾಪಾರ ನಡೆಸುತ್ತಿರುವ ಪಾಲುದಾರ, ಮಾಲೀಕನಿಗೆ ಔಷಧ ಹಾಗೂ ಕಾಂತಿವರ್ಧಕ ಕಾಯ್ದೆಯಲ್ಲಿ ಔಷದ ಮಾರಾಟಕ್ಕೆ ಅರ್ಹತೆ, ಮನ್ನಣೆ ನೀಡುವುದು. ಔಷಧ ಹಾಗೂ ಕಾಂತಿವರ್ಧಕ ಕಾಯ್ದೆ 1940ರ ಕಲಂ 19ರ ಉಲ್ಲಂಘಣೆ ಔಷಧ ಮಾರಾಟಗಾರ ತಾನೂ ಖರೀದಿ ದಾಸ್ತಾನು ಮಾಡಿದ ದಾಖಲೆ ಹೊಂದಿರುವುದನ್ನು ಪರಿಶೀಲಿಸಿ ಆತನನ್ನು ಆರೋಪಿಯನ್ನಾಗಿ ಮಾಡುವ ಬದಲು ಅವನು ತಪ್ಪಿತಸ್ಥ ಎಂಬುದು ಪುರಾವೆಯಾಗುವವರೆಗೆ ಶಿಕ್ಷಾರ್ಹ ಕಲಂಗಳ ಜಾರಿ ಹಿಂಪಡೆಯಬೇಕು. ವಿದೇಶಿ ಹಣದ ಹೂಡಿಕೆಯಿಂದ ಮುಕ್ತಗೊಳಿಸುವುದು. ಈ ನಾಲ್ಕು ಬೇಡಿಕೆಗಳನ್ನು ಸರ್ಕಾದ ಗಮನಕ್ಕೆ ತರುವಂತೆ ತಹಸಲ್ದಾರ್ಗೆ ಮನವಿ ಸಲ್ಲಿಸಿದರು.
ತಾಲೂಕಿನ ರೇವಣಸಿದ್ದೇಶ್ವರ ಮೆಡಿಕಲ್ಸ್, ಜಯಲಕ್ಷ್ಮಿ ಮೆಡಿಕಲ್ಸ್, ಶ್ರೀ ಸಾಯಿ ಮೆಡಿಕಲ್ಸ್, ನ್ಯೂ ಸಂಜಯ ಮೆಡಿಕಲ್ಸ್, ಸಂಜೀವಿನಿ ಮೆಡಿಕಲ್ಸ್, ಗ್ರಾಮೀಣ ಮೆಡಿಕಲ್ ಮಾಲೀಕರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

