ಹಾವೇರಿ

ತರಬೇತಿಗೆ ಅರ್ಜಿ ಆಹ್ವಾನ

Published On :

ಹಾನಗಲ್ಲ: ಹಾನಗಲ್ಲ ತಾಲೂಕಿನ ಹಿಂದುಳಿದ ವರ್ಗಗಳ ಇಲಾಖೆ ಅಡಿಯಲ್ಲಿ ನಡೆಯುವ ಮಹಿಳಾ ಹೊಲಿಗೆ ತರಬೇತಿ ಕೇಂದ್ರಕ್ಕೆ ಆಸಕ್ತ ಅಭ್ಯರ್ಥಿಗಳಿಂದ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಬಿಸಿಎಂ ಇಲಾಖೆಯ 2013-14ನೇ ಸಾಲಿನ ಮಹಿಳಾ ಹೊಲಿಗೆ ತರಬೇತಿಗಾಗಿ ಪ್ರವರ್ಗ-1, 2-ಎ, 2-ಬಿ, 3-ಎ, 3-ಬಿ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳಿಗೆ ಸೇರಿದ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ತರಬೇತಿಗಾಗಿ 20 ಜನರಿಗೆ ಅವಕಾಶವಿದ್ದು, ಆಸಕ್ತ ಅಭ್ಯರ್ಥಿಗಳು ಬಿಸಿಎಂ ಇಲಾಖೆ ಕಚೇರಿಯಲ್ಲಿ ಅರ್ಜಿ ಫಾರ್ಮ್‌ಗಳನ್ನು ಪಡೆದು ಅವಶ್ಯ ದಾಖಲೆಗಳೊಂದಿಗೆ ಮೇ 30ರೊಳಗಾಗಿ ಸಲ್ಲಿಸಬೇಕು. ಅಭ್ಯರ್ಥಿಗಳು 7ನೇ ತರಗತಿ ಪಾಸಾಗಿರಬೇಕು, 18 ವರ್ಷಕ್ಕಿಂತ ಹೆಚ್ಚಿನವರಾಗಿರಬೇಕು, ಪ್ರವರ್ಗ-1 ಹಾಗೂ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳನ್ನು ಹೊರತುಪಡಿಸಿ ಇತರೇ ಅಭ್ಯರ್ಥಿಗಳ ವಾರ್ಷಿಕ ಆದಾಯ ರು. 15 ಸಾವಿರ ಮೀರಿರಬಾರದು. ಅರ್ಜಿಯೊಂದಿಗೆ ಆದಾಯ ಪ್ರಮಾಣ ಪತ್ರ, ಅಭ್ಯರ್ಥಿಯ ಭಾವಚಿತ್ರಗಳನ್ನು ಲಗತ್ತಿಸಿರಬೇಕು. ತರಬೇತಿ ಅವಧಿಯಲ್ಲಿ ಪ್ರತಿ ತಿಂಗಳು ರು. 300 ಶಿಷ್ಯವೇತನ ನೀಡಲಾಗುವುದು. ಯಶಸ್ವಿಯಾಗಿ ತರಬೇತಿ ಮುಗಿಸಿದ ಅಭ್ಯರ್ಥಿಗಳಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ವಿತರಿಸಲಾಗುವುದು ಎಂದು ಬಿಸಿಎಂ ಇಲಾಖೆ ಪ್ರಕಟಣೆ ತಿಳಿಸಿದೆ.

ಅಂಜುಮನ್ ಪ್ರೌಢಶಾಲೆಗೆ ಶೇ. 94 ಅಂಕ
ಹಾನಗಲ್ಲ: ಹಾನಗಲ್ಲ ನಗರದ ಅಂಜುಮನ್ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಶೇ. 94ರಷ್ಟಾಗಿದೆ. ಒಟ್ಟು 124 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 117 ಮಂದಿ ಪಾಸಾಗಿದ್ದಾರೆ. ಮೂವರಿಗೆ ಉನ್ನತ ಶ್ರೇಣಿ, 45 ಪ್ರಥಮ, 32 ದ್ವಿತೀಯ, 37 ವಿದ್ಯಾರ್ಥಿಗಳಿಗೆ ತೃತೀಯ ಶ್ರೇಣಿ ಲಭಿಸಿದೆ. ಶಫೀಕ ಮುಲ್ಲಾ (ಶೇ. 91.52), ತಸ್ಸಮಿಯಾ ಐರಣಿ (ಶೇ. 90.72), ಶಬನಂ ಗುಲಾಮ ಅಲಿಶಾ (ಶೇ. 90.24) ಮೊದಲಿಗರಾಗಿದ್ದಾರೆ.

ಎಸ್‌ಎಸ್‌ಎಲ್‌ಸಿ: ಶೇ. 97 ಫಲಿತಾಂಶ
ಮುಂಡರಗಿ: ಸ್ಥಳೀಯ ಜಗದ್ಗುರು ಅನ್ನದಾನೀಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ 97 ರಷ್ಟಾಗಿದೆ. ಶಾಲೆಯ 34 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಮೂವರು ಉನ್ನತ ದರ್ಜೆಯಲ್ಲಿ, 21 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 9 ವಿದ್ಯಾರ್ಥಿಗಳು ದ್ವೀತಿಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಶ್ರೀಲಕ್ಷ್ಮಿ ರಿತ್ತಿ ಶೇ 89, ಮೇಘಾ ಅಬ್ಬಿಗೇರಿ ಶೇ 87, ಅಮೀರ ಖತೀಬ್ ಶೇ 85ರಷ್ಟು ಅಂಕ ಪಡೆದು ಕ್ರಮವಾಗಿ ಪ್ರಥಮ ದ್ವೀತಿಯ ತೃತೀಯ ಸ್ಥಾನ ಗಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ಡಾ. ಅನ್ನದಾನೀಶ್ವರ ಸ್ವಾಮಿಗಳು, ಬಿಇಒ ಎಂ.ಎ. ರಡ್ಡೇರ ಮುಖ್ಯ ಶಿಕ್ಷಕಿ ಜೆ.ಎಸ್.ನಾರ್ಸಿ ಅಭಿನಂದಿಸಿದ್ದಾರೆ.

ರೋಟರಿ ಶಾಲೆ: ಶೇ. 96 ಫಲಿತಾಂಶ
ಮುಂಡರಗಿ: ಸ್ಥಳೀಯ ರೋಟರಿ ಶಿಕ್ಷಣ ಸಂಸ್ಥೆಯ ವಿ.ಜಿ. ಲಿಂಬಿಕಾಯಿ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇಕಡಾ 96 ರಷ್ಟಾಗಿದೆ. ಶಿಲ್ಪಾ ಅಲ್ಲಿಪುರ 550 ಅಂಕ ಪಡೆದು ಶೇ 88, ಸುಷ್ಮಾ ಅಂಗಡಿ 541 ಅಂಕಗಳನ್ನು ಪಡೆದು ಶೇ 86.56, ಉಮಾ ಶೀರಿ 531 ಅಂಕಗಳನ್ನು ಪಡೆದು ಶೇ 84.96 ಗಳಿಸಿದ್ದಾಳೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಕೊಟ್ರೇಶ ಅಂಗಡಿ, ಮುಖ್ಯೋಪಾಧ್ಯಾಯ ಸಿ.ವಿ. ಪಾಟೀಲ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.

ಬರದೂರ ಪ್ರೌಢಶಾಲೆ ಶೇ. 98.66 ಫಲಿತಾಂಶ
ಮುಂಡರಗಿ: ಎಸ್ಸೆಸ್ಸೆಲ್ಸಿಯಲ್ಲಿ ತಾಲೂಕಿನ ಬರದೂರ ಎನ್.ಎನ್. ಗೋಡಿ ಸರ್ಕಾರಿ ಪ್ರೌಢಶಾಲೆ ಶೇ. 98.66 ಫಲಿತಾಂಶ ಪಡೆದಿದೆ. ರೂಪಾ ತಿಪ್ಪಶೆಟ್ಟಿ 560 ಅಂಕಗಳಿಸಿ ಪ್ರಥಮ, ವಿಜಯಲಕ್ಷ್ಮಿ ಪಾಟೀಲ 559 ದ್ವಿತೀಯ, ಮಲ್ಲಮ್ಮ ಕೋಣನವರ 557 ತೃತೀಯ ಸ್ಥಾನ ಪಡೆದಿದ್ದಾಳೆ. 75 ಪರೀಕ್ಷಾರ್ಥಿಗಳಲ್ಲಿ 74 ಮಂದಿ ಉತ್ತೀರ್ಣರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.