ಮೂರ್ತಿ ಮೆರವಣಿಗೆ
ಶಿಗ್ಗಾಂವಿ: ತಾಲೂಕಿನ ತಡಸ ಗ್ರಾಮದ ದೇವಸ್ಥಾನದ ಆವರಣದಲ್ಲಿ ಶ್ರೀ ವೀರಭದ್ರೇಶ್ವರ ನೂತನ ಸ್ಥಿರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಶ್ರೀ ವೀರಭದ್ರೇಶ್ವರ ದೇವರ ಮೂರ್ತಿಯನ್ನು ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮಾಡಿ, ದೇವಸ್ಥಾನದಲ್ಲಿ ಬರಮಾಡಿಕೊಳ್ಳಲಾಯಿತು. ಮೇ 19ರ ಸಂಜೆ ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದ ಶ್ರೀ ಅಭಿನವ ಸಿದ್ಧರಾಮ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ಜಗದ್ಗುರು ರೇಣುಕಾಚಾರ್ಯ ಮಹಾತ್ಮೆ ಕುರಿತು ಪ್ರವಚನ ನೀಡಿದರು. ಶೈಲೇಶ್ವರ ಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯರು ಇದ್ದರು. ಹನುಮಂತರಾವ್ ಕುಲಕರ್ಣಿ ಸಂಗಡಿಗರು ಸಂಗೀತ ಸೇವೆ ನಡೆಸಿದರು.
ವ್ಯಾಪಿಸಿದ ಡೆಂಘೀ: ಆತಂಕ
ಬ್ಯಾಡಗಿ: ತಾಲೂಕಿನ ಹೆಡಿಗ್ಗೊಂಡ ಗ್ರಾಮದ ನಾಲ್ವರಲ್ಲಿ ಕಾಣಿಸಿಕೊಂಡಿದ್ದ ಡೆಂಘೀ ಜ್ವರ ಈಗ ಪಟ್ಟಣಕ್ಕೂ ವ್ಯಾಪಿಸಿದ್ದು, ಇಸ್ಲಾಂಪುರ ಹಾಗೂ ವಿದ್ಯಾನಗರದ ಬಡಾವಣೆಗಳ ಇಬ್ಬರು ಬಾಲಕರು ಜ್ವರದಿಂದ ಬಳಲುತ್ತಿದ್ದಾರೆ. ವಿದ್ಯಾನಗರದ ಕಿರಣ ಸುಭಾಸ ಗಡಾದ ಬೆಂಗಳೂರಿನ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶಿವಪುರ ಬಡಾವಣೆಯ ಬಾಲಕ ದಿಲೀಪ ಅಮೀತ ಬಂಡೇಗಾರ ದಾವಣಗೆರೆ ಎಸ್.ಎಸ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎನ್ನಲಾಗಿದೆ. ಇದರಿಂದ ಸಾರ್ವಜನಿಕರು ಭೀತರಾಗಿದ್ದಾರೆ. ಪಟ್ಟಣದಲ್ಲಿ ಮೂರು-ನಾಲ್ಕು ತಿಂಗಳಿಗೊಮ್ಮೆ ಚರಂಡಿಗಳನ್ನು ಸ್ವಚ್ಛ ಮಾಡುತ್ತಿರುವುದರಿಂದ ಕೊಳಚೆ ಸಂಗ್ರಹವಾಗಿ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದೆ. ಡಿಡಿಟಿ, ಫಿನಾಯಲ್ ಹಾಗೂ ಫಾಂಗಿಂಗ್ಗೆ ಲಕ್ಷಾಂತರ ರು. ಖರ್ಚು ಹಾಕುತ್ತಿದ್ದು, ಅವುಗಳ ಸಮರ್ಪಕ ಬಳಕೆಯಾಗಿಲ್ಲವೆಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಖಾಸಗಿ ಗುತ್ತಿಗೆದಾರರಿಗೆ ಕಸ ನಿರ್ವಹಣೆ ಜವಾಬ್ದಾರಿ ನೀಡಿದ್ದು, ಸಮರ್ಪಕವಾಗಿ ನಿರ್ವಹಿಸಲು ಆಗುತ್ತಿಲ್ಲ. ಗುತ್ತಿಗೆ ಪೌರ ಕಾರ್ಮಿಕರು ಅಧಿಕಾರಿಗಳ ಹಿಡಿತದಲ್ಲಿಲ್ಲ. ಈ ಕಾರಣದಿಂದಲೇ ಪಟ್ಟಣದಲ್ಲಿ ಕಸ ವಿಲೇವಾರಿ ವಿಳಂಬವಾಗುತ್ತಿದೆ ಎನ್ನುವ ಆರೋಪವಿದೆ. ಚರಂಡಿಗಳನ್ನು ಸ್ವಚ್ಛಗೊಳಿಸಲು ಮನವಿ ಮಾಡಿಕೊಂಡರೆ, ಗುತ್ತಿಗೆ ಪೌರಕಾರ್ಮಿಕರು ಧರಣಿ ನಡೆಸಿದ್ದು, ಕೆಲಸಕ್ಕೆ ಬರುತ್ತಲ್ಲವೆಂಬ ಸಬೂಬನ್ನು ಪುರಸಭೆ ಅಧಿಕಾರಿಗಳು ಹೇಳುತ್ತಾರೆ.
ವಾಹನ ಪಲ್ಟಿ: ಓರ್ವ ಸಾವು
ಬ್ಯಾಡಗಿ: ವೇಗವಾಗಿ ಚಲಿಸುತ್ತಿದ್ದ ಬೊಲೆರೋ ಜೀಪೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಇನ್ನಿತರ ಮೂವರು ಗಾಯಗೊಂಡ ಘಟನೆ ತಾಲೂಕಿನ ಮೋಟೆಬೆನ್ನೂರು ಗ್ರಾಮದ ಶಾಡ್ಲಿಹಳ್ಳದ ಬಳಿ ರಾಷ್ಟ್ರೀಯ ಹೆದ್ದಾರಿ- 4ರ ಮೇಲೆ ಭಾನುವಾರ ಬೆಳಗ್ಗೆ ನಡೆದಿದೆ. ಮೃತನನ್ನು ಹಾವೇರಿ ಸಮೀಪದ ಯತ್ನಳ್ಳಿ ಗ್ರಾಮದ ಶೇಖಪ್ಪ ನಿಂಗಪ್ಪ ಜಲ್ಲಿ ಈತ ಹುಬ್ಬಳ್ಳಿಯ ಕೆಎಂಸಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವಾಹನ ಹಾವೇರಿಯಿಂದ ಬೆಂಗಳೂರಿಗೆ ಚಲಿಸುತ್ತಿತ್ತು. ಘಟನೆಯಲ್ಲಿ ಚಾಲಕ ಶ್ರೀಕಾಂತ್ ಪುಟ್ಟಪ್ಪ ಹೊಸಮನಿ, ಇತರರು ಗಾಯಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

