ಏತ ನೀರಾವರಿ ಯೋಜನೆ ಜಾರಿಯಾಗಲಿ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಮೇ 29
ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ರಾಣಿಬೆನ್ನೂರು ಏತ ನೀರಾವರಿ ಯೋಜನೆಯನ್ನು ಆದಷ್ಟ ಬೇಗ ಜಾರಿಗೊಳಿಸಬೇಕೆಂದು ಒತ್ತಾಯಿಸಿ ತಾಲೂಕಿನ ಕಮದೋಡ ಗ್ರಾಮದ ರೈತರು ಶಾಸಕ ಕೆ.ಬಿ. ಕೋಳಿವಾಡರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಸಲ್ಲಿಸಿದರು.
ನೇತೃತ್ವ ವಹಿಸಿದ್ದ ರೈತ ಸಂಘದ ಸಂಚಾಲಕ ಲೊಕೇಶ ಸುತಾರ ಮಾತನಾಡಿ, ತಾಲೂಕಿನ ಮುದೇನೋರು ಗ್ರಾಮದ ಹತ್ತಿರ ಹರಿದಿರುವ ತುಂಗಭದ್ರಾ ನದಿಯಿಂದ ಪೈಪ್ಲೈನ್ ಮುಖಾಂತರ ಕಮದೋಡ, ರಾಣಿಬೆನ್ನೂರು, ಚಳಗೇರಿ ಹಾಗೂ ಕರೂರು ಗ್ರಾಮಗಳ ಕೆರೆಗಳಿಗೆ ನದಿಯ ನೀರನ್ನು ತುಂಬಿಸಿ 4 ಕೆರೆಗಳ ವ್ಯಾಪ್ತಿಗೊಳಪಟ್ಟಿರುವ 9 ಗ್ರಾಮಗಳ ರೈತರ, 6,554 ಎಕರೆ ಜಮೀನುಗಳಿಗೆ ಹಾಗೂ ಕೆರೆಯ ಅಕ್ಕಪಕ್ಕದಲ್ಲಿರುವ ರೈತರ ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರೊದಗಿಸುವ ಬೋರ್ವೆಲ್ಗಳ ಅಂತರ್ಜಲಮಟ್ಟ ಹೆಚ್ಚಿಸುವಂತ ಮಹತ್ವದ ಯೋಜನೆಗಳಲ್ಲೊಂದು. ಈ ಯೋಜನೆ ಆದಷ್ಟು ಬೇಗ ಜಾರಿಗೊಳ್ಳಲಿ ಎಂದರು.
ಆದಷ್ಟು ಬೇಗ ಜಾರಿಯಾಗಲಿ: ಜಿಲ್ಲೆಯವರಾದ ಬಸವರಾಜ ಬೊಮ್ಮಾಯಿಯವರು ರಾಜ್ಯ ಬೃಹತ್ ನೀರಾವರಿ ಸಚಿವರಾಗಿದ್ದ ಸಮಯದಲ್ಲಿ, ತಾಲೂಕಿನ ರೈತರು ಹಾಗೂ 9 ಗ್ರಾಮಗಳ ಗ್ರಾಮಸ್ಥರು ಹಲವಾರು ಭಾರಿ ಮನವಿ ಮಾಡಿಕೊಂಡಾಗಲೆಲ್ಲ ಯೋಜನೆಯನ್ನು ಜಾರಿಗೊಳಿಸುವುದಾಗಿ ಭರವಸೆ ನೀಡುತ್ತಿದ್ದರೆ ವಿನಃ ಯೋಜನೆಯನ್ನು ಜಾರಿಗೊಳಿಸುವುದಕ್ಕಾಗಿ ಕ್ರಮ ಕೈಗೊಳ್ಳದಿರುವ ಕಾರಣ ರಾಣಿಬೆನ್ನೂರು ಏತ ನೀರಾವರಿ ಯೋಜನೆ ಜಾರಿಯಾಗದೆ ನೆನೆಗುದಿಗೆ ಬಿದ್ದಿದೆ. ಬಿಜೆಪಿ ಸರ್ಕಾರದ ಮೇಲಿಟ್ಟಿದ್ದ ವಿಶ್ವಾಸವನ್ನು ಕಳೆದುಕೊಳ್ಳಲು ಕಾರಣವಾಗಿದೆ. ಆದ ಕಾರಣ ಆದಷ್ಟು ಬೇಗ ಯೋಜನೆಯನ್ನು ಜಾರಿಗೊಳಿಸಬೇಕೆಂದು ಲೋಕೇಶ್ ಸುತಾರ ಆಗ್ರಹಿಸಿದರು.
ರೈತರಿಂದ ಮನವಿ ಸ್ವೀಕರಿಸಿದ ಶಾಸಕ ಕೆ.ಬಿ. ಕೋಳಿವಾಡ, ಸದರಿ ಯೋಜನೆಯ ಕುರಿತು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಂದ ಸಮಗ್ರವಾದ ಮಾಹಿತಿಯನ್ನು ತರಿಸಿಕೊಂಡು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆಯಲ್ಲಿ ಹಾಗೂ ರಾಜ್ಯ ಬೃಹತ್ ನೀರಾವರಿ ಸಚಿವರ ಜೊತೆಯಲ್ಲಿ ಮಾತನಾಡಿ ಯೋಜನೆ ಜಾರಿಗೊಳಿಸುವುದಾಗ ಭರವಸೆ ನೀಡಿದರು.
ನಂದೆಪ್ಪ ತೆಗ್ಗಿನ, ಸುರೇಶ ಭಾರ್ಕಿ, ಸುರೇಶಪ್ಪ ದುಳೆಹೂಳಿ, ಕಮದೋಡ ಗ್ರಾಮದ ರೈತ ಸಂಘದ ಗೌರವಾಧ್ಯಕ್ಷ ಸಿದ್ದನಗೌಡ ಪಾಟೀಲ, ಮಲ್ಲೇಶಪ್ಪ ಮೇಲ್ಮಾಳಗಿ, ಕಮದೋಡ ದೋಡ್ಡಕೆರೆ, ನೀರು ಬಳಕೆದಾರರ ಸಹಕಾರಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ದುಳೆಹೂಳಿ, ವೆಂಕಟೇಶ ಲಮಾಣಿ, ಲಕ್ಷ್ಮಣ ಲಮಾಣಿ, ಶಿವಪ್ಪ ಲಮಾಣಿ, ಬಸಪ್ಪ ಭಜಂತ್ರಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

