ಹಾವೇರಿ

ಮಳೆ: ಹೆಸ್ಕಾಂ ಸಂಪರ್ಕಿಸಿ

Published On :

ಹಾನಗಲ್ಲ: ತಾಲೂಕಿನಲ್ಲಿ ಗುಡುಗು ಸಿಡಿಲು ಮಿಶ್ರಿತ ಮಳೆಯಾಗುತ್ತಿದ್ದು, ಮುಂಗಾರು ಮಳೆ ಸಂದರ್ಭಗಳಲ್ಲಿ ಮಳೆ ಗಾಳಿಯಿಂದ ಉಂಟಾಗುವ ವಿದ್ಯುತ್ ಅಡಚಣೆ ಹಾಗೂ ಅನಾಹುತಗಳ ಮುಂಜಾಗ್ರತೆಗಾಗಿ ಸಾರ್ವಜನಿಕರು ತಕ್ಷಣ ಹೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ. ತಾಲೂಕಿನಲ್ಲಿ ಭಾರಿ ಮಳೆ ಗಾಳಿಯಿಂದ ಯಾವುದೇ ರೀತಿಯ ವಿದ್ಯುತ್ ಅಡಚಣೆಯಾದಲ್ಲಿ (ಕಂಬಗಳು ಮುರಿಯುವುದು, ತಂತಿ ಹರಿದಿರುವುದು, ಗಿಡ ಮರಗಳು ತಂತಿ ಮೇಲೆ ಬೀಳುವುದು ಸೇರಿ) ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ(ಹಾವೇರಿ) 9448494766, ಹಾನಗಲ್ಲ ಶಾಖಾಧಿಕಾರಿ 9480881566,ಅಕ್ಕಿಆಲೂರು ಶಾಖಾಧಿಕಾರಿ 94808 81567, ಗ್ರಾಮೀಣ ಶಾಖಾಧಿಕಾರಿ 9449177919, ಆಡೂರು-ಬೆಳಗಾಲಪೇಟ ಶಾಖಾಧಿಕಾರಿ 9880 417161, ತಿಳವಳ್ಳಿ ಶಾಖಾಧಿಕಾರಿ 9886057520, ಶೇಷಗಿರಿ ಶಾಖಾಧಿಕಾರಿ 7760365688, ಬಮ್ಮನಹಳ್ಳಿ ಶಾಖಾಧಿಕಾರಿ 9448681274 ಇವರನ್ನು ಸಂಪರ್ಕಿಸುವಂತೆ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕೃಷ್ಣಪ್ಪ ತಿಳಿಸಿದ್ದಾರೆ.
ಹಾವೇರಿ: ಅರ್ಜಿ ಆಹ್ವಾನ
ಹಾವೇರಿ: ಹಾವೇರಿ ಅರುಣೋದಯ ವಿದ್ಯಾವರ್ಧಕ ಸಂಸ್ಥೆ (ರಿ) ವತಿಯಿಂದ ಜಿಲ್ಲೆಯ ಹಾನಗಲ್ಲ ತಾಲೂಕಿನ ಕಲ್ಲಹಕ್ಕಲ ಓಣಿಯಲ್ಲಿ 2011-12ನೇ ಸಾಲಿನಿಂದ ಅರ್ಹ ಕಿವುಡ ಹಾಗೂ ಮೂಕ ಮಕ್ಕಳಿಗಾಗಿ ವಿಶೇಷ ವಸತಿಯುತ ಶಾಲೆಯನ್ನು ಆರಂಭಿಸಲಾಗಿದೆ. 1, 2 ಹಾಗೂ 3ನೇ ತರಗತಿ ಅರ್ಹ ಮಕ್ಕಳು ಜೂನ್ 10ರೊಳಗಾಗಿ ಶಾಲೆಯಲ್ಲಿ ದಾಖಲಾತಿ ಪಡೆದುಕೊಳ್ಳಬಹುದೆಂದು ಸಂಸ್ಥೆಯ ಕಾರ್ಯದರ್ಶಿ ವಿ.ಬಿ. ಪಾಟೀಲ ಅವರು ತಿಳಿಸಿದ್ದಾರೆ. ಈ ಶಾಲೆಗೆ ದಾಖಲಾದ ಮಕ್ಕಳಿಗೆ ಅಗತ್ಯ ಮೂಲಭೂತ ಸೌಕರ್ಯಗಳೊಂದಿಗೆ ಉಚಿತವಾಗಿ ವಿದ್ಯಾಭ್ಯಾಸ ನೀಡಲಾಗುವುದು. ಶಾಲಾ ದಾಖಲಾತಿ ಸಂದರ್ಭದಲ್ಲಿ ಮಕ್ಕಳ ಪಾಸ್‌ಪೋರ್ಟ್ ಸೈಜಿನ ಮೂರು ಭಾವಚಿತ್ರ ಹಾಗೂ ಅಂಗವಿಕಲತೆ ಪ್ರಮಾಣಪತ್ರದ ಝರಾಕ್ಸ್ ಪ್ರತಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಅರುಣೋದಯ ವಿದ್ಯಾವರ್ಧಕ ಸಂಸ್ಥೆ ಕಾರ್ಯದರ್ಶಿ ವಿ.ಬಿ. ಪಾಟೀಲ ಮೊ. 8904244408 ಹಾಗೂ 9449433797ನ್ನು ಸಂಪರ್ಕಿಸಬಹುದು.
ನಾಳೆ ಕಾಂಗ್ರೆಸ್ ಸಭೆ
ಹಾನಗಲ್ಲ: ಹಾನಗಲ್ಲ ಬ್ಲಾಕ್ ಕಾಂಗ್ರೆಸ್ ಸಭೆ ಇಲ್ಲಿನ ತಾಲೂಕು ಕಾಂಗ್ರೆಸ್ ಕಚೇರಿಯಲ್ಲಿ ಜೂ. 1ರಂದು ಮಧ್ಯಾಹ್ನ 3ಕ್ಕೆ ನಡೆಯಲಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಸ್. ಬಡಿಗೇರ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಮನೋಹರ ತಹಸೀಲ್ದಾರ್ ಈ ಸಭೆಯಲ್ಲಿ ಪಾಲ್ಗೊಂಡು ಮಾರ್ಗದರ್ಶನ ನೀಡುವರು. ಚುನಾಯಿತ ಜನಪ್ರತಿನಿಧಿಗಳು, ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ತಪ್ಪದೇ ಪಾಲ್ಗೊಳ್ಳಬೇಕೆಂದು ಪಕ್ಷದ ವಕ್ತಾರ ಕೆ.ಎಲ್. ದೇಶಪಾಂಡೆ ಕೋರಿದ್ದಾರೆ.
ನಾಳೆ ಬ್ರಾಹ್ಮಣ ನೌಕರರ ಸಭೆ
ಹಾನಗಲ್ಲ: ಹಾನಗಲ್ಲ ತಾಲೂಕು ಬ್ರಾಹ್ಮಣ ನೌಕರರ ಸಭೆಯನ್ನು ಪಟ್ಟಣದ ಶ್ರೀ ಶಂಕರಮಠದಲ್ಲಿ ಜೂ. 1ರಂದು ಸಂಜೆ 4 ಗಂಟೆಗೆ ಕರೆಯಲಾಗಿದೆ. ಸಮಾಜದ ಎಲ್ಲ ನೌಕರ ಬಾಂಧವರು ತಪ್ಪದೆ ಪಾಲ್ಗೊಳ್ಳಬೇಕೆಂದು ಬ್ರಾಹ್ಮಣ ನೌಕರರ ಸಂಘದ ತಾಲೂಕು ಕಾರ್ಯದರ್ಶಿ ಗಿರೀಶ ಪುರೋಹಿತ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.