ಶಾಲಾ ಪ್ರಾರಂಭೋತ್ಸವ
ಶಿಗ್ಗಾಂವಿ: ಗೊಟಗೋಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸನ್ 2013-14ನೇ ಶಾಲಾ ಪ್ರಾರಂಭೋತ್ಸವ ಶುಕ್ರವಾರ ನಡೆಯಿತು. ಎಸ್ಡಿಎಂಸಿ ಅಧ್ಯಕ್ಷ ಸಮಣ್ಣ ಶಿ. ಸಕ್ರಣನವರ ಶಾಲಾ ಪ್ರಾರಂಭೋತ್ಸವ ಉದ್ಘಾಟಿಸಿ ಮಾತನಾಡಿ, ಮಕ್ಕಳು ನಿತ್ಯ ಶಾಲೆಗೆ ತಪ್ಪದೆ ಬರಬೇಕು. ಸರ್ಕಾರದ ಸವಲತ್ತುಗಳನ್ನು ಪಡೆದು ಒಳ್ಳೆಯ ವಿದ್ಯಾಭ್ಯಾಸ ಪಡೆಯಬೇಕು ಎಂದು ತಿಳಿಸಿದರು. ಗ್ರಾಪಂ ಸದಸ್ಯ ವೈ.ಎಲ್. ಶಿಂದೆ ಪಠ್ಯಪುಸ್ತಕ ವಿತರಿಸಿದರು. ವೈ.ಎಲ್. ಶಿಂದೆ ಇತರರು ಇದ್ದರು.
ಸಂತಸದ ಕಲಿಕೆ ಅಗತ್ಯ
ಹೊಸರಿತ್ತಿ: ಮನೆ ವಾತಾವರಣದ ಕಲಿಕೆಯನ್ನು ಮಗು ಇಷ್ಟಪಡುತ್ತದೆ. ಮನೆ ವಾತಾವರಣದಲ್ಲಿ ಆದ ಕಲಿಕೆ ದೃಢವಾದ ಕಲಿಕೆ ಆಗಲು ಸಾಧ್ಯ. ಶಾಲೆಗಳಲ್ಲಿನ ಮನೆ ವಾತಾವರಣದ ಕಲಿಕೆ ಪ್ರೋತ್ಸಾಹಿಸಬೇಕಾಗಿದೆ ಎಂದು ಇಲ್ಲಿನ ಗಾಂಧಿ ಗ್ರಾಮೀಣ ಗುರುಕುಲದ ಮುಖ್ಯಾಧ್ಯಾಪಕ ಆರ್.ಎಸ್. ಪಾಟೀಲ ಅಭಿಪ್ರಾಯಪಟ್ಟರು. ಇಲ್ಲಿನ ಶ್ರೀ ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಯಲ್ಲಿ ಶುಕ್ರವಾರ ಶಾಲಾ ಪ್ರಾರಂಭೋತ್ಸವದ ನಿಮಿತ್ತ ಏರ್ಪಡಸಿದ್ದ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಪಾಟೀಲ ಮಾತನಾಡಿದರು. ಪಾಲಕರಾಗಿ ಆಗಮಿಸಿದ್ದ ಶ್ರೀಶೈಲ ಮಠಪತಿ ಮಾತನಾಡಿ, ಸರ್ಕಾರಿ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸದಾಶಿವ ಬೆಳುಲದ ಮಾತನಾಡಿ, ಪ್ರಯತ್ನ, ಸತತ ಪರಿಶ್ರಮದಿಂದ ಬದುಕನ್ನು ಬೆಳಗಿಸಿಕೊಳ್ಳಬಹುದು ಎಂದರು. ಶಿಕ್ಷಕರಾದ ನಾಗೆಂದ್ರ ವಡ್ಡರ, ಎಂ.ಜಿ. ಹಿರೇಮಠ, ಎಸ್.ಎಂ. ಚಳಗೇರಿ ಮಾತನಾಡಿದರು. ಎಸ್.ಸಿ. ಕಲ್ಲಮಠ ಸ್ವಾಗತಿಸಿದರು. ಎನ್.ಎಂ. ಹಸರಡ್ಡಿ ವಂದಿಸಿದರು. ಗುರುರಾಜ ಭಂಡಾರಿ ನಿರೂಪಿಸಿದರು
ಅವಧಿ ವಿಸ್ತರಣೆ
ಹಾವೇರಿ: ಸಮಾಜ ಕಲ್ಯಾಣ ಇಲಾಖೆಯಿಂದ ತಾಲೂಕಿನಲ್ಲಿ ನಡೆಯುತ್ತಿರುವ ಮೆಟ್ರಿಕ್ಪೂರ್ವ ಬಾಲಕ, ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿ , ಆಶ್ರಮ ಶಾಲೆಯಲ್ಲಿ ಖಾಲಿರುವ ಸ್ಥಾನಗಳಿಗೆ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಮೇ 30ರ ಬದಲಾಗಿ ಜೂನ್ 10ರವರೆಗೆ ಅವಧಿ ವಿಸ್ತರಿಸಲಾಗಿದೆಯೆಂದು ಹಾವೇರಿ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಜಗದೀಶ ಎಸ್. ಹೆಬ್ಬಳ್ಳಿ ತಿಳಿಸಿದ್ದಾರೆ.
8 ಆಡು, 30 ಕುರಿ ಸಾವು
ರಾಣಿಬೆನ್ನೂರು: 3 ದಿನಗಳಿಂದ ತಾಲೂಕಿನಾದ್ಯಂತ ಸುರಿದ ಮಳೆಗೆ ತಾಲೂಕಿನ ಮೇಡ್ಲೆರಿ ಗ್ರಾಮದಲ್ಲಿ ಕುರಿಯ ದೊಡ್ಡಿಯ ಮೇಲೆ ಮನೆ ಗೋಡೆ ಕುಸಿದು ಬಿದ್ದ ಪರಿಣಾಮ 30 ಕುರಿಗಳು, 8 ಆಡುಗಳು ಸಾವನ್ನಪ್ಪಿದ್ದು, ದೊಡ್ಡಿಯಲ್ಲಿ ಮಲಗಿದ್ದ ಚಂದ್ರಪ್ಪ ನಿಂಗಪ್ಪ ಹಕಾರಿ, ಜಯಪ್ಪ ಶಿವಪ್ಪ ಹಕಾರಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಪ್ಪೆಲೂರು ಹೋಬಳಿ ವ್ಯಾಪ್ತಿಗೊಳಪಟ್ಟ ಅಂತರವಳ್ಳಿ ಗ್ರಾಮದ ಹೊಲದಲ್ಲಿ ನಿಂತಿದ್ದ ರಮೇಶ ಬಣಕಾರಗೆ ಸೇರಿದ 3 ಕುರಿ, 6 ಮರಿ, ಧರ್ಮಪ್ಪ ಪೂಜಾರ ಎಂಬುವರ 8 ಕುರಿ ಸೇರಿದಂತೆ ಒಟ್ಟು 17 ಕುರಿಗಳು ಮಳೆಯ ನೀರಿನಲ್ಲಿ ತೇಲಿ ಹೋಗಿರುತ್ತವೆ ಎಂದು ತಾಲೂಕು ಪಶು ವೈದ್ಯ ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ಪರಮೇಶ ಎನ್. ಹುಬ್ಬಳ್ಳಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

