ಸುದ್ದಿ ಸಂಕ್ಷೇಪ
ದಾನಶೀಲತೆ ಬೆಳೆಸಿ: ಹರಕುಣಿ
ಶಿಗ್ಗಾಂವಿ: ಯುವ ಸಮುದಾಯದಲ್ಲಿ ನಾಯಕತ್ವದ ಗುಣದ ಜತೆಗೆ ದಾನದ ಮನೋಭಾವ ಬೆಳೆದರೆ ಸಮಾಜದಲ್ಲಿ ಪರಿವರ್ತನೆ ಸಾಧ್ಯ ಎಂದು ಶಿವಶಂಕರ ಹರಕುಣಿ ಹೇಳಿದರು. ಶೀಲವಂತ ಸೋಮಾಪುರ ಗ್ರಾಮದಲ್ಲಿ ಗಜಾನನ ಸೇವಾ ಸಮಿತಿಯ ದೇವಸ್ಥಾನ ಕಟ್ಟಡದ ಅಡಿಗಲ್ಲು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅವರು, ಭಗವಂತನ ಕರುಣೆ ಅವಶ್ಯ. ದೇವರಿಗೆ ಸಮರ್ಪಿಸಿಕೊಂಡು ದಾನದ ರೂಪದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಸಹಕರಿಸಿದಾಗ ಅವನಿಂದ ಹೆಚ್ಚಿನ ಫಲ ಪಡೆಯಬಹುದಾಗಿದೆ ಎಂದರು. ದೇವಸ್ಥಾನಕ್ಕೆ ಭೂಮಿ ದಾನ ಮಾಡಿದ ರಾಮಪ್ಪ ಯಲ್ಲಪ್ಪ ಹರಕುಣಿ ಶಂಕುಸ್ಥಾಪನೆ ನೆರವೇರಿಸಿದರು. ದಾನಿಗಳನ್ನು ಗೌರವಿಸಿದರು. ಸಮಿತಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಸೂರಗೊಂಡ, ಬಾಹುಬಲಿ ಅಕ್ಕಿ, ಬಸವರಾಜ ಎಲಿಗಾರ, ಬಾಹುಬಲಿ ಉಪಾಧ್ಯ, ಈರಪ್ಪ ಬುದಿಹಾಳ, ಶೇಕಪ್ಪ ಎಲಿಗಾರ, ಮಲ್ಲೇಶಪ್ಪ ಹೋತನಹಳ್ಳಿ, ಸೋಮನಗೌಡ್ರ ನಿಂಗನಗೌಡ್ರ. ಶಿವಶಂಕ್ರಪ್ಪ ಬೂದಿಹಾಳ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

