ಹಾವೇರಿ

ನಾಗನೂರ ಗ್ರಾಪಂಗೆ ಆಯ್ಕೆ

Published On :

ಹಾವೇರಿ: ತಾಲೂಕಿನ ನಾಗನೂರ ಗ್ರಾಪಂ ಉಪಾಧ್ಯಕ್ಷರಾಗಿ ಹೊಳಿಯಪ್ಪ ಸುಭಾಸಪ್ಪ ಸೂರದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿ, ತಹಸೀಲ್ದಾರ್ ಪಂಪನಗೌಡ ಮೇಲ್ಸೀಮೆ ಅವರ ಸಮ್ಮುಖದಲ್ಲಿ ಆಯ್ಕೆ ಮಾಡಲಾಗಿದೆ. ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.
ಪಿಎಚ್‌ಡಿ ಪ್ರದಾನ
ಹಾವೇರಿ: ಬ್ಯಾಡಗಿ ತಾಲೂಕಿನ ಬಿ.ಎನ್. ಹನುಮಗೌಡ (ಪಾಟೀಲ) ಗಣಿಶಾಸ್ತ್ರ ವಿಷಯದಲ್ಲಿ ಮಂಡಿಸಿದ ಮ್ಯಾಗ್ನೆಟೋ ಹೈಡ್ರೋ-ಡೈನಾಮಿಕ್ ಅನಾಲಿಸಿಸ್ ಆಫ್ ಸ್ಟೆಪ್ ಬೇರಿಂಗ್ಸ್ ವಿತ್ ಕಪಲ್-ಸ್ಟ್ರೆಸ್ ಫ್ಲುಯಿಡ್ಸ್ ಎಂಬ ಮಹಾ ಪ್ರಬಂಧಕ್ಕೆ ಗುಲ್ಬರ್ಗ ವಿಶ್ವವಿದ್ಯಾಲಯ ಪಿ.ಎಚ್.ಡಿ. ಪದವಿ ಪ್ರದಾನ ಮಾಡಿದೆ. ಪ್ರೊ೤ ಎನ್.ಬಿ. ನಡುವಿನಮನಿ ಮಾರ್ಗದರ್ಶಕರಾಗಿದ್ದರು. ಬಿ.ಎನ್. ಹನುಮಗೌಡ ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಲ್ಲಿ ಗಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದಾರೆ.
ಎಸ್‌ಡಿಎಂಸಿಗೆ ಆಯ್ಕೆ
ಬ್ಯಾಡಗಿ: ಬನ್ನಿಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ  ಎಸ್ಡಿಎಂಸಿ (ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ) ಅಧ್ಯಕ್ಷರಾಗಿ ಜಗದೀಶ ಕೆರಕರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕುಸುಮವ್ವ ಮಾಸಣಗಿ, ಸದಸ್ಯರಾಗಿ ಮಲಕಪ್ಪ ಶಿವಪ್ಪನವರ, ಕರಬಸಪ್ಪ ಕೋಣನವರ, ನಾಗಪ್ಪ ಕರವಜ್ಜನವರ, ಬಸಪ್ಪ ನೆಲೋಗಲ್ಲ, ಭೀಮಪ್ಪ ಸರವಂದ, ಕರಬಸಪ್ಪ ಕಮತರ, ಸುರೇಶ ಜಲ್ಲಳ್ಳಿ, ಪ್ರಕಾಶ ಪೆದ್ದರ, ಮಂಜುಳ ಹೊಸೂರ, ಕರಬಸವ್ವ ಬುಡ್ಡನಗೌಡ್ರ, ನೀಲವ್ವ ಚೊಕ್ಕನಗೌಡ್ರ ಆಯ್ಕೆಯಾಗಿರುವುದಾಗಿ ಮುಖ್ಯ ಶಿಕ್ಷಕ ಎಂ.ಎಂ. ಪಾಟೀಲ ತಿಳಿಸಿದ್ದಾರೆ.
ಪತ್ರಕರ್ತರಿಗೆ ಪ್ರಶಸ್ತಿ
ಹಾವೇರಿ: ಬೆಂಗಳೂರಿನ ಅಭಿಮಾನಿ ಪ್ರಕಾಶನ ಸಂಸ್ಥೆ ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಕನ್ನಡ ಪತ್ರಿಕೆಗಳಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸುವ ಲೇಖನ-ವರದಿಗಳನ್ನು ಬರೆದ ಪತ್ರಕರ್ತರಿಗೆ ಪ್ರತಿ ವರ್ಷ ರು. 10 ಸಾವಿರ ನಗದು ಪ್ರಶಸ್ತಿ ನೀಡಲು ರು. 1 ಲಕ್ಷ ದತ್ತಿ ಸ್ಥಾಪಿಸಿದೆ. 2012-13ನೇ ಸಾಲಿನ ಪ್ರಶಸ್ತಿಗಾಗಿ ಸಾಮಾಜಿಕ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಪ್ರಕಟಿತ ಲೇಖನ-ವರದಿಗಳನ್ನು ನ. 25ರೊಳಗಾಗಿ ಆಹ್ವಾನಿಸಲಾಗಿದೆ. ಸ್ವವಿವರಗಳನ್ನು ಬಿಳಿಹಾಳೆಯಲ್ಲಿ ಬರೆದು ಅಭಿಮಾನಿ ಪ್ರಶಸ್ತಿ-2012, ಅಭಿಮಾನಿ ಪ್ರಶಸ್ತಿ-2013 ಎಂದು ಪ್ರತ್ಯೇಕವಾಗಿ ದಾಖಲಿಸಿ, ಆಯಾ ಅವಧಿಗೆ ಒಂದು ಲೇಖನ ಕಳುಹಿಸಬೇಕು. ಕನ್ನಡ ದೈನಿಕ-ವಾರ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ಬರೆದಿರುವ ವರದಿ ಲೇಖನಿಗಳಿಗೆ ಮಾತ್ರ ಪ್ರಶಸ್ತಿಗೆ ಅವಕಾಶ. ಲೇಖನ-ವರದಿಗಳಲ್ಲಿ ಬೈಲೈನ್ ಪ್ರಕಟವಾಗದಿದ್ದಲ್ಲಿ ಸಂಬಂಧಿಸಿದ ಪತ್ರಿಕೆಯ ಸಂಪಾದಕರಿಂದ ದೃಢೀಕರಣ ಪತ್ರವನ್ನು ಕಳುಹಿಸಬೇಕು. ಅರ್ಜಿಯನ್ನು ನಿಗದಿತ ದಿನಾಂಕದೊಳಗಾಗಿ ಕಾರ್ಯದರ್ಶಿ, ಕರ್ನಾಟಕ ಮಾಧ್ಯಮ ಅಕಾಡೆಮಿ, ಪೋಡಿಯಂ ಬ್ಲಾಕ್, ವಿಶ್ವೇಶ್ವಯರಯ್ಯ ಕೇಂದ್ರ, ಡಾ. ಬಿ.ಆರ್. ಅಂಬೇಡ್ಕರ ವೀಥಿ, ಬೆಂಗಳೂರು ಅವರಿಗೆ ಸಲ್ಲಿಸಬೇಕು ಎಂದು ಅಕಾಡೆಮಿ ಕಾರ್ಯದರ್ಶಿಎಸ್. ಶಂಕರಪ್ಪ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.