ಇಂದು ಸದ್ಭಾವನಾ ಸಮಾವೇಶ
ಹಾನಗಲ್ಲ: ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಹಾನಗಲ್ಲ ತಾಲೂಕು ಘಟಕ ಹಜರತ ಟಿಪ್ಪುಸುಲ್ತಾನರ ಜನ್ಮದಿನಾಚರಣೆ, ಕನ್ನಡ ರಾಜ್ಯೋತ್ಸವ, ಸದ್ಭಾವನಾ ಸಮಾವೇಶವನ್ನು ನ. 21ರಂದು ಹಾನಗಲ್ಲಿನಲ್ಲಿ ಆಯೋಜಿಸಿದೆ. ಬೆಳಗ್ಗೆ 11ಕ್ಕೆ ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ನಡೆಯುವ ಸಮಾರಂಭದ ಸಾನ್ನಿಧ್ಯವನ್ನು ಹುಬ್ಬಳ್ಳಿ ಮೂರು ಸಾವಿರ ಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ವಹಿಸುವರು. ಸೈಯದ ಸರ್ವರಬಾಷಾ ಪೀರಜಾದೆ ಹಾಗೂ ಅಹ್ಮದಬಾಷಾ ಪೀರಜಾದೆ ನೇತೃತ್ವ ವಹಿಸುವರು. ಶಾಸಕ ಮನೋಹರ ತಹಶೀಲ್ದಾರ ಸಮಾರಂಭ ಉದ್ಘಾಟಿಸುವರು. ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್‌ರಜಾಕ ಮುಲ್ಲಾ ಜ್ಯೋತಿ ಬೆಳಗಿಸುವರು. ನಗರ ಘಟಕದ ಅಧ್ಯಕ್ಷ ಮಹ್ಮದಹನೀಪ ಹುಡೇದ ಅಧ್ಯಕ್ಷತೆ ವಹಿಸುವರು. ನೆಹರು ಯುವ ಕೇಂದ್ರದ ಮಹಾನಿರ್ದೇಶಕ ಸಲೀಂ ಅಹ್ಮದ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ನಾಗರಾಜ ಛಬ್ಬಿ, ಮಾಜಿ ಸಚಿವ ಸಿ.ಎಂ. ಉದಾಸಿ, ಗಣ್ಯರಾದ ಟಿ. ಈಶ್ವರ, ಮಲ್ಲನಗೌಡ್ರು ವೀರನಗೌಡ್ರ, ಅನಿತಾ ಶಿವೂರ, ಸತೀಶ ದೇಶಪಾಂಡೆ, ರಾಜಶೇಖರ ಸಾಲಿಮಠ, ಜಿ.ಎಂ.ಮುಲ್ಲಾ, ಎಂ.ಎ.ಲೋಹಾರ ಭಾಗವಹಿಸುವರು.
ಗಾಯನ ಚಿಂತನಮಾಲೆ ಇಂದು
ಹಾವೇರಿ: ಜಿಲ್ಲಾ ಕಸಾಪ ಘಟಕದಿಂದ ನ. 21ರಂದು ಸಂಜೆ 6ಕ್ಕೆ ನಗರದ ಸರ್ಕಾರಿ ನೌಕರರ ಭವನದಲ್ಲಿ ನವೋದಯ ಕವಿ ಕಾವ್ಯ ಗಾಯನ ಚಿಂತನ ಮಾಲೆ ಹಮ್ಮಿಕೊಳ್ಳಲಾಗಿದೆ. ಡಾ. ವಿಜಯಕುಮಾರ ಕಟಗಿಹಳ್ಳಿಮಠ ಉದ್ಘಾಟಿಸಲಿದ್ದಾರೆ. ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಮಾಸಣಗಿ ಅಧ್ಯಕ್ಷತೆ ವಹಿಸುವರು. ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಬಿ. ಕಿನ್ನಾಳ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಡಾ.ಶ್ರೀಪಾದ ಶೆಟ್ಟಿ ಅವರು ದಿನಕರ ದೇಸಾಯಿ ಬದುಕ ಬರಹ ಕುರಿತು ಉಪನ್ಯಾಸ ನೀಡಲಿದ್ದಾರೆ. ವಾಣಿ ಸುರೇಶ ಅವರಿಂದ ಕಾವ್ಯ ಗಾಯನ ನಡೆಯಲಿದೆ ಎಂದು ಕಸಾಪ ಗೌರವ ಕಾರ್ಯದರ್ಶಿ ವಿರುಪಾಕ್ಷಪ್ಪ ಪಡಿಗೋದಿ ತಿಳಿಸಿದ್ದಾರೆ.
ಬಸವರಾಜ ಮಾಕನೂರು ನಿಧನ
ರಾಣಿಬೆನ್ನೂರು: ನಗರದ ಮೇಡ್ಲೆರಿ ರಸ್ತೆಯ ಪಂಪಾ ನಗರದ ನಿವಾಸಿಯಾದ ಬಸವರಾಜ ಗಿರಿಯಪ್ಪ ಮಾಕನೂರು (80) ಅವರು ಬುಧವಾರ ಬೆಳಗ್ಗೆ 10-30 ಗಂಟೆಗೆ ನಿಧನರಾದರು. ಅಂತ್ಯಕ್ರಿಯೆ ಗುರುವಾರ ಬೆಳಗ್ಗೆ 12 ಗಂಟೆಗೆ ಸ್ವ ಗ್ರಾಮ ಯಕಲಾಸಪುರದ ರುದ್ರಭೂಮಿಯಲ್ಲಿ ನಡೆಯಲಿದೆ. ಮೃತರಿಗೆ ಇಬ್ಬರು ಪುತ್ರರು, ಪತ್ನಿ, ಅಪಾರ ಬಂಧುಗಳು ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

