ಹಾವೇರಿ

ಇಂದು ವಸ್ತು ಪ್ರದರ್ಶನ

Published On :

ಹಾವೇರಿ: ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ನ. 22ರಂದು ನಗರದ ಶಿವಲಿಂಗೇಶ್ವರ ಡಿಇಡಿ ಕಾಲೇಜಿನಲ್ಲಿ ಜರುಗಲಿದ್ದು, ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಜಿಲ್ಲೆಯ ಎಲ್ಲ ತಾಲೂಕಿನ ಆಯ್ದ ಮಾದರಿಗಳನ್ನು ಪ್ರದರ್ಶಿಸಲಾಗುವುದು. ವಿದ್ಯಾರ್ಥಿ ವಿಭಾಗದಿಂದ ಒಟ್ಟು 123 ಮಾದರಿಗಳು ಹಾಗೂ ಶಿಕ್ಷಕರ ವಿಭಾಗದಿಂದ 7 ಮಾದರಿಗಳು ಪ್ರದರ್ಶನಗೊಳ್ಳಲಿವೆ. ವಸ್ತು ಪ್ರದರ್ಶನವು ಬೋಧನಾ ಕಲಿಕಾ ಪ್ರಕ್ರಿಯೆಗೆ ಪೂರಕವಾಗಿದ್ದು, ಜಿಲ್ಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಪ್ರದರ್ಶನವನ್ನು ವಿಕ್ಷಿಸಿ, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಡಯಟ್ ಪ್ರಾಚಾರ್ಯ ಎಂ.ಡಿ. ಬಳ್ಳಾರಿ ತಿಳಿಸಿದ್ದಾರೆ.
24ರಿಂದ ಪೈಕಾ ಗ್ರಾಮೀಣ ಕ್ರೀಡಾಕೂಟ
ಹಾವೇರಿ: ಬಳ್ಳಾರಿ ಜಿಪಂ, ಯುವ ಸಬಲೀಕರಣ ಮತ್ತು ಇಲಾಖೆ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರ ಆಶ್ರಯದಲ್ಲಿ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಪೈಕಾ ಗ್ರಾಮೀಣ ಕ್ರೀಡಾಕೂಟ ಗುಂಪು-3 (ಹ್ಯಾಂಡ್‌ಬಾಲ್, ಪುಟ್‌ಬಾಲ್, ಬಾಸ್ಕೆಟ್‌ಬಾಲ್) ಕ್ರೀಡಾಕೂಟವನ್ನು ನ. 24ರಿಂದ 26ರ ವರೆಗೆ ಬಳ್ಳಾರಿ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ. ಈ ರಾಜ್ಯ ಮಟ್ಟದ ಗ್ರಾಮೀಣ(ಪೈಕಾ) ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಆಯಾ ಜಿಲ್ಲೆಯ ಜಿಲ್ಲಾ ಮಟ್ಟದ ಸಂಘಟನೆಯಲ್ಲಿ ಭಾಗವಹಿಸಿ ಹ್ಯಾಂಡ್‌ಬಾಲ್‌ನಲ್ಲಿ ಪ್ರಥಮ ಸ್ಥಾನ ಪಡೆದ 12 ಬಾಲಕರು, 12 ಬಾಲಕಿಯರು, ಪುಟ್‌ಬಾಲ್‌ನಲ್ಲಿ 16 ಬಾಲಕರು ಹಾಗೂ ಬಾಲಕಿಯರು ಮತ್ತು ಬಾಸ್ಕೆಟ್‌ಬಾಲ್‌ನಲ್ಲಿ 12 ಬಾಲಕರು, 12 ಬಾಲಕಿಯರು ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳು ಮಾತ್ರ ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಹಾವೇರಿ ಜಿಲ್ಲೆಯ ಪೈಕಾ ಗ್ರಾಮೀಣ ಕ್ರೀಡಾಪಟುಗಳು ನ. 24ರಂದು ಬೆಳಗ್ಗೆ 8 ಗಂಟೆಯೊಳಗಾಗಿ ಬಳ್ಳಾರಿ ಜಿಲ್ಲಾ ಕ್ರೀಡಾಂಗಣದಲ್ಲಿ ವರದಿ ಮಾಡಿಕೊಳ್ಳಬೇಕೆಂದು ವೆ. ಮುತ್ತುಕಾಮಾಚ್ಚಿ ತಿಳಿಸಿದ್ದಾರೆ.
ನೋಂದಣಿ ಅವಧಿ ವಿಸ್ತರಣೆ
ಹಾವೇರಿ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿ ಹಾವೇರಿಯಿಂದ ಜಿಲ್ಲೆಯ ಅಭ್ಯರ್ಥಿಗಳಿಗೆ ಪರಿಸರ ಜಾಗೃತಿ ಮೂಡಿಸುವ ಸಲುವಾಗಿ ಪ್ರಸಕ್ತ ಸಾಲಿನಲ್ಲಿ ಪರಿಸರ ಮಿತ್ರ ಶಾಲಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಿಲ್ಲೆಯ 1300 ಶಾಲೆಗಳಿಗೆ ಈಗಾಗಲೇ ಪತ್ರ ಬರೆದು ನ. 15ರೊಳಗಾಗಿ ಶಾಲೆಗಳ ಹೆಸರನ್ನು ನೋಂದಾಯಿಸಿಕೊಳ್ಳಲು ತಿಳಿಸಲಾಗಿತ್ತು. ಆದರೆ, ಇದುವರೆಗೆ ಕೆಲವೆ ಶಾಲೆಗಳು ಮಾತ್ರ ಭಾಗವಹಿಸುವ ಕುರಿತು ಸ್ವೀಕೃತಿ ಪತ್ರಗಳನ್ನು ಕಳುಹಿಸಿವೆ. ಆದ್ದರಿಂದ ಪರಿಸರ ಮಿತ್ರ ಶಾಲಾ ಕಾರ್ಯಕ್ರಮಕ್ಕೆ ಶಾಲೆಗಳ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ನ. 30ರ ವರೆಗೆ ಕಾಲಾವಕಾಶವನ್ನು ನೀಡಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ಶಾಲೆಗಳು ನಿಗದಿತ ದಿನಾಂಕದೊಳಗಾಗಿ, ಪ್ರಾದೇಶಿಕ ಕಚೇರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಮೊದಲನೆ ಮಹಡಿ, ಪಟವೇಗಾರ ಕಾಂಪ್ಲೆಕ್ಸ್, ಹೆಸ್ಕಾಂ ಪಕ್ಕ, ಪಿ.ಬಿ. ರಸ್ತೆ, ಹಾವೇರಿ ಇವರಿಗೆ ಸ್ವೀಕೃತಿ ಪತ್ರ ಕಳುಹಿಸುವಂತೆ ಪರಿಸರ ಅಧಿಕಾರಿ ಈ. ಪ್ರಕಾಶ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.