ಕಾರ್ತಿಕೋತ್ಸವ ಇಂದು
ಹಾನಗಲ್ಲ: ಪಟ್ಟಣದ ಪುರಾತನ ವೆಂಕಟೇಶ್ವರ ದೇವಸ್ಥಾನದಲ್ಲಿ ನ. 30ರಂದು ಸಂಜೆ 7 ಗಂಟೆಗೆ ಕಾರ್ತಿಕೋತ್ಸವ, ಅಷ್ಟಾವಧಾನ, ಮಹಾಮಂಗಳಾರತಿ ಸೇವೆ ನಡೆಯಲಿದ್ದು, ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ವೆಂಕಟೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಹಾಗೂ ಬ್ರಾಹ್ಮಣ ಮಹಾಸಭಾ ತಾಲೂಕು ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.
ಮಾನೆಗೆ ಸಚಿವ ಸ್ಥಾನ ನೀಡಲು ಮನವಿ
ರಾಣಿಬೆನ್ನೂರು: ಸಂತೋಷ ಲಾಡ್ ರಾಜಿನಾಮೆಯಿಂದ ತೆರವಾಗಿರುವ ಸಚಿವ ಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಅವರಿಗೆ ಅವಕಾಶ ನೀಡಿ, ಮರಾಠಾ ಸಮಾಜದವರಿಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವುದಾಗಿ ಮರಾಠಾ ಸಮಾಜದ ಮುಖಂಡ ಮರಿಯಪ್ಪ ಹಲವಾಗಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸ್ವಾರ್ಥ ಸಾಧನೆಗಾಗಿ ಕೆಲವರು ಹೋರಾಟ ನಡೆಸುತ್ತಾ ಸಂತೋಷ ಲಾಡ್ ರಾಜಿನಾಮೆ ಕೊಡಿಸಿದ್ದೇವೆ ಎಂದು ಬೀಗುತ್ತಿದ್ದಾರೆ. ಮುಂದೆ ಲಾಡ್ ಮತ್ತೆ ಸಚಿವಲರಾಗುವುದರಲ್ಲಿ ಎರಡು ಮಾತಿಲ್ಲ. ವಾರ್ತಾ ಸಚಿವರಾಗಿದ್ದ ಸಂತೋಷ ಲಾಡ್ ರಾಜಿನಾಮೆಯಿಂದ ರಾಜ್ಯದ 68 ಲಕ್ಷ ಮರಾಠಾ ಜನಾಂಗಕ್ಕೆ ನೋವಾಗಿದೆ. ತೆರವಾಗಿರುವ ಸ್ಥಾನವನ್ನು ಸಮಾಜದ ಮತ್ತೊಬ್ಬ ಶಾಸಕ ಶ್ರೀನಿವಾಸ ಮಾನೆ ಅವರಿಗೆ ನೀಡಬೇಕು ಎಂದು ಒತ್ತಾಯಿಸಲಾಗಿದೆ. ದಾವಣಗೆರೆ ಬೊಮ್ಮನಹಳ್ಳಿ ಮಠದ ಗುರುದೇವ ಸ್ವಾಮೀಜಿ, ರಾಣಿಬೆನ್ನೂರು ನಗರಸಭೆ ಸದಸ್ಯೆ ರತ್ನಾ ಪುನೀತ, ಡಾ ಮೋಹನ ಪುನೀತ, ನಾಗರಾಜ ಜಾಧವ, ಮಹೇಶ ಜಾಧವ, ನಿಂಗಮ್ಮ ಸುರ್ವೆ, ಶೇಖರ ಸೂರ್ವೆ, ಶಂಕರ ತಾವರಗೊಂದಿ, ಪ್ರಕಾಶ ಕೂಳಜಿ ಅವರೂ ಈ ಒತ್ತಾಯ ಮಂಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

